ಸುಧಾ ಗೋಪಾಲಕೃಷ್ಣನ್ ಇನ್ಫಿಯ ಅತಿ ಹೆಚ್ಚು ಷೇರುಗಳ ಒಡತಿ
ಬೆಂಗಳೂರು, ಜ.12: ಇನ್ಫೋಸಿಸ್ ಸಹ ಸ್ಥಾಪಕ ಎಸ್ ಗೋಪಾಲಕೃಷ್ಣನ್ ಅವರ ಪತ್ನಿ ಸುಧಾ ಗೋಪಾಲಕೃಷ್ಣನ್ ಅವರ ಬಳಿ ಅತಿ ಹೆಚ್ಚು ಇನ್ಫೋಸಿಸ್ ಷೇರುಗಳನ್ನು ಹೊಂದಿದ್ದು ರೋಹನ್ ಮೂರ್ತಿ ಅವರನ್ನು ಹಿಂದಿಕ್ಕಿದ್ದಾರೆ.
ದೇಶದ ಎರಡನೇ ಅತಿ ದೊಡ್ಡ ಸಾಫ್ಟ್ ವೇರ್ ರಫ್ತು ಸಂಸ್ಥೆಯ ಪ್ರವರ್ತಕ ಷೇರುದಾರರ ಪಟ್ಟಿಯಲ್ಲಿ ಸುಧಾ ಗೋಪಾಲಕೃಷ್ಣನ್ ಅವರು ಅಗ್ರಸ್ಥಾನಕ್ಕೇರಿದ್ದಾರೆ. ಸುಧಾ ಅವರ ಬಳಿ ಇರುವ ಒಟ್ಟು ಷೇರುಗಳ ಸಂಖ್ಯೆ 2,45,89,250 ದಾಟುತ್ತದೆ.[ಇನ್ಫೋಸಿಸ್ಸಿಗೆ ಶುಭ ಶುಕ್ರವಾರ, ಅಪರಿಮಿತ ಲಾಭ!]
ಅಕ್ಟೋಬರ್-ಡಿಸೆಂಬರ್ 2014ರ ತ್ರೈಮಾಸಿಕದ ಗಣತಿಯಂತೆ ಒಟ್ಟಾರೆ ಷೇರುಗಳಿಗೆ ಹೋಲಿಸಿದರೆ ಶೇ.2.14 ಷೇರುಗಳನ್ನು ಸುಧಾ ಅವರು ಹೊಂದಿದ್ದಾರೆ.ಸುಧಾ ಅವರ ಬಳಿಕ ಎನ್.ಆರ್.ನಾರಾಯಣಮೂರ್ತಿ ಅವರ ಮಗ ರೋಹನ್ ಮೂರ್ತಿ ಅವರು ಎರಡನೇ ಸ್ಥಾನದಲ್ಲಿದ್ದು, ಶೇ.1.38 ಷೇರುಗಳನ್ನು ಹೊಂದಿದ್ದಾರೆ.

ಸ್ಥಾಪಕರು, ಅವರ ಕುಟುಂಬ ಸದಸ್ಯರು ಸೇರಿದಂತೆ ಇನ್ಫೋಸಿಸ್ನ ಪ್ರವರ್ತಕರು ಶೇ.13.08 ಷೇರುಗಳನ್ನು ಹೊಂದಿದ್ದಾರೆ ಎಂದು ಇನ್ಫೋಸಿಸ್ ಕಂಪನಿ ತಿಳಿಸಿದೆ. ಮೂರ್ತಿ ಕುಟುಂಬ ಶೇ 3.44 ಷೇರು ಪಾಲು ಹೊಂದಿದ್ದರೆ, ನಿಲೇಕಣಿ ಕುಟುಂಬ ಶೇ 2.29 ರಷ್ಟು ಪಾಲು ಹೊಂದಿದೆ. [ಇನ್ಫಿ ಮೂರ್ತಿ ಮಗ ರೋಹನ್ ಈಗ ಉಪಾಧ್ಯಕ್ಷ]
ಕಳೆದ ಡಿಸೆಂಬರ್ ತೈಮಾಸಿಕದ ಕೊನೆಗೆ ಇನ್ಫೋಸಿಸ್ ಸಹ ಸ್ಥಾಪಕ ನಾರಾಯಣ ಮೂರ್ತಿ, ನಂದನ್ ನಿಲೇಕಣಿ, ದಿನೇಶ್ ಕೆ, ಎಸ್ ಡಿ ಶಿಬುಲಾಲ್ ಅವರ ಪತ್ನಿ ಕುಮಾರಿ ಶಿಬುಲಾಲ್ ಹಾಗೂ ಇತರೆ ಕುಟುಂಬ ಸದಸ್ಯರೆಲ್ಲರೂ ಸೇರಿ ಸುಮಾರು 6,484 ಕೋಟಿ ರು ಮೌಲ್ಯದ 32.6 ಮಿಲಿಯನ್ ಷೇರುಗಳನ್ನು ಮಾರಾಟ ಮಾಡಿದರು. ಗೋಪಾಲಕೃಷ್ಣನ್ ಅವರು ಶೇ 3.41 ರಷ್ಟು ಪಾಲು ಹೊಂದಿದ್ದರು. (ಪಿಟಿಐ)
-
Bengaluru Property: ಬೆಂಗಳೂರು ಮೆಟ್ರೋದ ಈ ಮಾರ್ಗಗಳಲ್ಲಿ ಭೂಮಿ, ಪ್ರಾಪರ್ಟಿ ಬೆಲೆ ಶೇ 20% ರಿಂದ ಶೇ 30% ಹೆಚ್ಚಳ -
PUC Revaluation: ಸ್ಕ್ಯಾನ್ ಪ್ರತಿ ಪಡೆದವರ ಉತ್ತರ ಪತ್ರಿಕೆ ಮರುಮೌಲ್ಯಮಾಪನ; ಶುಲ್ಕ, ಪ್ರಮುಖ ದಿನಾಂಕಗಳು -
Gold Rings: ಅಕ್ಷಯ ತೃತೀಯಕ್ಕೆ ಖರೀದಿಸಬಹುದಾದ ಆಕರ್ಷಕ ವಿನ್ಯಾಸದ 5 ಚಿನ್ನದ ಉಂಗುರಗಳು -
Career Break: ಅಲಾರಂ ಇಲ್ಲದ ಜೀವನ ಬೇಕು ಎಂದು ಗೂಗಲ್ ಕೆಲಸ ಬಿಟ್ಟ ಯುವ ಟೆಕ್ಕಿ, ನೆಟ್ಟಿಗರ ಮೆಚ್ಚುಗೆ -
Bengaluru Mumbai Vande Bharat: ಬೆಂಗಳೂರು - ಮುಂಬೈ ಹೊಸ ರೈಲು: ಮಹಾ ಸಿಎಂ ಮಹತ್ವದ ಟ್ವೀಟ್, ಯಾವಾಗ ಪ್ರಾರಂಭ -
Gold Price Drop: ವಾರದ ಮೊದಲ ದಿನವೇ ಚಿನ್ನ-ಬೆಳ್ಳಿ ದರ ಭರ್ಜರಿ ಕುಸಿತ, ಇಂದಿನ ದರಪಟ್ಟಿ -
ಎರಡು ಬಾರಿ ಕೆಲಸ ಕಳೆದುಕೊಂಡ ಯುವಕನಿಂದ ರೆಸ್ಟೋರೆಂಟ್ ಬ್ಯುಸಿನೆಸ್: ಈಗ ತಿಂಗಳಿಗೆ 1.3 ಕೋಟಿ ರೂ. ಆದಾಯ -
School Holiday: ರಾಜ್ಯದಲ್ಲಿ 2026-27ನೇ ಸಾಲಿನ ಶೈಕ್ಷಣಿಕ ವೇಳಾಪಟ್ಟಿ ಪ್ರಕಟ: ದಸರಾ, ಬೇಸಿಗೆ ರಜೆ, ಕೆಲಸದ ದಿನಗಳ ವಿವರ -
E-Khata: ಜನ ಸೇವಕ ಯೋಜನೆ: ಮನೆಯಲ್ಲೇ ಕುಳಿತು ಇ - ಖಾತಾ ಪಡೆಯಿರಿ, ಈ 5 ದಾಖಲೆಗಳಿದ್ದರೆ ಸಾಕು -
ಬ್ರೋ.. ಒಂದು ವಿಕೆಟ್ ಕಿತ್ತರೂ ನನ್ನ ಫೋಟೋ ಹಾಕಿಲ್ಲ ಯಾಕೆ?; ಆರ್ಸಿಬಿ ಮೆಂಟರ್ ಡಿಕೆಗೆ ಕೃನಾಲ್ ಪಾಂಡ್ಯ ಪ್ರಶ್ನೆ -
ಮಂಡ್ಯದಲ್ಲಿ 500 ಎಕರೆ ಆಟೋ ಕೈಗಾರಿಕಾ ಹಬ್: ಎಂಬಿ ಪಾಟೀಲ, ಎಚ್ಡಿ ಕುಮಾರಸ್ವಾಮಿ ಮಹತ್ವದ ಚರ್ಚೆ -
Karnataka Rains: ರಾಜ್ಯಾದ್ಯಂತ ಏಪ್ರಿಲ್ 20ರ ತನಕ ಮಳೆ, 6 ಜಿಲ್ಲೆಗಳಿಗೆ ಉಷ್ಣ ಅಲೆ ಮುನ್ಸೂಚನೆ












Click it and Unblock the Notifications