ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇನ್ಫಿ ಮೂರ್ತಿ ಮಗ ರೋಹನ್ ಈಗ ಉಪಾಧ್ಯಕ್ಷ

By Mahesh
|
Google Oneindia Kannada News

ಬೆಂಗಳೂರು, ಆ.25: ದೇಶದ ಪ್ರಮುಖ ಐಟಿ ಸಂಸ್ಥೆ ಇನ್ಫೋಸಿಸ್ ನ ಸಹ ಸ್ಥಾಪಕ ಎನ್ ಆರ್ ನಾರಾಯಣ ಮೂರ್ತಿ ಅವರು ಮತ್ತೊಮ್ಮೆ ಇನ್ಫೋಸಿಸ್ ಬೋರ್ಡ್ ಗೆ ಮರಳಿದ ಬೆನ್ನಲ್ಲೇ ಇನ್ಫೋಸಿಸ್ ನಲ್ಲಿ ಭಾರಿ ಬದಲಾವಣೆಗಳು ಗೋಚರಿಸತೊಡಗಿವೆ.

ಎನ್ ಆರ್ ನಾರಾಯಣ ಮೂರ್ತಿ ಅವರನ್ನು ಕಾರ್ಯಕಾರಿ ಚೇಮರ್ನ್ ಆಗಿ ನೇಮಕವಾದ ಜತೆ ಪುತ್ರ ರೋಹನ್ ಅವರು ಈಗ ಸಂಸ್ಥೆ ಉಪಾಧ್ಯಕ್ಷ ಪಟ್ಟಕ್ಕೇರುವುದು ಖಾತ್ರಿಯಾಗಿದೆ.ಈ ಬಗ್ಗೆ ಅಧಿಕೃತ ಘೋಷಣೆ ಮಾತ್ರ ಬಾಕಿಯಿದೆ.

ನಾರಾಯಣ ಮೂರ್ತಿ ಅವರ ಮಗ ರೋಹನ್ ಮೂರ್ತಿ ಅವರು ತಮ್ಮ ಅಪ್ಪನಿಗೆ ಕಾರ್ಯಕಾರಿ ಸಹಾಯಕನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹಾರ್ವರ್ಡ್, ಕಾರ್ನೆಲ್ ವಿವಿಯಲ್ಲಿ ಓದಿ ಬಂದಿರುವ, ಕಂಪ್ಯೂಟರ್ ಸೈನ್ಸ್ ನಲ್ಲಿ ಪಿಎಚ್ ಡಿ ಮಾಡಿರುವ ರೋಹನ್ ಅವರ ಆಯ್ಕೆ ಬೋರ್ಡ್ ನಲ್ಲಿ ಯಾರೂ ಸೊಲ್ಲೆತ್ತಿಲ್ಲ.

ಮೊಬೈಲ್ ಕಂಪ್ಯೂಟಿಂಗ್, ನಿಸ್ತಂತು ಸೇವೆ ಬಗ್ಗೆ ರೋಹನ್ ಸಂಶೋಧನೆ ನಡೆಸಿದ್ದಾರೆ. ಇವರಿಗೂ ಕೂಡಾ ಬೋರ್ಡ್ ವರ್ಷಕ್ಕೆ 1 ರು ನಂತೆ ಟೋಕನ್ ಪರಿಹಾರ ಧನ ನೀಡುತ್ತಿದೆ. 31ರ ಹರೆಯದ Rohan Murty (ಮೂರ್ತಿ ಸೀನಿಯರ್ ನಂತೆ murthy ಎಂದು ರೋಹನ್ ಬಳಸುವುದಿಲ್ಲ) ಅವರು ಕಂಪನಿಯ ಹಿರಿಯ ಮ್ಯಾನೇಜ್ಮೆಂಟ್ ತಂಡದ ಭಾಗವಾಗಲಿದ್ದಾರೆ.

ಕುಟುಂಬ ರಾಜಕಾರಣ ಬಗ್ಗೆ ಮಾತನಾಡುವ ಉದ್ಯಮಿಗಳು ಈಗ ತಮ್ಮ ಕಂಪನಿಗಳಲ್ಲಿ ತಮ್ಮ ಮಕ್ಕಳನ್ನು ಸೇರಿಸಿಕೊಂಡು ಉನ್ನತ ಸ್ಥಾನ ನೀಡುವುದರ ಬಗ್ಗೆ ಈಗಾಗಲೇ ಚರ್ಚೆ ಎದ್ದಿದೆ.. ರೋಹನ್ ಆಯ್ಕೆ ಬಗ್ಗೆ ಟ್ವಿಟರ್ ಸಿಕ್ಕಿರುವ ಪ್ರತಿಕ್ರಿಯೆಗಳನ್ನು ಇಲ್ಲಿ ನೀಡಲಾಗಿದೆ ನೋಡಿ...

ಹೇಳಿಕೆ ಏನಾಯ್ತು

ಹೇಳಿಕೆ ಏನಾಯ್ತು

ಇನ್ಫೋಸಿಸ್ ಸ್ಥಾಪಕ ಎನ್ ಆರ್ ನಾರಾಯಣ ಮೂರ್ತಿ ಸೇರಿದಂತೆ ಸಹ ಸ್ಥಾಪಕರು ತಮ್ಮ ಮಕ್ಕಳು ಕಂಪನಿ ಸೇರದಂತೆ ನೋಡಿಕೊಂಡಿದ್ದರು. ಕುಟುಂಬ ರಾಜಕೀಯದ ಛಾಯೆ ಬೀಳದಂತೆ ಇಲ್ಲಿವರೆಗೂ ನಿಗಾವಹಿಸಿದ್ದರು. ಈ ಬಗ್ಗೆ ಸಂಸ್ಥೆ ಪ್ರಮುಖರು ಅನೇಕ ಬಾರಿ ಹೇಳಿಕೆಯನ್ನು ನೀಡಿದ್ದರು. ಅದರೆ, ಈಗ ಇನ್ಫಿ ಮೂರ್ತಿ ಅವರ ಮಗ ರೋಹನ್ ಅವರನ್ನು ಉನ್ನತ ಸ್ಥಾನದಲ್ಲಿ ಕೂರಿಸಲಾಗಿದೆ. ಇದಕ್ಕೆ ಬೋರ್ಡ್ ಒಪ್ಪಿಗೆ ಇದೆ ಎನ್ನುವುದು ಗಮನಾರ್ಹ

ಕುಟುಂಬ ರಾಜಕೀಯ

ಇನ್ಫೋಸಿಸ್ ತೆಗೆದುಕೊಂಡ ನಿರ್ಣಯದ ಬಗ್ಗೆ ಟ್ವೀಟರ್ ನಲ್ಲಿ ಸಿದ್ದಾರ್ಥ್ ಪ್ರಶ್ನಿಸಿದ್ದಾರೆ

ಮುಂದೇನು?

ಮುಂದೇನು?

ರೋಹನ್ ಮೂರ್ತಿ ಅವರ ನೇಮಕಾತಿಗೆ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯ ಒಪ್ಪಿಗೆ ಸೂಚಿಸಬೇಕಾಗಿದೆ. ಈ ಪ್ರಕ್ರಿಯೆ ಮುಗಿದ ಮೇಲೆ ಇನ್ಫೋಸಿಸ್ ಸಂಸ್ಥೆ ಅಧಿಕೃತವಾಗಿ ರೋಹನ್ ಅವರನ್ನು ಉಪಾಧ್ಯಕ್ಷ ಎಂದು ಘೋಷಿಸಲಿದೆ.

ಸರಕು ಹಾಗೂ ಸೇವೆ ತೆರಿಗೆ ಕಾಯ್ದೆ ಪ್ರಕಾರ ಸಂಸ್ಥೆ ನಿರ್ದೇಶಕ ಅಥವಾ ಆತನ ಕುಟುಂಬದ ಸದಸ್ಯರು ಈ ರೀತಿ ಉನ್ನತ ಸ್ಥಾನಕ್ಕೇರಿದರೆ ಅದಕ್ಕೆ ಸರ್ಕಾರದ ಒಪ್ಪಿಗೆ ಅಗತ್ಯ.ತಾಂತ್ರಿಕವಾಗಿ ನೋಡಿದರೆ ಐಟಿ ಸಂಸ್ಥೆಗೆ ಈ ನಿಯಮ ಅನ್ವಯವಾಗುವುದಿಲ್ಲ. ಆದರೂ ಇನ್ಫೋಸಿಸ್ ಸಂಸ್ಥೆ ಸಚಿವಾಲಯದ ಒಪ್ಪಿಗೆ ಬಯಸಿದೆ.

ಸುಧೀರ್ ನಿರ್ಗಮನ ಏಕೆ?

ಇನ್ಫೋಸಿಸ್ ಸಂಸ್ಥೆಯ ಹಿರಿಯ ಅಧಿಕಾರಿ ಸುಧೀರ್ ನಿರ್ಗಮನಕ್ಕೆ ರೋಹನ್ ಪ್ರವೇಶ ಕಾರಣವೇ?

ನಾರಾಯಣಮೂರ್ತಿಗೆ ಪ್ರಶ್ನೆ

ಇನ್ಫೋಸಿಸ್ ಚೇರ್ಮನ್ ನಾರಾಯಣಮೂರ್ತಿ ಈಗ ಏನು ಹೇಳುತ್ತಾರೆ?

English summary
Infosys has decided to appoint Rohan Murty, son of Infosys chairman NR Narayana Murthy, as vice-president. Rohan Murty currently working as his father’s executive assistant. He accompanies the chairman to all important meetings and also holds strategy sessions with senior Infosys executives.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X