ಷೇರು ಮಾರುಕಟ್ಟೆಯಲ್ಲಿ ಮಹಾ ಕುಸಿತ, ಲಕ್ಷ ಕೋಟಿ ರು ನಷ್ಟ
ಮುಂಬೈ, ಆಗಸ್ಟ್ 24: ಮುಂಬೈ ಷೇರು ಮಾರುಕಟ್ಟೆಯಲ್ಲಿ ಉಂಟಾಗಿರುವ ಮಹಾ ಕುಸಿತದಿಂದಾಗಿ ಡಾಲರ್ ವಿರುದ್ಧ ರೂಪಾಯಿ ವಿನಿಮಯ ಮೌಲ್ಯ, ಮಾರುಕಟ್ಟೆಯಲ್ಲಿ ಕಂಪನಿಗಳ ಮೌಲ್ಯ ಕುಸಿತ, ಚಿನ್ನದ ಬೆಲೆ ಏರಿಕೆ ಹೀಗೆ ಷೇರುಪೇಟೆಯಲ್ಲಿ ಸೋಮವಾರ ಅಲ್ಲೋಲ ಕಲ್ಲೋಲ ಸಂಭವಿಸಿದೆ.
ಷೇರುಪೇಟೆಯಲ್ಲಿ ಸೋಮವಾರದ ವಹಿವಾಟು ಮುಕ್ತಾಯದ ವೇಳೆಗೆ 1,700 ಅಂಕಗಳು ಅಥವಾ ಶೇಕಡಾ 6.22ರಷ್ಟು ಭಾರಿ ಕುಸಿತ ಉಂಟಾಗಿದೆ. ಟ್ರೇಡಿಂಗ್ ಶುರುವಾದ ಕೆಲ ನಿಮಿಷಗಳಲ್ಲೇ 2 ಲಕ್ಷ ಕೋಟಿ ಮೌಲ್ಯದ ಕಳೆದುಕೊಂಡಿದ್ದು, ಮೊದಲ ಬಾರಿಗೆ ಕಂಪನಿಗಳ ಗಳಿಕೆ ಮೌಲ್ಯದ ಪ್ರಮಾಣ 100 ಟ್ರಿಲಿಯನ್ ಲಕ್ಷ ಕೋಟಿ ರು ಮೌಲ್ಯಕ್ಕಿಂತ ಕೆಳಗಿಳಿದಿದೆ. ಒಟ್ಟಾರೆ, ಸುಮಾರು 7 ಲಕ್ಷ ಕೋಟಿ ರೂಪಾಯಿ ನಷ್ಟವುಂಟಾಗಿದೆ. [ಷೇರು ಮಾರುಕಟ್ಟೆ ಸಾವಿರ ಅಂಕ ಕುಸಿತಕ್ಕೆ 5 ಕಾರಣಗಳು]
ಈ ಹಿಂದಿನ ಮಹಾಪತನದ ಮುಖ್ಯಾಂಶಗಳು:
* ಇದಕ್ಕೂ ಮುನ್ನ ಜೂನ್ 18ರಂದು ಒಟ್ಟಾರೆ ಹೂಡಿಕೆದಾರರ ಕಂಪನಿಗಳ ಮೌಲ್ಯ 100 ಟ್ರಿಲಿಯನ್ ಲಕ್ಷ ಕೋಟಿ ರು ಗಿಂತ ಸ್ವಲ್ಪ ಕೆಳಗಿತ್ತು. [ಷೇರುಪೇಟೆ : ಯಾವುದು ಇಳಿಕೆ, ಯಾವುದು ಏರಿಕೆ?]
* ಇದೇ ಮೊದಲ ಬಾರಿಗೆಒಟ್ಟಾರೆ ಹೂಡಿಕೆದಾರರ ಮೌಲ್ಯ ಆಗಸ್ಟ್ 24ರಂದು 100 ಟ್ರಿಲಿಯನ್ ಲಕ್ಷ ಕೋಟಿ ರು ಗಿಂತ ಕೆಳಗಿಳಿದಿದೆ.
* ಷೇರುಪೇಟೆಯ ಪಟ್ಟಿಯಲ್ಲಿರುವ ಕಂಪನಿಗಳ ಹೂಡಿಕೆ ಮೌಲ್ಯ 99.15 ಲಕ್ಷ ಕೋಟಿ ರು ಗಿಂತ ಕೆಳಗಿಳಿದಿದೆ. ವಹಿವಾಟು ಆರಂಭಕ್ಕೂ ಮುನ್ನ 102.3 ಲಕ್ಷ ಕೋಟಿ ರು ನಂತೆ ಇತ್ತು. ಇನ್ನಷ್ಟು ಅಂಕಿ ಅಂಶ ಮುಂದಿದೆ ಓದಿ... (ಪಿಟಿಐ)

ಡಾಲರ್ ವಿರುದ್ಧ ರೂಪಾಯಿ ವಿನಿಮಯ ಮೌಲ್ಯ
* ಡಾಲರ್ ವಿರುದ್ಧ ರೂಪಾಯಿ ವಿನಿಮಯ ಮೌಲ್ಯ ಕಳೆದ 2 ವರ್ಷಗಳಲ್ಲೇ ಕನಿಷ್ಠ ಮಟ್ಟವಾದ 66.65ಕ್ಕೆ ಕುಸಿದಿದೆ.
* ಇಂಟ್ರಾ ಡೇ ಟ್ರೇಡಿಂಗ್ ನಲ್ಲಿ ಬಿಎಸ್ ಇಯಲ್ಲಿ 1,000 ಅಂಕಗಳನ್ನು ಕಳೆದುಕೊಂಡಿತು. ಒಟ್ಟಾರೆ 1,624 ಅಂಕಗಳಷ್ಟು ಕುಸಿತವಾಗಿದೆ.
* ಬಿಎಸ್ ಇನಲ್ಲಿ ಸುಮಾರು 4000ಕ್ಕೂ ಅಧಿಕ ಟ್ರೇಡಿಂಗ್ ಕಂಪನಿ ಹಾಗೂ 2.7 ಕೋಟಿ ಹೂಡಿಕೆದಾರರಿದ್ದಾರೆ.

ಚಿನ್ನದ ಬೆಲೆ ಮೇಲಕ್ಕೇರಿದೆ
ಚಿನ್ನದ ಬೆಲೆ ಮೇಲಕ್ಕೇರಿ 10 ಗ್ರಾಂಗೆ 27,397 ರೂಪಾಯಿ ನಷ್ಟಿದೆ. ಶ್ರಾವಣ ಮಾಸದ ಆರಂಭದಲ್ಲಿ ಚಿನ್ನದ ಬೆಲೆ ಇಳಿಕೆ, ಹಬ್ಬದ ವಾತಾವರಣ, ಚಿನ್ನದ ಬೇಡಿಕೆ ಏರಿಕೆಯಾಗುವ ಲಕ್ಷಣಗಳು ಕಂಡು ಬಂದಿತ್ತು.
ಆಗಸ್ಟ್ ಮೊದಲ ವಾರದಲ್ಲಿ ಪ್ರತಿ 10 ಗ್ರಾಂಗೆ 25,000 ರು ಗೆ ಕುಸಿದಿತ್ತು. ಆದರೆ, ಈಗ ಎಲ್ಲಾ ಉಲ್ಟಾ ಪಲ್ಟಾ ಆಗುತ್ತಿದೆ. [ನಿಮ್ಮ ನಗರದ ಚಿನ್ನದ ದರ ಒಂದೇ ಕ್ಲಿಕ್ ನಲ್ಲಿ]

ಒಟ್ಟಾರೆ ಮಾರುಕಟ್ಟೆ ಮೌಲ್ಯ
ಮಾರುಕಟ್ಟೆ ಯಲ್ಲಿ ಹೂಡಿಕೆದಾರರ ಮೌಲ್ಯ total investor wealth 2003ರಲ್ಲಿ 10 ಲಕ್ಷ ಕೋಟಿ ರು ನಷ್ಟಿತ್ತು. 2009ರಲ್ಲಿ 50 ಲಕ್ಷ ಕೋಟಿ ರು ಗೇರಿತ್ತು. ನವೆಂಬರ್ 2014ರಲ್ಲಿ ಮೊದಲ ಬಾರಿಗೆ 100 ಲಕ್ಷ ಕೋಟಿ ರು ಮೌಲ್ಯಕ್ಕೇರಿತ್ತು. ಷೇರುಪೇಟೆಯ ಪಟ್ಟಿಯಲ್ಲಿರುವ ಕಂಪನಿಗಳ ಹೂಡಿಕೆ ಮೌಲ್ಯ 99.15 ಲಕ್ಷ ಕೋಟಿ ರು ಗಿಂತ ಕೆಳಗಿಳಿದಿದೆ.

ಆರ್ ಬಿಐ ಗವರ್ನರ್ ರಘುರಾಮ್ ರಾಜನ್ ಅಭಯ
ಚೀನಾ ತನ್ನ ಕರೆನ್ಸಿಯಲ್ಲಿ ಮಾಡಿದ ಬದಲಾವಣೆಗಳು, ಅಮೆರಿಕದ ಫೆಡರಲ್ ಬ್ಯಾಂಕ್ ನೀತಿ, ಪೆಟ್ರೋಲಿಯಂ ದರ ಇಳಿಕೆ ಮಾರುಕಟ್ಟೆಯ ಮೇಲೆ ಪರಿಣಾಮ ಬೀರುತ್ತಿದೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ. ದೇಶದ ಆರ್ಥಿಕತೆ ಅಡಿಪಾಯ ಭದ್ರವಾಗಿದ್ದು, ಉಳಿದವರಿಗಿಂತ ನಮ್ಮ ಸ್ಥಿತಿ ಉತ್ತಮವಾಗಿದೆ ಎಂದು ಆರ್ ಬಿಐ ಗವರ್ನರ್ ರಘುರಾಮ್ ರಾಜನ್ ಅಭಯ ನೀಡಿದ್ದಾರೆ.

ಟಾಪ್ ಟೆನ್ ಮಹಾ ಕುಸಿತ
ಟಾಪ್ ಟೆನ್ ಮಹಾ ಕುಸಿತಗಳಲ್ಲಿ ಇದು 4ನೇ ಸ್ಥಾನದಲ್ಲಿದೆ. 2008ರಲ್ಲಿ ಜನವರಿ 22ರಲ್ಲಿ 2,272.93 ಅಂಕ ಕಳೆದುಕೊಂಡಿತ್ತು. ಈಗ ಇಂಟ್ರಾ ಡೇ ನಲ್ಲಿ ಸೆನ್ಸೆಕ್ಸ್ 1,153.16 ಅಂಕಗಳನ್ನು ಕಳೆದುಕೊಂಡಿದೆ. 2008ರಲ್ಲಿ ಒಟ್ಟು 8 ಬಾರಿ ಸರಿ ಸುಮಾರು 958 ರಿಂದ 2,272ರಷ್ಟು ಅಂಕಗಳನ್ನು ಕಳೆದುಕೊಂಡಿದ್ದು ವಿಶೇಷ. [ಪೂರ್ಣ ವಿವರ ಇಲ್ಲಿದೆ]

ಗಳಿಸಿದವರೇ ಇಲ್ಲ ಕಳೆದುಕೊಂಡವರೇ ಎಲ್ಲಾ
ಎನ್ಎಂಡಿಸಿ ಮಾತ್ರ ಇಂಟ್ರಾ ಡೇ ಟ್ರೇಡ್ ನಲ್ಲಿ ಶೇ 0.32ರಷ್ಟು ಏರಿಕೆ ಕಂಡಿತ್ತು. ನಂತರ ಗಳಿಸಿದವರೇ ಇಲ್ಲದ್ದಂತಾಗಿ ಕಳೆದುಕೊಂಡವರ ಪಟ್ಟಿಯೇ ಹೆಚ್ಚಾಯಿತು. ವೇದಾಂತ ಶೇ 15.30ರಷ್ಟು, ಟಾಟಾ ಸ್ಟೀಲ್ ಶೇ 13.11ರಷ್ಟು ಕಳೆದುಕೊಂಡರೆ, GAIL, ONGC, ಬಜಾಜ್ ಆಟೋ, ಸಿಪ್ಲಾ, ಐಸಿಐಸಿಐ, ರಿಲಯನ್ಸ್, ಹಿಂಡಲ್ಕೋ, ಆಕ್ಸಿಸ್ ಬ್ಯಾಂಕ್ ಟಾಪ್ ಟೆನ್ ನಷ್ಟ ಅನುಭವಿಸಿವೆ.