ಚಿನ್ನದ ದರ ಎಷ್ಟಿದೆ ಅಂಥ ಗೊತ್ತಾದ್ರೆ ಖುಷಿ ಆಗ್ತು!
ಬೆಂಗಳೂರು, ಆಗಸ್ಟ್ 06: ಕಳೆದ ಐದು ವರ್ಷಗಳ ಹಿಂದೆ ಇದ್ದ ದರಕ್ಕೆ ಚಿನ್ನ ಕುಸಿಯಲಿದೆ ಎಂದು ಮಾರುಕಟ್ಟೆ ತಜ್ಞರಾದ ಇಂಡಿಯಾ ರೇಟಿಂಗ್ ಅಂಡ್ ರಿಸರ್ಚ್ (Ind-Ra) ಇತ್ತೀಚೆಗೆ ನೀಡಿದ್ದ ವರದಿ ಬಹುತೇಕ ನಿಜವಾಗುತ್ತಿದೆ. ಗುರುವಾರದ ವಹಿವಾಟು ಅಂತ್ಯಕ್ಕೆ ನಾಲ್ಕು ವರ್ಷಗಳ ಹಿಂದಿನ ದರಕ್ಕೆ ಕುಸಿದಿದೆ.
ಚಿನ್ನದ ಖರೀದಿದಾರರಿಗೆ ಶುಭ ಕಾಲ ಹೀಗೆ ಮುಂದುವರೆಯುವ ಲಕ್ಷಣಗಳು ಕಂಡು ಬಂದಿದೆ. ಕಳೆದ ಐದು ವರ್ಷಗಳ ಹಿಂದೆ ಇದ್ದ ದರಕ್ಕೆ ಚಿನ್ನ ಕುಸಿಯುವುದು ಖಾತ್ರಿಯಾಗಿದೆ. [ನಿಮ್ಮ ನಗರದ ಚಿನ್ನದ ದರ ಒಂದೇ ಕ್ಲಿಕ್ ನಲ್ಲಿ]
ಚಿನ್ನಾಭರಣ ವ್ಯಾಪಾರಿಗಳಿಂದ ತಗ್ಗಿದ ಬೇಡಿಕೆಯ ನಡುವೆ ದುರ್ಬಲ ಜಾಗತಿಕ ಪ್ರವೃತ್ತಿಯಿಂದಾಗಿ ಸತತ ಮೂರನೇ ದಿನವೂ ಚಿನ್ನದ ಬೆಲೆಗಳು ಕುಸಿದಿವೆ. ಅಮೆರಿಕದ ಫೆಡರಲ್ ಬ್ಯಾಂಕ್ ನ ಬಡ್ಡಿದರದ ನಿರ್ಧಾರ ಚಿನ್ನದ ದರ ಇಳಿಕೆ ಮೇಲೆ ಗಣನೀಯ ಪರಿಣಾಮ ಬೀರುವ ಸಾಧ್ಯತೆಯಿದೆ.

ಸತತವಾಗಿ ಕುಸಿದ ದರ: ಚಿನ್ನದ ದರ ಸತತವಾಗಿ ನಾಲ್ಕನೇ ದಿನವೂ ಕುಸಿತ ಕಂಡಿದ್ದು, ಗುರುವಾರದಂದು ಚಿನಿವಾರ ಪೇಟೆಯಲ್ಲಿ 40 ರು ಕಳೆದುಕೊಂಡು ಪ್ರತಿ 10 ಗ್ರಾಂಗೆ 25,000 ರು ಗೆ ಕುಸಿದಿದೆ. [ಐದು ವರ್ಷಗಳ ಹಿಂದಿನ ದರಕ್ಕೆ ಕುಸಿತ?]
ದೇಶಿ ಮಾರುಕಟ್ಟೆಯಲ್ಲಿ ನಾಲ್ಕು ವರ್ಷಗಳ ಹಿಂದಿನ ದರವಾದ 24,980ರುನಂತೆ ಬಹುತೇಕ ವಹಿವಾಟು ನಡೆಸಿದೆ. ಈ ನಡುವೆ ಬೆಳ್ಳಿ ಸ್ವಲ್ಪ ಚೇತರಿಕೆ ಪಡೆದುಕೊಂಡು 33,800 ಪ್ರತಿ ಕೆಜಿಗೆ ಏರಿಕೆಯಾಗಿದೆ.
ಜಾಗತಿಕ ಮಾರುಕಟ್ಟೆಯಲ್ಲಿ ಐದು ವರ್ಷಗಳ ಹಿಂದಿನ ಮೌಲ್ಯಕ್ಕೆ ಕುಸಿದೆ. ಸಿಂಗಪುರದಲ್ಲಿ ಪ್ರತಿ ಔನ್ಸಿಗೆ 1,085.08 ಯುಎಸ್ ಡಾಲರ್ ನಷ್ಟಿತ್ತು.
ಅಮೆರಿಕದ ಫೆಡರಲ್ ರಿಸರ್ವ್ 2006ರಿಂದೀಚಿಗೆ ಇದೇ ಮೊದಲ ಬಾರಿಗೆ ಬಡ್ಡಿದರಗಳನ್ನು ಹೆಚ್ಚಿಸಲು ಸಜ್ಜಾಗಿರುವುದರಿಂದ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಗಳು ಕಳೆದೆರಡು ವರ್ಷಗಳಲ್ಲಿನ ಅತೀ ದೊಡ್ಡ ಮಾಸಿಕ ಕುಸಿತದತ್ತ ಧಾವಿಸುತ್ತಿದೆ, ಹೀಗಾಗಿ ಇಲ್ಲಿ ಹಳದಿ ಲೋಹದ ಬೆಲೆಗಳ ಮೇಲೆ ಒತ್ತಡಕ್ಕೆ ಕಾರಣವಾಗಿದೆ.(ಪಿಟಿಐ)












Click it and Unblock the Notifications