Sensex: ಇರಾನ್ ಕದನವಿರಾಮ ಸಂಭ್ರಮಿಸಿದ ಷೇರುಪೇಟೆ: ಸೂಚ್ಯಂಕಗಳು ಮೇಲ್ಮುಖ
Stock Market Updates Today: ಸತತ ನಾಲ್ಕು ದಿನಗಳಿಂದ ತಕ್ಕ ಮಟ್ಟಿನ ಏರಿಕೆ ಕಾಣುತ್ತಿದ್ದ ಷೇರುಪೇಟೆಯಲ್ಲಿ ಇಂದು ಬುಧವಾರ ಮಹಾಜಿಗಿತ ಸಂಭವಿಸಿದೆ. ಇರಾನ್ ಮೇಲಿನ ಯುದ್ಧವನ್ನು ಎರಡು ವಾರಗಳ ಕಾಲ ತಾತ್ಕಲಿಕವಾಗಿ ತಡೆ ಹಿಡಿದಿರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸುತ್ತಿದ್ದಂತೆ ಬುಧವಾರ ತೆರೆಯುತ್ತಿದ್ದಂತೆ ಅಮೆರಿಕಾದ ಷೇರುಗಳು ಸೇರಿದಂತೆ ಷೇರುಪೇಟೆ ಸೂಚ್ಯಂಕಗಳು ಮೇಲ್ಮುಖವಾದವು. ಇದು ಹೂಡಿಕೆದಾರರ ಮೊಗದಲ್ಲಿ ಮಂದಹಾಸಕ್ಕೆ ಕಾರಣವಾಯಿತು.
ಇರಾನ್ ಮತ್ತು ಅಮೆರಿಕಾ-ಇಸ್ರೇಲ್ ಮಧ್ಯದ ಯುದ್ಧಕ್ಕೆ ಇಂದು ಬುಧವಾರ ತಾತ್ಕಾಲಿಕ ಬ್ರೇಕ್ ಬಿದ್ಧಿದೆ. ಕದನ ವಿರಾಮ ಘೋಷಣೆ ಆಗಿದೆ. ಅದಕ್ಕು ಮೊದಲು ಗಡುವು ಮೀರಿದ್ದರಿಂದ ಇರಾನ್‌ಗೆ ಮೇಲೆ ಮಂಗಳವಾರ (ಏ.7) ರಾತ್ರಿಯಿಂದಲೇ ಯುಸ್ ಭೀಕರ ದಾಳಿ ಮಾಡಿತು. ಬುಧವಾರ ಬೆಳಗ್ಗೆ ಎರಡು ವಾರ ಯುದ್ಧಕ್ಕೆ ಬ್ರೇಕ್ ನೀಡುವುದಾಗಿ ಯುಎಸ್ ತಿಳಿಸುತ್ತಿದ್ದಂತೆ ಷೇರುಪೇಟೆಯಲ್ಲಿ ಚೇತರಿಕೆ ಕಂಡು ಬಂದಿದೆ.

ಭಾರೀ ಜಿಗಿದ ಸೆನ್ಸೆಕ್ಸ್
ಇಂದು ಸೆನ್ಸೆಕ್ಸ್ ಶೇ. 3.71 ಅಂದರೆ 2,775 ಪಾಯಿಂಟ್‌ಗಳಷ್ಟು ಏರಿಕೆಯಾಗಿ 77,392 ಕ್ಕೆ ತಲುಪಿತು. ದಿನದ ಅಂತ್ಯದಲ್ಲಿ ಗರಿಷ್ಠ ಮಟ್ಟವನ್ನು ತಲುಪುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ. ಅದೇ ರೀತಿ, ಆಟೋ, ರಿಯಾಲ್ಟಿ, ಬ್ಯಾಂಕಿಂಗ್, ಐಟಿ ಮತ್ತು ಲೋಹ ವಲಯದ ಷೇರುಗಳ ಖರೀದಿಯ ನಡುವೆಯೂ ನಿಫ್ಟಿ ಶೇ. 3.52 ಅಥವಾ 815 ಪಾಯಿಂಟ್‌ಗಳ ಏರಿಕೆಯಾಗಿ 23,938 ಕ್ಕೆ ಮುಟ್ಟಿದೆ.
ಇನ್ನೂ ರಿಯಲ್ ಎಸ್ಟೇಟ್, ಆಟೋ, ಬ್ಯಾಂಕಿಂಗ್ ಮತ್ತು ಫಾರ್ಮಾ ಷೇರುಗಳು ಶೇ. 6 ರಷ್ಟು ಅಧಿಕ ವಹಿವಾಟು ದಾಖಲಿಸಿವೆ. ಇಂದು ಷೇರುಪೇಟೆ ಮುಗಿಯುವ ಹೊತ್ತಿಗೆ ಮತ್ತಷ್ಟು ಮೇಲ್ಮುಖ ಚಲನೆ ಕಂಡು ಬರಲಿದೆ ಎಂದು ಆರ್ಥಿಕ ತಜ್ಞರು ಅಂದಾಜಿಸಿದ್ದಾರೆ.
ವಿವಿಧ ಷೇರುಗಳ ಬೆಲೆ ಏರಿಕೆ
ಯುದ್ಧದಿಂದಾಗಿ ಜಾಗತಿಕ ಇಂಧನ ಪೂರೈಕೆಗೆ ನಿರ್ಣಾಯಕ ಜಲಮಾರ್ಗ ಮುಚ್ಚಿದ್ದರಿಂದ ಐದು ವಾರಗಳಿಂದ ಷೇರು ಬೆಲೆಗಳು ದಿವಾಳಿಯಾಗಿದ್ದವು, ಇದೀಗ ಮತ್ತೆ ಮೇಲ್ಮುಖವಾಗಿ ಸಾಗುವ ಲಕ್ಷಣ ಕಾಣಿಸಿವೆ. ಡೌ ಜೋನ್ಸ್ ಕೈಗಾರಿಕಾ ಸರಾಸರಿಗೆ ಸಂಬಂಧಿಸಿದ ಫ್ಯೂಚರ್‌ಗಳು 1,000 ಪಾಯಿಂಟ್ ಗೂ ಹೆಚ್ಚು (ಶೇ 2.29ರಷ್ಟು) ಏರಿಕೆ ಕಂಡಿವೆ. ಎಸ್ ಆಂಡ್ ಪಿ 500 ಫ್ಯೂಚರ್‌ಗಳು ಶೇ.2.52ರಷ್ಟು ಹೆಚ್ಚಾದರೆ, ನಾಸ್ಡಾಕ್ 100 ಫ್ಯೂಚರ್‌ಗಳು ಶೇ.3.2ರಷ್ಟು ಏರಿಕೆಯಾಗಿವೆ ಆಗಿವೆ ಎಂದು ವರದಿ ಆಗಿದೆ.
ತಾತ್ಕಾಲಿಕ ಕದನ ವಿರಾಮ ಘೊಷಣೆ ಬಳಿಕ ವೆಸ್ಟ್ ಟೆಕ್ಸಾಸ್ ಇಂಟರ್ಮೀಡಿಯೇಟ್ ಕಚ್ಚಾ ತೈಲದ ಬೆಲೆಗಳು
ಬ್ಯಾರೆಲ್‌ಗೆ ಸುಮಾರು 14ರಷ್ಟು ರಷ್ಟು ಕುಸಿದು ಬ್ಯಾರಲ್‌ಗೆ 97.17 ದರಕ್ಕೆ ತಲುಪಿದೆ. ಅಂತಾರಾಷ್ಟ್ರೀಯ ಮಾನದಂಡ ಬ್ರೆಂಟ್ ಪ್ರತಿ ಬ್ಯಾರೆಲ್‌ಗೆ ಶೇ.12 ಕ್ಕಿಂತ ಹೆಚ್ಚು ಕುಸಿದು 95.55 ಕ್ಕೆ ಮುಟ್ಟಿದೆ.
ಯುದ್ಧಕ್ಕೆ ಸಂಬಂಧಿಸಿದಂತೆ ಯುಎಸ್ ಅಧ್ಯಕ್ಷ ಡೊನಾಲ್ಡ ಟ್ರಂಪ್ "ಇರಾನ್‌ನ ಮೇಲಿನ ಎಲ್ಲ ವಿಧದ ದಾಳಿಯನ್ನು ಎರಡು ವಾರಗಳ ಕಾಲ ಸ್ಥಗಿತಗೊಳಿಸುವುದಾಗಿ' ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಯುಎಸ್ ಇರಾನ್‌ನಿಂದ 10 ಅಂಶಗಳ ಪ್ರಸ್ತಾವನೆ ಸ್ವೀಕರಿಸಿದ್ದೇವೆ. ಮಾತುಕತೆ ನಡೆಸಲು ಸಿದ್ಧರಿದ್ದೇವೆ' ಎಂದು ಅವರು ಹೇಳಿದ್ದಾರೆ. ಇದರ ಹೊರತಾಗಿಯು ಮಧ್ಯಪ್ರಾಚ್ಯದಲ್ಲಿ ಬಾಂಬ್‌ಗಳ ಸದ್ದು ಕೇಳಿ ಬಂದಿದೆ.












Click it and Unblock the Notifications