ಸ್ವಲ್ಪ ಸಿಹಿ, ಸ್ವಲ್ಪ ಕಹಿ! ಮನೆಸಾಲ, FD ಬಡ್ಡಿದರ ಇಳಿಕೆ

ನವದೆಹಲಿ, ಸೆಪ್ಟೆಂಬರ್ 09: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಗ್ರಾಹಕರಿಗೆ ಸ್ವಲ್ಪ ಸಿಹಿ ಮತ್ತು ಸ್ವಲ್ಪ ಕಹಿ ಸುದ್ದಿಯನ್ನು ಬ್ಯಾಂಕ್ ನೀಡಿದೆ.

ಎಸ್ಬಿಐ ಮನೆ ಸಾಲದ ಬಡ್ಡಿದರವನ್ನು ಕೊಂಚ ಇಳಿಸಿದ್ದು, ಅದರೊಂದಿಗೆ ಸ್ಥಿರ ಠೇವಣಿ(FD)ಯ ಬಡ್ಡಿದರವನ್ನೂ ಇಳಿಸಿದೆ.

ಇತ್ತೀಚೆಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ರೆಪೋ ದರವನ್ನು ಶೇ. 1.1 ರಷ್ಟು ಕಡಿತಗೊಳಿಸಿದ ನಂತರ ಎಸ್ ಬಿಐ ಈ ನಿರ್ಧಾರ ತೆಗೆದುಕೊಂಡಿದೆ. ರೆಪೊ ದರದ ಬದಲಾವಣೆಗೆ ತಕ್ಕಂತೆ ಬಡ್ಡಿದರದಲ್ಲಿ ಬದಲಾವಣೆ ಮಾಡುವ ಎಸ್ ಬಿಐ ಮನೆ ಸಾಲ ಮಾಡಿದ ಗ್ರಾಹಕರಿಗೆ ಸಿಹಿ ಸುದ್ದಿ ನೀಡಿದ್ದರೆ, ಬ್ಯಾಂಕಿನಲ್ಲಿ ಸ್ಥಿರ ಠೇವಣಿ ಇಟ್ಟವರಿಗೆ ಮಾತ್ರ ಕಹಿ ಸುದ್ದಿ ನೀಡಿದೆ!

State Bank Of India Cuts Interest Rates On Home Loan and Fixed Deposit

ಸೆಪ್ಟೆಂಬರ್ 10 ರ ನಂತರ ಮನೆ ಸಾಲದ ಬಡ್ಡಿದರ ಶೇ.8.25 ನಿಂದ ಶೇ.8.15 ಕ್ಕೆ(ಒಂದು ವರ್ಷಕ್ಕೆ) ಇಳಿಯಲಿದೆ. ಹಾಗೆಯೇ ಸ್ಥಿರ ಠೇವಣಿ ಬಡ್ಡಿದರ ಶೇ.6.70 ನಿಂದ ಶೇ.6.50 ಕ್ಕೆ(ಒಂದು ವರ್ಷಕ್ಕಿಂತ ಹೆಚ್ಚು, ಎರಡು ವರ್ಷಕ್ಕಿಂತ ಹೆಚ್ಚು ಕಾಲ ಸ್ಥಿರ ಠೇವಣಿ ಇಡುವವರಿಗೆ) ಇಳಿಕೆಯಾಗಲಿದೆ.

ಹಿರಿಯ ನಾಗರಿಕರ ಸ್ಥಿರ ಠೇವಣಿ ಬಡ್ಡಿದರವನ್ನು, ಶೇ. 7.20 ರಿಂದ ಶೇ.7.00 ಕ್ಕೆ ಇಳಿಸಲಾಗಿದೆ. ತಮ್ಮ ಪಿಂಚಣಿ ಹಣದ ಮೊತ್ತವನ್ನು ಎಫ್ಡಿಯಲ್ಲಿ ಇಟ್ಟಿರುವ ಬಹುಪಾಲು ಹಿರಿಯ ನಾಗರಿಕರಿಗೆ ಇದು ಆಘಾತಕಾರಿ ಸುದ್ದಿಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+