ಬ್ಯಾಂಕ್ ಉದ್ಯೋಗಾರ್ಥಿಗಳಿಗೆ ಇಲ್ಲಿದೆ ಸಿಹಿ ಸುದ್ದಿ
ಬೆಂಗಳೂರು, ಜೂ.16: ಸರ್ಕಾರಿ ಸ್ವಾಮ್ಯದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಸಹ ಸಂಸ್ಥೆಗಳ ಜತೆ ವಿಲೀನವಾಗುವ ಸುದ್ದಿಯ ಬೆನ್ನಲ್ಲೇ ಉದ್ಯೋಗಾರ್ಥಿಗಳಿಗೆ ಸಿಹಿ ಸುದ್ದಿ ಬಂದಿದೆ.
ಭಾರತದ ಅತಿದೊಡ್ಡ ಜಾಲ ಹೊಂದಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಪ್ರಸಕ್ತ ಆರ್ಥಿಕ ವರ್ಷದಲ್ಲಿ ಸುಮಾರು 7,000ಕ್ಕೂ ಅಧಿಕ ನೇಮಕಾತಿ ಮಾಡಿಕೊಳ್ಳಲಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಎಸ್ ಬಿಐ ಕ್ಯಾಪ್ಸ್ ಸೆಕ್ಯುರಿಟೀಸ್ ಆಯೋಜಿಸಿದ್ದ ಚರ್ಚಾಕೂಟದಲ್ಲಿ ಭಾಗವಹಿಸಿದ್ದ ಎಸ್ ಬಿಐ ಪ್ರತಿನಿಧಿ ಜೆಎನ್ ಮಿಸ್ರಾ ಅವರು ಈ ವಿಷಯವನ್ನು ತಿಳಿಸಿದ್ದಾರೆ.
'ನಾವು ಪ್ರಸಕ್ತ ಆರ್ಥಿಕ ವರ್ಷದಲ್ಲಿ 1,837 ಪ್ರೊಬೇಷನರಿ ಅಧಿಕಾರಿಗಳು, 5,400 ಸಹಾಯಕ ಅಧಿಕಾರಿಗಳನ್ನು ನೇಮಕಾತಿ ಮಾಡಿಕೊಳ್ಳಲಿದ್ದೇವೆ' ಎಂದು ಹೇಳಿದ್ದಾರೆ. ಮುಂದಿನ ನಾಲ್ಕು ವರ್ಷಗಳಲ್ಲಿ ಸುಮಾರು 40,000 ಕ್ಕೂ ಅಧಿಕ ಸಿಬ್ಬಂದಿಗಳು ನಿವೃತ್ತಿ ಹೊಂದುತ್ತಿದ್ದಾರೆ. ಈ ಅವಧಿಯಲ್ಲಿ ನಾವು 35,000 ದಿಂದ 40,000 ಹೊಸ ನೇಮಕಾತಿ ನಡೆಸಲು ಉದ್ದೇಶಿಸಿದ್ದೇವೆ ಎಂದು ಮಿಸ್ರಾ ಹೇಳಿದ್ದಾರೆ.

ಜ್ಯೂನಿಯರ್ ಮಟ್ಟದಲ್ಲಿ ಆಟ್ರಿಷನ್ ಮಟ್ಟ(2.3%) ಏರಿಕೆ ಕಂಡಿಲ್ಲ. ತಂತ್ರಜ್ಞಾನ ಬಳಕೆ ಮೂಲಕ ಗ್ರಾಹಕರ ಮೇಲಿನ ಹೊರೆ ಕಡಿಮೆ ಮಾಡಲು ಎಸ್ ಬಿಐ ಉದ್ದೇಶಿಸಿದೆ. ಫ್ರೆಶ್ ಪದವೀಧರರಿಗೆ ಪ್ರೊಬೇಷನರಿ ಅವಧಿಯಲ್ಲಿ 70,000 ರು ನಂತೆ ಪ್ರತಿ ತಿಂಗಳು ಸಂಬಳ ನೀಡುತ್ತಿದೆ ಎಂದು ಮಿಸ್ರಾ ಹೇಳಿದರು.[SBI- SBM ವಿಲೀನಕ್ಕೆ ಮಹೂರ್ತ]
ಕಳೆದ ವರ್ಷ ಎಸ್ ಬಿಐ ನೇಮಕಾತಿಯಲ್ಲಿ ಕನಿಷ್ಠ ವಿದ್ಯಾರ್ಹತೆ ಅಗತ್ಯ ಮಿತಿಯನ್ನು ಇಳಿಸುವ ಮೂಲಕ ಲಕ್ಷಾಂತರ ಪದವೀಧರರಿಗೆ ಶುಭ ಸುದ್ದಿ ನೀಡಿತ್ತು.ಹೀಗಾಗಿ ಪದವಿ ಅಂಕಗಳ ಕಟ್ ಆಫ್ ಪರ್ಸಂಟೇಜ್ ಬಗ್ಗೆ ಚಿಂತೆ ಇಲ್ಲದೆ ಅರ್ಜಿ ಹಾಕಬಹುದಾಗಿದೆ. ಕಳೆದ ವರ್ಷದ ತನಕ, ಶೇ 55 ಅಂಕ ಪಡೆದವರು ಪ್ರೊಬೇಷನರಿ ಅಧಿಕಾರಿಗಳ ಹುದ್ದೆಗೆ ಅರ್ಜಿ ಹಾಕಬಹುದಾಗಿತ್ತು. [ಎಸ್ ಬಿಐನಿಂದ ಬಂಪರ್ ಸುದ್ದಿ]












Click it and Unblock the Notifications