Silver Price: ಬೆಳ್ಳಿ ದರದಲ್ಲಿ ಮಹಾಕುಸಿತ! ಬರೋಬ್ಬರಿ 60,000 ಇಳಿಕೆ, ಇಂದಿನ ಬೆಳ್ಳಿ ದರ ಅಪ್ಡೇಟ್
Silver Price Drop: ಚಿನ್ನಕ್ಕೆ ಸೆಡ್ಡು ಹೊಡೆಯುವಂತೆ ಏರುಗತಿಯಲ್ಲಿ ಸಾಗಿದ್ದ, ಬೆಲೆ ಏರಿಕೆಯಲ್ಲಿ ಸಾರ್ವಕಾಲಿಕ ದಾಖಲೆ ಬರೆದಿದ್ದ ಬೆಳ್ಳಿ ದರ ಎರಡೇ ದಿನದಲ್ಲಿ ದಾಖಲೆಯ ಇಳಿಕೆ ಕಂಡಿದೆ. ನಿರಂತರ ಬೆಲೆ ಏರಿಕೆಯು ತಾತ್ಕಾಲಿಕ ಎಂಬ ತಜ್ಞರು ಮಾತು ಈ ಮಹಾ ಕುಸಿತದ ಮೂಲಕ ನಿಜವಾಗಿದೆ. ಬೆಳ್ಳಿ ಲೋಹದ ದರ ಇಳಿಕೆಯು ಹೂಡಿಕೆದಾರರ ನಿದ್ದೆಗೆಡಿಸಿದೆ. ಯಾರೆಲ್ಲ ಬೆಳ್ಳಿ ಆಭರಣ ಖರೀದಿಸಬೇಕೆಂದುಕೊಂಡಿದ್ದ ಗ್ರಾಹಕರಿಗೆ ಇಂದು ಶನಿವಾರ (ಜ.26) ಸಿಹಿ ಸುದ್ದಿ ಸಿಕ್ಕಂತಾಗಿದೆ.
ತಿಂಗಳ ಅಂತರದಲ್ಲಿ ಮೂರು ಪಟ್ಟು ದರ ಹೆಚ್ಚಿಸಿಕೊಂಡು 4,10,000 ರೂಪಾಯಿ ತಲುಪಿದ್ದ ಒಂದು ಕೆಜಿ ಬೆಳ್ಳಿ ಬೆಲೆಯಲ್ಲಿ ಮಹಾ ಕುಸಿತ ಸಂಭವಿಸಿದೆ. ಎರಡೇ ದಿನದ ಇಳಿಕೆಯಿಂದ ಬೆಳ್ಳಿ ದರ ಒಂದು ಕೆಜಿಗೆ 3,50,000ಕ್ಕೆ ಕುಸಿದಿದೆ. ಚಿನ್ನಾಭರಣಕ್ಕಿಂತಲೂ ಕೈಗಾರಿಕೆ ಉದ್ದೇಶದಿಂದ ಹೆಚ್ಚು ಬಳಕೆ ಆಗುತ್ತಿದ್ದರಿಂದ ಬೆಳ್ಳಿಗೆ ಬೇಡಿಕೆ ಏರಿತ್ತು. ಉತ್ಪಾದನೆ ಕಡಿಮೆ, ಖರೀದಿ ಏರಿಕೆ ಸೇರಿ ಹಲವು ಜಾಗತಿಕ ಕಾರಣಗಳಿಂದ ಬೆಳ್ಳಿಯು ಗರಿಷ್ಠ ದರ ತಲುಪಿತ್ತು. ಬಡವರಿಗೆ ಪಾಲಿಗೆ ಬೆಳ್ಳಿಯೇ ತಾತ್ಕಾಲಿಕವಾಗಿ ಬಂಗಾರ ಎಂಬಂತಹ ವಾತಾವರಣ ನಿರ್ಮಾಣವಾಗಿತ್ತು.

ಎರಡೇ ದಿನದಲ್ಲಿ 60,000 ರೂ. ಕುಸಿತ
ಜನವರಿ 31ರಂದು ಶನಿವಾರ ಒಂದೇ ದಿನಕ್ಕೆ ಬರೋಬ್ಬರಿ 45,000 ರೂಪಾಯಿ ಬೆಳ್ಳಿ ಬೆಲೆ ಕುಸಿದಿದೆ. ನೆನ್ನೆ ಶುಕ್ರವಾರ (ಜ.30) 15,000 ರೂಪಾಯಿ ಇಳಿಕೆ ಆಗಿತ್ತು. ಈ ಎರಡು ದಿನಗಳಲ್ಲಿ ಬೆಳ್ಳಿ ದರ ಒಟ್ಟು 60,000 ರೂಪಾಯಿ ಕುಸಿದಿದೆ. ಒಂದು ತಿಂಗಳಿನಿಂದ ಬಹುತೇಕ ದಿನಗಳು ನಿರಂತರವಾಗಿ ಬೆಳ್ಳಿ ದರ ಏರಿಕೆ ಆಗಿ ಗ್ರಾಹಕರ ಜೇಬು ಸುಡುತ್ತಿತ್ತು. ಹೆಚ್ಚಳದಿಂದ ಹೂಡಿಕೆದಾರರು ಅತೀ ಕಡಿಮೆ ಅವಧಿಯಲ್ಲಿ ಅಧಿಕ ಲಾಭ ಪಡೆದುಕೊಂಡಿದ್ದರು. ಯಾರೆಲ್ಲ ಈ ಬಿಳಿ ಲೋಹ ಏರಿಕೆ ಆದ ಮೇಲೆ ಮೊದಮೊದಲು ಹೂಡಿಕೆ ಮಾಡಿದ್ದರೋ ಅವರೆಲ್ಲ ಕಳೆದ ಎರಡು ಬಾರಿಯ ಇಳಿಕೆಯಿಂದ ನಷ್ಟಕ್ಕೀಡಾಗಿದ್ದಾರೆ.
ಒಂದೇ ದಿನಕ್ಕೆ ಗರಿಷ್ಠ 30,000 ರೂ. ಏರಿದ್ದ ಬೆಳ್ಳಿ
ಬೆಳ್ಳಿಯ ಒಂದು ಕೆಜಿ ದರವು ಜನವರಿ 22 ರಂದು 5000 ರೂಪಾಯಿ ಹಾಗೂ ಜನವರಿ 24ರಂದು 5000 ರೂಪಾಯಿ ಇಳಿಕೆ ಕಂಡಿತ್ತು. ಅಲ್ಲಿಂದ ಇಳಿಕೆ ಮುನ್ನಾ ದಿನ ಜನವರಿ 29ರಂದು ಗುರುವಾರವರೆಗೆ ಹೆಚ್ಚಾಗಿತ್ತು. ಜನವರಿ 25 ರಂದು ತಟಸ್ಥವಾಗಿದ್ದ ಬೆಳ್ಳಿಯು ಜನವರಿ 26ರಂದು ಬರೋಬ್ಬರಿ 25,000 ರೂಪಾಯಿ ಏರಿತ್ತು. ನಂತರ ಎರಡು ದಿನ (ಜನವರಿ 29, 29) ತಲಾ ಒಂದೊಂದು ದಿನ 10,000 ರೂಪಾಯಿ ಏರಿಕೆ ಆಗಿತ್ತು. ಜನವರಿ 29ರಂದು ಗುರುವಾರ ಬರೋಬ್ಬರಿ 30000 ರೂಪಾಯಿ ಹೆಚ್ಚಳವಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಸಂಚಲನ ಸೃಷ್ಟಿಸಿತ್ತು. ಗ್ರಾಹಕರ ನಿಬ್ಬೆರಗಾದರೆ, ಹೂಡಿಕೆದಾರರು ಭರ್ಜರಿ ಲಾಭ ಪಡೆದುಕೊಂಡರು. ನಂತರ ಜನವರಿ 30 ಮತ್ತು 31ರಂದು ಸೇರಿ ಒಟ್ಟು 60 ಕುಸಿತವಾಯಿತು. ಇದು ಈವರೆಗಿನ ಕಡಿಮೆ ಅವಧಿಯಲ್ಲಿ ಅತ್ಯಧಿಕ ಕುಸಿತದ ದಿನಗಳಾಗಿವೆ.
ಕೇಂದ್ರ ಬಜೆಟ್ ಮಂಡನೆ: ಬೆಳ್ಳಿ ದರದಲ್ಲಿ ವ್ಯತ್ಯಾಸ ನಿರೀಕ್ಷೆ
ಇನ್ನೂ ಫೆಬ್ರವರಿ 01ರಂದು ಕೇಂದ್ರ ಬಜೆಟ್ ಮಂಡನೆ ಆಗಲಿದೆ. ಈ ಸಂಬಂಧ ಹೆಚ್ಚಿನ ನಿರೀಕ್ಷೆ ಇದ್ದು, ಅಂದು ಚಿನ್ನ, ಬೆಳ್ಳಿ ದರದಲ್ಲಿ ವ್ಯತ್ಯಾಸಗಳು, ಬದಲಾವಣೆಗಳು ಆಗಲಿವೆ ಎಂದು ಆರ್ಥಿಕ ತಜ್ಞರು ಊಹಿಸಿದ್ದಾರೆ. ಬೆಳ್ಳಿ ಮೇಲಿನ ಹೂಡಿಕೆದಾರರು ಮತ್ತು ಖರೀದಿ ಗ್ರಾಹಕರು ಬಜೆಟ್ ಬಳಿಕ ಬೆಳ್ಳಿ ಕುರಿತು ಒಂದಷ್ಟು ನಿರ್ಧಾರ ಕೈಗೊಳ್ಳುವ ಸಾಧ್ಯತೆಗಳು ಇವೆ ಎನ್ನಲಾಗಿದೆ.












Click it and Unblock the Notifications