Silver Price: ಬೆಳ್ಳಿ ಬೆಲೆಯಲ್ಲಿ ಒಂದೇ ದಿನ 3,500 ರೂಪಾಯಿ ಕಡಿತ!
ಬಂಗಾರ & ಬೆಳ್ಳಿ ಬೆಲೆಯಲ್ಲಿ ಇಂದು ಕೂಡ ಭಾರಿ ದೊಡ್ಡ ಬದಲಾವಣೆ ಆಗಿದೆ. ಒಂದ್ಕಡೆ ಚಿನ್ನದ ಬೆಲೆಯಲ್ಲಿ ಭಾರಿ ಏರಿಕೆ ಕಂಡುಬಂದಿದ್ದರೆ, ಮತ್ತೊಂದು ಕಡೆಯಲ್ಲಿ ಬೆಳ್ಳಿಯ ಬೆಲೆ ಮಾತ್ರ ದಿಢೀರ್ ಪಾತಾಳ ಹಿಡಿದಿದೆ. ಕೆಲವು ದಿನಗಳ ಹಿಂದಷ್ಟೇ ಬೆಳ್ಳಿಯ ಬೆಲೆ ಪ್ರತಿ ಕೆಜಿಗೆ 1 ಲಕ್ಷ ರೂಪಾಯಿ ತಲುಪಿತ್ತು. ಆದರೆ ಇದೀಗ ಭಾರಿ ಹಿನ್ನಡೆ ಕಾಣುತ್ತಿರುವ ಬೆಳ್ಳಿ ಬೆಲಯು ಸಿಕ್ಕಾಪಟ್ಟೆ ಕುಸಿದು ಬೀಳುತ್ತಿದೆ. ಅದ್ರಲ್ಲೂ ಇಂದು ಒಂದೇ ದಿನ ಭರ್ಜರಿ 3,500 ರೂಪಾಯಿ ಕುಸಿದು ಬಿದ್ದಿದೆ ಬೆಳ್ಳಿ ಬೆಲೆ.
ಚಿನ್ನದ ರೀತಿಯಲ್ಲೇ ಬೆಳ್ಳಿ ಕೂಡ ಭಾರಿ ಬೆಲೆಯನ್ನು ಪಡೆದುಕೊಳ್ಳುತ್ತಿತ್ತು. ಅದರಲ್ಲೂ ಈ ವಸ್ತು ಭೂಮಿ ಮೇಲೆ ಅಪರೂಪ ಕೂಡ ಹೌದು. ಯಾಕಂದ್ರೆ ಸುಲಭವಾಗಿ ಬೆಳ್ಳಿ ಲೋಹ ಭೂಮಿ ಮೇಲೆ ಸಿಗುವುದಿಲ್ಲ. ಹೀಗಾಗಿ ಬೆಳ್ಳಿ ಬೆಲೆ ಕೂಡ ದಿನದಿಂದ ದಿನಕ್ಕೆ ಏರಿಕೆ ಕೂಡ ಕಾಣುತ್ತಿತ್ತು. ಕೆಲ ದಿನಗಳ ಹಿಂದೆ ಬೆಳ್ಳಿ ಬೆಲೆ ಪ್ರತಿ ಕೆಜಿಗೆ ಬರೋಬ್ಬರಿ 1 ಲಕ್ಷ ರೂಪಾಯಿಗೂ ಹೆಚ್ಚಾಗಿತ್ತು. ಅಲ್ಲದೆ ಇನ್ನೇನು ಬೆಳ್ಳಿ ಬೆಲೆ ಪ್ರತಿ ಒಂದು ಕೆಜಿಗೆ ಸುಮಾರು ಒಂದೂವರೆ ಲಕ್ಷ ಆಗಬಹುದು ಅಂತಾ ಕೂಡ ಹೇಳಲಾಗಿತ್ತು. ಆದರೆ ಈಗ ಬೇರೆಯದ್ದೇ ಸುದ್ದಿ ಸಿಗುತ್ತಿದ್ದು, ಬೆಳ್ಳಿ ಬೆಲೆ ದಿಢೀರ್ ಪಾತಾಳ ಸೇರಿದೆ! ಇಂದು 3,500 ರೂಪಾಯಿ ಕುಸಿದು ಬಿದ್ದ ನಂತರ ಬೆಳ್ಳಿ ಬೆಲೆ ಎಷ್ಟಿದೆ ಗೊತ್ತೆ? ಮುಂದೆ ಓದಿ.

ಬೆಳ್ಳಿ ಖರೀದಿಗೆ ಶುಭ ಸಮಯ?
ಚಿನ್ನ & ಬೆಳ್ಳಿ ಬಗ್ಗೆ ಹೇಳುತ್ತಾ ಹೋದರೆ ಒಂದು ಪುಸ್ತಕ ಬರೆಯಬೇಕು. ಯಾಕಂದ್ರೆ ಅಮೂಲ್ಯ ವಸ್ತು ಭೂಮಿ ಮೇಲೆ ಬದುಕಲು ಮನುಷ್ಯನಿಗೆ ಸಾಕಷ್ಟು ವಿಧದಲ್ಲಿ ಆಧಾರವಾಗಿದೆ ಸಾವಿರಾರು ವರ್ಷಗಳಿಂದ ಮನುಷ್ಯರ ಜೀವನದಲ್ಲಿ ಚಿನ್ನ & ಬೆಳ್ಳಿ ಬೆರೆತು ಹೋಗಿದೆ. ಈ ಪೈಕಿ ಭಾರತೀಯ ಸಂಪ್ರದಾಯದ ಪ್ರಕಾರ ಯಾವುದೇ ರೀತಿಯ ಶುಭಕಾರ್ಯ ನಡೆಯಲು ಚಿನ್ನ & ಬೆಳ್ಳಿ ಅತ್ಯಗತ್ಯ ಎನ್ನಬಹುದು. ಚಿನ್ನ ಇಲ್ಲದೆ ಶುಭಕಾರ್ಯ ನಡೆಯುವುದಿಲ್ಲ & ಹೀಗಾಗಿ ಭಾರತದಲ್ಲಿ ಚಿನ್ನಕ್ಕೆ ಹಾಗೂ ಬೆಳ್ಳಿಗೆ ಭಾರಿ ಬೇಡಿಕೆ ಇದೆ. ಹೀಗಿದ್ದಾಗಲೇ ಇಂದು ಬೆಳ್ಳಿ ಬೆಲೆ ಭಾರಿ ಕುಸಿತ ಕಂಡು ಬೆಳ್ಳಿ ಖರೀದಿ ಮಾಡಲು ಕಾಯುತ್ತಿದ್ದ ಜನರಿಗೆ ಭರ್ಜರಿ ಸುದ್ದಿ ನೀಡಿದೆ.
ಮೊದಲೇ ಹೇಳಿದಂತೆ ಇಂದು ಬೆಳ್ಳಿ ಬೆಲೆ ಬರೋಬ್ಬರಿ 3,500 ರೂಪಾಯಿ ಕುಸಿತ ಕಂಡಿದೆ. ಹೀಗೆ ಕುಸಿತ ಕಂಡ ನಂತರ ಬೆಳ್ಳಿ ಬೆಲೆ ಪ್ರತಿ ಕೆಜಿಗೆ 82,500 ರೂಪಾಯಿ ಆಗಿದೆ. ಕಳೆದ ಕೆಲ ದಿನಗಳಿಂದ ಇದೇ ರೀತಿಯಾಗಿ ಬೆಳ್ಳಿ ಬೆಲೆ ಕುಸಿತ ಕಾಣುತ್ತಿದೆ. ಅದರಲ್ಲೂ ಚಿನ್ನದ ಬೆಲೆಯು ಏರಿಕೆ ಕಂಡಿದ್ದರೆ, ಇನ್ನೊಂದು ಕಡೆ ಬೆಳ್ಳಿಯ ಬೆಲೆ ಒಂದೇ ದಿನ ಪ್ರತಿ ಒಂದು ಕೆಜಿಗೆ 3,500 ರೂಪಾಯಿ ಕುಸಿದು ಬಿದ್ದಿದೆ.
ಚಿನ್ನ 5,500 ರೂಪಾಯಿ ಏರಿಕೆ!
ಕರ್ನಾಟಕ & ಬೆಂಗಳೂರಲ್ಲಿ ಇಂದು ಚಿನ್ನದ ಬೆಲೆ ಏರಿಕೆ ಕಂಡು ಆಭರಣ ಪ್ರಿಯರಿಗೆ ಬೇಸರದ ಸುದ್ದಿ ನೀಡಿದೆ. 24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆಯು ಏರಿಕೆ ಬಳಿಕ ಮತ್ತಷ್ಟು ಮೇಲೆ ಹೋಗಿದೆ 100 ಗ್ರಾಂಗೆ 5,500 ರೂಪಾಯಿ ಏರಿಕೆಯನ್ನ ಕಂಡಿದೆ 24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆ. ಹೀಗೆ ಶುದ್ಧ ಚಿನ್ನ ಬೆಲೆ ಪ್ರತಿ 100 ಗ್ರಾಂಗೆ 7,32,000 ರೂಪಾಯಿ ಆಗಿದೆ. ಇದರ ಜೊತೆ ಶುದ್ಧ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ 73,200 ರೂಪಾಯಿಗೆ ಏರಿಕೆ ಆಗಿದೆ. ಒಡವೆ ಅಥವಾ ಆಭರಣಗಳಿಗಾಗಿ ಬಳಸುವ 22 ಕ್ಯಾರೆಟ್ ಚಿನ್ನದ ಬೆಲೆ ಭರ್ಜರಿ ಏರಿಕೆ ಕಂಡಿದೆ. ಆಭರಣ ಚಿನ್ನ ಇಂದು ಒಂದೇ ದಿನ ಬರೋಬ್ಬರಿ 5000 ರೂಪಾಯಿ ಏರಿಕೆ ಕಂಡಿದೆ. ಈ ಮೂಲಕ ಇದೀಗ ಪ್ರತಿ 10 ಗ್ರಾಂ 22 ಕ್ಯಾರೆಟ್ ಆಭರಣ ಚಿನ್ನದ ಬೆಲೆ, ಬರೋಬ್ಬರಿ 67,100 ರೂಪಾಯಿಗೆ ತಲುಪಿದೆ.












Click it and Unblock the Notifications