Gold Silver Price: ಚಿನ್ನ ಅಲ್ಲ ಬೆಳ್ಳಿ ಬೆಲೆಯಲ್ಲಿ ಭಾರಿ ಕುಸಿತ! ಈಗ ಎಷ್ಟಿದೆ ಬೆಳ್ಳಿ ಬೆಲೆ?

ಚಿನ್ನ & ಬೆಳ್ಳಿ ಬೆಲೆಯಲ್ಲಿ ಕುಸಿತವು ಮುಂದುವರಿದಿದೆ, ಅದರಲ್ಲೂ ಚಿನ್ನ ಖರೀದಿಗೆ ಅಂತ ಕಾಯುತ್ತಿದ್ದವರಿಗೆ ಇಷ್ಟು ದಿನ ಗುಡ್ ನ್ಯೂಸ್ ಸಿಗುತ್ತಿತ್ತು. ಇದರ ಜೊತೆಗೆ ಇದೀಗ ಬೆಳ್ಳಿ ಬೆಲೆ ಕೂಡ ಭರ್ಜರಿ ಕುಸಿತ ಕಂಡಿದ್ದು, ಇದೀಗ ಬೆಳ್ಳಿಯ ಮೇಲೆ ಹೂಡಿಕೆ ಮಾಡುವವರು ಅಥವಾ ಬೆಳ್ಳಿ ಖರೀದಿ ಮಾಡಲು ಕಾಯುತ್ತಿದ್ದವರಿಗೆ ಭರ್ಜರಿ ಸುದ್ದಿ ಸಿಕ್ಕಂತಾಗಿದೆ. ಹಾಗಾದ್ರೆ ಇದೀಗ ಎಷ್ಟಿದೆ ಬೆಳ್ಳಿ ಬೆಲೆ? ಇಂದು ಒಂದೇ ದಿನ ಎಷ್ಟು ಕುಸಿತ ಕಂಡಿದೆ ಬೆಳ್ಳಿ? ಬನ್ನಿ ತಿಳಿಯೋಣ.

ಚಿನ್ನ & ಬೆಳ್ಳಿಗೆ ಯಾವಾಗಲೂ ಅತ್ಯುತ್ತಮ ಬೇಡಿಕೆ ಇರುತ್ತದೆ. ಹಾಗೇ ಬೆಲೆಯಲ್ಲಿ ಕುಸಿತ ಕೂಡ ಸಾಮಾನ್ಯ. ಚಿನ್ನ & ಬೆಳ್ಳಿ ಬೆಲೆಯಲ್ಲಿ ಸಾಕಷ್ಟು ಏರಿಳಿತ ಕಂಡುಬರುತ್ತಿದೆ, ಅದರಲ್ಲೂ ಕಳೆದ 5 ತಿಂಗಳಿಂದ ಚಿನ್ನ ಮತ್ತು ಬೆಳ್ಳಿ ಗರಿಷ್ಠ ಮಟ್ಟ ತಲುಪಿದೆ. ಇದರ ಜೊತೆ, ಸಾಕಷ್ಟು ಕುಸಿತ ಕೂಡ ಕಂಡಿದೆ. ಹೀಗಿದ್ದಾಗಲೇ ಇದೀಗ ಮತ್ತೆ ಚಿನ್ನದ ಬೆಲೆ ಕುಸಿತದ ಹಾದಿಗೆ ಮರಳುವ ಸೂಚನೆ ಕೂಡ ಸಿಗುತ್ತಿದೆ. ಶ್ರಾವಣ ಸಮಯದಲ್ಲಿ ಶುಭ ಕಾರ್ಯಗಳು ನಡೆಯುತ್ತಿದ್ದವು, ಇದೀಗ ಆ ಶುಭ ಕಾರ್ಯ ಮುಕ್ತಾಯದ ಹಂತಕ್ಕೆ ತಲುಪುತ್ತಿದ್ದು ಚಿನ್ನ & ಬೆಳ್ಳಿ ಬೆಲೆಯಲ್ಲಿ ಮತ್ತೆ ಭಾರಿ ಕುಸಿತವು ಆಗುತ್ತಾ? ಎಂಬ ಕುತೂಹಲ ಕೆರಳಿದೆ.

Silver Price Is Decreased By 2000 Rupees And Reached 83 000 Rupees Now Per KG

ಚಿನ್ನ.. ಚಿನ್ನ.. ಬೆಳ್ಳಿ.. ಬೆಳ್ಳಿ.. ಹೀಗೆ ಆಭರಣ ಇಷ್ಟಪಡುವ ಮಹಿಳೆಯರಿಗೆ ಚಿನ್ನ & ಬೆಳ್ಳಿ ಅಂದ್ರೆ ಸಖತ್ ಆಸೆ. ಅದ್ರಲ್ಲೂ ಹಬ್ಬಗಳು ಬಂದಾಗ ಚಿನ್ನ & ಬೆಳ್ಳಿ ಖರೀದಿ ಮಾಡಬೇಕು ಅಂತಾ ಸದಾ ಇಷ್ಟಪಡ್ತಾರೆ. ಹಾಗೇ ಮತ್ತೊಂದು ಕಡೆ ಹೂಡಿಕೆಯನ್ನ ಮಾಡಲು ಕೂಡ ಚಿನ್ನ & ಬೆಳ್ಳಿ ಸೂಕ್ತವಾದ ವೇದಿಕೆ ಎನ್ನಬಹುದು. ಯಾಕಂದ್ರೆ ಜಗತ್ತಿನಲ್ಲಿ ಚಿನ್ನ ಮತ್ತು ಬೆಳ್ಳಿ ಮೇಲೆ ಹೂಡಿಕೆ ಮಾಡುವವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಹಾಗಾದ್ರೆ ಇದೀಗ ಬೆಳ್ಳಿ & ಚಿನ್ನದ ಬೆಲೆ ಎಷ್ಟಿದೆ?

1 ಲಕ್ಷ ರೂ. ತಲುಪಿದ್ದ ಬೆಳ್ಳಿ!

ಹೌದು ಇದೀಗ ಬೆಳ್ಳಿ ಬೆಲೆಯಲ್ಲಿ ದಿಢೀರ್ 2,000 ರೂಪಾಯಿ ಕುಸಿತ ಕಂಡುಬಂದಿದೆ. ಹೀಗೆ ಬೆಳ್ಳಿ ಬೆಲೆಯು ಕುಸಿದು ಬಿದ್ದ ನಂತರ ಪ್ರತಿ ಕೆಜಿಗೆ 83,000 ರೂಪಾಯಿಗೆ ಮಾರಾಟ ಆಗ್ತಿದೆ. ಕೆಲವೇ ದಿನಗಳ ಹಿಂದಷ್ಟೇ ಬೆಳ್ಳಿ ಬೆಲೆಯು ಬರೋಬ್ಬರಿ 1,00,000 ರೂಪಾಯಿಗೆ ತಲುಪಿತ್ತು, ಅಂದ್ರೆ ಪ್ರತಿ ಒಂದು ಕೆಜಿ ಬೆಳ್ಳಿ ಬೆಲೆಯು 1 ಲಕ್ಷ ರೂಪಾಯಿ ಆಗಿತ್ತು. ಆದರೆ ಲೋಕಸಭಾ ಚುನಾವಣೆ ಫಲಿತಾಂಶ ಮುಗಿದ ನಂತರ, ಬೆಳ್ಳಿ ಬೆಲೆಯಲ್ಲಿ ಭಾರಿ ಕುಸಿತ ಕಂಡುಬರುತ್ತಿದೆ. ಹೀಗಾಗಿ ಇನ್ನಷ್ಟು ಬೆಲೆ ಕಡಿಮೆ ಆಗುವ ನಿರೀಕ್ಷೆ ದಟ್ಟವಾಗಿದೆ. ಹಾಗೇ ಮತ್ತೊಂದ್ಕಡೆ ಚಿನ್ನ ಪ್ರತಿ 10 ಗ್ರಾಂಗೆ 66,700 ರೂಪಾಯಿ ಆಗಿದೆ. ಅಂದ್ರೆ 22 ಕ್ಯಾರೆಟ್ ಚಿನ್ನದ ಬೆಲೆಯು ಪ್ರತಿ 10 ಗ್ರಾಂಗೆ 66,700 ರೂಪಾಯಿ ಇದ್ದು, ಕುಸಿತ ಕಾಣುವ ನಿರೀಕ್ಷೆಯಲ್ಲಿ ಆಭರಣ ಪ್ರಿಯರು ಇದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+