Property: ಆಸ್ತಿ ಖರೀದಿ & ಮಾರಾಟದಲ್ಲಿ ಮಹತ್ವದ ಬದಲಾವಣೆ, ಯಾವೆಲ್ಲಾ ದಾಖಲೆಗಳು ಬೇಕು ನೋಡಿ!
ದೇಶದಲ್ಲಿ ಆಸ್ತಿ ಖರೀದಿ ಹಾಗೂ ಮಾರಾಟಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ಮಹತ್ವದ ಆದೇಶವೊಂದನ್ನು ಮಾಡಿದೆ. ಈಗಾಗಲೇ ಆಸ್ತಿ ಖರೀದಿ ಹಾಗೂ ಮಾರಾಟಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ಕೆಲವೊಂದು ಪ್ರಮುಖ ಸೂಚನೆ ಹಾಗೂ ನಿಯಮಗಳನ್ನು ರೂಪಿಸಿದೆ. ಇದೀಗ ಕೇಂದ್ರ ಸರ್ಕಾರವು ಈ ನಿಟ್ಟಿನಲ್ಲಿ ಕೆಲವೊಂದು ಪ್ರಮುಖ ಆದೇಶವನ್ನು ಮಾಡಿದೆ.
ಹೊಸ ಭೂ ನೋಂದಣಿ ನಿಯಮಗಳನ್ನು ಕೇಂದ್ರ ಸರ್ಕಾರವು ಜಾರಿ ಮಾಡಿದೆ. ದೇಶಾದ್ಯಂತ ಭೂ ನೋಂದಣಿಗಾಗಿ ಹೊಸ ನಿಯಮಗಳನ್ನು ಜಾರಿ ಮಾಡುವುದಕ್ಕೆ ಮುಂದಾಗಿದೆ. ಇದರಿಂದ ಮುಂದಿನ ದಿನಗಳಲ್ಲಿ ಜಾಗ ಖರೀದಿ ಹಾಗೂ ಮಾರಾಟದ ವಿಚಾರದಲ್ಲಿ ಮಹತ್ವದ ಬದಲಾವಣೆಗಳು ಆಗಲಿವೆ ಎಂದು ಹೇಳಲಾಗಿದೆ.

ಕೇಂದ್ರ ಬಿಜೆಪಿ ಸರ್ಕಾರದ ಪರಿಷ್ಕೃತ ಭೂ ನೋಂದಣಿ ನಿಯಮಗಳನ್ನು ಜಾರಿ ಮಾಡಿರುವುದರ ಮುಖ್ಯ ಉದ್ದೇಶವಾಗಿದೆ. ಇನ್ಮುಂದೆ ಹೊಸ ಮನೆ, ಜಾಗ ಅಥವಾ ನಿವೇಶನ ಖರೀದಿ ಮಾಡುವಾಗ ಈ ಹೊಸ ನಿಯಮಗಳು ಅನ್ವಯವಾಗಲಿವೆ. ದೇಶದಲ್ಲಿ ಆಸ್ತಿಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ಹೊಸ ನಿಯಮವು ಆಸ್ತಿ ಮಾರಾಟ ಹಾಗೂ ರಿಯಲ್ ಎಸ್ಟೇಟ್ ಮೇಲೆ ಪರಿಣಾಮ ಬೀರಲಿದೆ ಎಂದು ಹೇಳಲಾಗಿದೆ.
ಕರ್ನಾಟಕವೂ ಸೇರಿದಂತೆ ದೇಶದಲ್ಲಿ ಆಸ್ತಿ ಖರೀದಿ ಹಾಗೂ ಮಾರಾಟದಲ್ಲಿ ಪಾರದರ್ಶಕತೆಯನ್ನು ತರುವ ಉದ್ದೇಶದಿಂದ ಕೇಂದ್ರ ಸರ್ಕಾರವು ಹೊಸ ನೀತಿಯನ್ನು ಜಾರಿ ಮಾಡಿದೆ. ಅಲ್ಲದೇ ವಂಚನೆಯನ್ನು ತಪ್ಪಿಸುವುದು ಸಹ ಇದರ ಉದ್ದೇಶವಾಗಿದೆ. ನೀವು ಹೊಸ ಮನೆ, ಕೃಷಿ ಭೂಮಿ ಅಥವಾ ವಾಣಿಜ್ಯ ಆಸ್ತಿ ಖರೀದಿ ಮಾಡಬೇಕು ಎಂದು ಇಚ್ಛಿಸುತ್ತಿದ್ದರೆ, ಈ ನಿಯಮಗಳು ಆಸ್ತಿ ಮಾಲೀಕತ್ವದ ದಾಖಲೆಗಳ ಪ್ರಕ್ರಿಯೆ ಮೇಲೆ ಪರಿಣಾಮ ಬೀರಲಿದೆ.
ಜಾಗ ನೋಂದಣಿಯಲ್ಲಿನ ಹೊಸ ಹಾಗೂ ಪ್ರಮುಖ ಬದಲಾವಣೆಗಳು ಯಾವುವು ?
ಜಾಗದ ಮಾಲೀಕರು ಆಸ್ತಿ ಮಾರಾಟ ಮಾಡುವಾಗ ಪ್ರಕ್ರಿಯೆಗಳನ್ನು ಸರಳೀಕರಣಗೊಳಿಸುವುದು, ಭ್ರಷ್ಟಾಚಾರ ಕಡಿಮೆ ಮಾಡುವುದು ಹಾಗೂ ಕೇಂದ್ರೀಕೃತ ಡಿಜಿಟಲ್ ವ್ಯವಸ್ಥೆಯ ಮೂಲಕ ಆಸ್ತಿ ವಹಿವಾಟು ನಡೆದಿದೆಯೇ ಎಂದು ನೋಡುವುದು ಹೊಸ ನಿಯಮದ ಮುಖ್ಯ ಉದ್ದೇಶಗಳಾಗಿವೆ.
ಏನೆಲ್ಲಾ ದಾಖಲೆಗಳು ಇರಬೇಕು ?
* ಆಸ್ತಿ ಹಾಗೂ ಜಾಗ ಖರೀದಿ ಮಾಡುವವರು ಹಾಗೂ ಮಾರಾಟ ಮಾಡುವವರ ಆಧಾರ್ ಆಧಾರಿತ ದೃಢೀಕರಣದ ಕಡ್ಡಾಯ.
* ಮೊದಲ ಹಂತದಲ್ಲಿ ಆಯ್ದ ರಾಜ್ಯಗಳಲ್ಲಿ ಬ್ಲಾಕ್‌ಚೈನ್ ಆಧಾರಿತ ಡಿಜಿಟಲ್ ಭೂ ದಾಖಲೆ ವ್ಯವಸ್ಥೆ ಅಭಿವೃದ್ಧಿ
* ಮಾರಾಟ ಪತ್ರಗಳು ಸೇರಿದಂತೆ ಪ್ರಮುಖ ದಾಖಲೆಗಳನ್ನು ಆನ್‌ಲೈನ್ ಮೂಲಕ ಸಲ್ಲಿಸುವುದು.
* ಬಯೋಮೆಟ್ರಿಕ್ ಪರಿಶೀಲನೆ ಮಾಡುವುದಕ್ಕೆ ಮಾತ್ರ ಸಬ್-ರಿಜಿಸ್ಟ್ರಾರ್ ಕಚೇರಿಗೆ ಭೇಟಿ ನೀಡಬೇಕು.
* ಪ್ರಾಪರ್ಟಿ ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸುವುದಕ್ಕೆ ಕೇವಲ 10 ದಿನಗಳ ಕಾಲಮಿತಿ.
* ದೇಶದಾದ್ಯಂತ ಭೂ ನೋಂದಣಿ ವ್ಯತ್ಯಾಸಗಳನ್ನು ಕಡಿಮೆ ಮಾಡಲು ಏಕರೂಪದ ಮುದ್ರಾಂಕ ಶುಲ್ಕ ನಿಗದಿ
* ನಿಖರತೆಗಾಗಿ GIS ಆಧಾರಿತ ಭೂ ನಕ್ಷೆಯ ಬಳಕೆ












Click it and Unblock the Notifications