ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶೇರ್‌ಚಾಟ್‌ನಲ್ಲಿ ಹೂಡಿಕೆಗೆ ಮುಂದಾದ ಮೈಕ್ರೋಸಾಫ್ಟ್‌

|
Google Oneindia Kannada News

ನವದೆಹಲಿ, ಆಗಸ್ಟ್ 07: ಅಮೆರಿಕಾ ಟೆಕ್ ದೈತ್ಯ ಸಂಸ್ಥೆ ಮೈಕ್ರೋಸಾಫ್ಟ್‌ ಭಾರತದ ಶೇರ್‌ಚಾಟ್‌ನಲ್ಲಿ 100 ಮಿಲಿಯನ್ ಡಾಲರ್ ಹೂಡಿಕೆ ಮಾಡಲು ಮಾತುಕತೆ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ.

ಭಾರತೀಯ ನಿರ್ಮಿತ ಸೋಷಿಯಲ್ ಮೀಡಿಯಾ ಅಪ್ಲಿಕೇಶನ್ ಶೇರ್‌ಚಾಟ್‌ ಪ್ರಸ್ತುತ ತಿಂಗಳಿಗೆ 140 ಮಿಲಿಯನ್ ಸಕ್ರಿಯ ಬಳಕೆದಾರರನ್ನು ಹೊಂದಿದೆ. ಬೆಂಗಳೂರು ಮೂಲದ್ದೇ ಆದ ಈ ಕಂಪನಿಯು ದೇಶದಲ್ಲಿ ಬಹಳ ಜನಪ್ರಿಯವಾಗಿದ್ದು 15 ಭಾರತೀಯ ಭಾಷೆಗಳಲ್ಲಿ ಲಭ್ಯವಿದೆ.

ಟಿಕ್‌ಟಾಕ್ ಖರೀದಿಗೆ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಜೊತೆ ಮೈಕ್ರೋಸಾಫ್ಟ್‌ ಮಾತುಕತೆಟಿಕ್‌ಟಾಕ್ ಖರೀದಿಗೆ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಜೊತೆ ಮೈಕ್ರೋಸಾಫ್ಟ್‌ ಮಾತುಕತೆ

ಇತ್ತೀಚೆಗಷ್ಟೇ ಮೈಕ್ರೋಸಾಫ್ಟ್‌ ಚೀನಾದ ಬೈಟ್‌ಡ್ಯಾನ್ಸ್‌ ಒಡೆತನದ ಟಿಕ್‌ ಟಾಕ್ ಅನ್ನು ಖರೀದಿಸುವುದಾಗಿ ತಿಳಿಸಿತ್ತು. ಅಮೆರಿಕಾ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಟಿಕ್‌ ಟಾಕ್‌ ಅನ್ನು ಅಮೆರಿಕಾದ ಕಂಪನಿಯು ಖರೀದಿಸದಿದ್ದರೆ 45 ದಿನಗಳಲ್ಲಿ ನಿಷೇಧಿಸುವುದಾಗಿ ಘೋಷಿಸಿದ್ದರು.

ShareChat: Microsoft Planning To Invest 100 Million Dollar

ಈ ಮಧ್ಯೆ ಮೈಕ್ರೋಸಾಫ್ಟ್‌ ಭಾರತದ ಅಪ್ಲಿಕೇಶನ್‌ನಲ್ಲಿ ಹೂಡಿಕೆಗೆ ಮುಂದಾಗಿದೆ. ಪ್ರಸ್ತುತ, ಶೇರ್‌ಚಾಟ್ ಅನ್ನು ಹೆಚ್ಚಾಗಿ ದೇಶದ ಶ್ರೇಣಿ 1 ಮತ್ತು ಶ್ರೇಣಿ 2 ನಗರಗಳ ಜನರು ಬಳಸುತ್ತಾರೆ. ಅವರು 2 ಜಿ ನೆಟ್‌ವರ್ಕ್‌ಗಳನ್ನೂ ಅವಲಂಬಿಸಿದ್ದಾರೆ.

English summary
Microsoft is looking to invest around $100 million in social media platform ShareChat. The software giant is holding talks with the Bengaluru-based regional language platform.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X