ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆರು ತಿಂಗಳ ಗರಿಷ್ಠ ಮಟ್ಟಕ್ಕೆ ತಲುಪಿದ ಭಾರತದ ಷೇರುಪೇಟೆ: ಬ್ಯಾಂಕಿಂಗ್ ಷೇರುಗಳಿಗೆ ಬಲ

|
Google Oneindia Kannada News

ಮುಂಬೈ, ಆಗಸ್ಟ್‌ 28: ಶುಕ್ರವಾರ ಭಾರತದ ಷೇರುಪೇಟೆ ಅತ್ಯಂತ ಬಲವಾದ ಏರಿಕೆ ಕಂಡಿದ್ದು ಸತತ ಆರನೇ ದಿನ ಏರುಮುಖದತ್ತ ಸಾಗಿದೆ. ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್‌ ಮತ್ತು ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ 50 ಸೂಚ್ಯಂಕಗಳು ಫೆಬ್ರವರಿ 27 ರಿಂದ ಗರಿಷ್ಠ ಮಟ್ಟದಲ್ಲಿ ಕೊನೆಗೊಂಡಿತು.

ಎನ್‌ಎಸ್‌ಇ ನಿಫ್ಟಿ ಬ್ಯಾಂಕ್ ಸೂಚ್ಯಂಕದಲ್ಲಿ ಬ್ಯಾಂಕಿಂಗ್ ಷೇರುಗಳು ಲಾಭವನ್ನು ಗಳಿಸಿದ್ದು, ಸುಮಾರು 1,000 ಅಂಕಗಳನ್ನು ಗಳಿಸಿತು.

ಸೆನ್ಸೆಕ್ಸ್ 354 ಪಾಯಿಂಟ್ ಅಥವಾ 0.9 ರಷ್ಟು ಹೆಚ್ಚಳದಿಂದ 39,467 ಕ್ಕೆ ತಲುಪಿದೆ ಮತ್ತು ನಿಫ್ಟಿ ಶೇಕಡಾ 0.76 ಅಥವಾ 88 ಪಾಯಿಂಟ್ ಏರಿಕೆ ಕಂಡು 11,648ಕ್ಕೆ ತಲುಪಿದೆ. ಕಳೆದ ಆರು ಸೆಷನ್‌ಗಳಲ್ಲಿ ಸೆನ್ಸೆಕ್ಸ್ ಶೇಕಡಾ 2.68 ಮತ್ತು ನಿಫ್ಟಿ ಶೇ 2.43 ರಷ್ಟು ಏರಿಕೆ ಕಂಡಿದೆ.

Share Market: Sensex, Nifty End At 6 Month High

ಎನ್‌ಎಸ್ಇ ಸಂಗ್ರಹಿಸಿದ 11 ಸೆಕ್ಟರ್ ಗೇಜ್‌ಗಳಲ್ಲಿ ಎಂಟು ನಿಫ್ಟಿ ಪಿಎಸ್‌ಯು ಬ್ಯಾಂಕ್ ಸೂಚ್ಯಂಕದ ಶೇಕಡಾ 5 ರಷ್ಟು ಲಾಭವನ್ನು ಗಳಿಸಿವೆ. ಖಾಸಗಿ ಬ್ಯಾಂಕಿಂಗ್, ಹಣಕಾಸು ಸೇವೆಗಳು, ಮಾಧ್ಯಮ ಮತ್ತು ಟೆಲಿಕಾಂ ಷೇರುಗಳನ್ನು ಹೂಡಿಕೆದಾರರನ್ನು ಆಕರ್ಷಿಸಿವೆ. ಮತ್ತೊಂದೆಡೆ, ಆಟೋ, ಮೆಟಲ್ ಮತ್ತು ಎಫ್‌ಎಂಸಿಜಿ ಷೇರುಗಳು ಸ್ವಲ್ಪ ಲಾಭದ ಬುಕಿಂಗ್‌ಗೆ ಸಾಕ್ಷಿಯಾದವು.

ಏರಿಕೆ ಕಂಡ ಎನ್‌ಎಸ್‌ಇ ಷೇರುಗಳು:

ವೊಡಾಫೋನ್ ಐಡಿಯಾ, ಇಂಡಸ್‌ಇಂಡ್ ಬ್ಯಾಂಕ್, ಕೆನರಾ ಬ್ಯಾಂಕ್, ಪಿವಿಆರ್, ಫೆಡರಲ್ ಬ್ಯಾಂಕ್, ಆ್ಯಕ್ಸಿಸ್ ಬ್ಯಾಂಕ್, ಶ್ರೀರಾಮ್ ಟ್ರಾನ್ಸ್, ಬಿಹೆ್‌ಇಎಲ್, ಬ್ಯಾಂಕ್ ಆಫ್ ಬರೋಡಾ, ಐಡಿಎಫ್‌ಸಿ ಫಸ್ಟ್‌ ಬ್ಯಾಂಕ್, ಪಿಎನ್‌ಬಿ ಇತರೆ

ಏರಿಕೆ ಕಂಡ ಬಿಎಸ್‌ಇ ಷೇರುಗಳು:

ಇಂಡಸ್‌ಇಂಡ್ ಬ್ಯಾಂಕ್, ಆ್ಯಕ್ಸಿಸ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಸನ್ ಫಾರ್ಮಾ, ಎಸ್‌ಬಿಐ, ಕೋಟಕ್ ಮಹೀಂದ್ರಾ, ಭಾರ್ತಿ ಏರ್‌ಟೆಲ್, ಟೆಕ್ ಮಹೀಂದ್ರಾ, ಬಜಾಜ್ ಫೈನಾನ್ಸ್ ಇತರೆ

English summary
The S&P BSE Sensex and NSE Nifty 50 indexes rose for a sixth session in a row on Friday powered by a rally in banking shares. With today's gain, the Sensex and Nifty ended at their highest level since February 27.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X