ಬ್ಯಾಂಕುಗಳು ಎಂತೆಂಥ ಸೇವೆಗೆ ಶುಲ್ಕ ವಿಧಿಸುತ್ತವೆ ಗೊತ್ತಾ?

Posted By:
Subscribe to Oneindia Kannada

ಭಾರತದಲ್ಲಿ ಬ್ಯಾಂಕ್ ಖಾತೆ ಇಲ್ಲದಿರುವವರು ಇಲ್ಲವೆಂದೇ ಹೇಳಬಹುದು. ಹೆಚ್ಚೂಕಡಿಮೆ ಎಲ್ಲರದೂ ಬ್ಯಾಂಕ್ ಖಾತೆ ಇದ್ದೇ ಇರುತ್ತದೆ. ಇಂಟರ್ನೆಟ್ ಬ್ಯಾಂಕಿಂಗ್ ಕೂಡ ಸರಳವಾಗಿರುವುದರಿಂದ ಏನೇನು ವಹಿವಾಟುಗಳು ಆಗುತ್ತಿವೆ ಎಂಬುದನ್ನು ಕ್ಷಣಾರ್ಧದಲ್ಲಿ ನೋಡಬಹುದು.

ಆದರೆ, ಬ್ಯಾಂಕುಗಳು ಎಂತೆಂಥ ಸೇವೆ ನೀಡುತ್ತಿವೆ, ಅವಕ್ಕೆ ಎಷ್ಟು ಶುಲ್ಕು ವಿಧಿಸುತ್ತಿವೆ, ನಿಮ್ಮ ಖಾತೆಯಿಂದ ಎಷ್ಟೆಷ್ಟು ಕಟ್ ಆಗುತ್ತಿದೆ ಎಂಬುದು ಹಲವರಿಗೆ ತಿಳಿದಿರುವುದೇ ಇಲ್ಲ. ಈ ಬಗ್ಗೆ ಬ್ಯಾಂಕಿನ ಅಂತರ್ಜಾಲ ತಾಣದಲ್ಲಿ ಮಾಹಿತಿ ಇದ್ದರೂ ಅನೇಕರು ಇದರ ಬಗ್ಗೆ ಲಕ್ಷ್ಯವನ್ನೇ ಕೊಟ್ಟಿರುವುದಿಲ್ಲ.

ಖಾತೆಯಿಂದ ಎಷ್ಟು ಹಣವನ್ನು ಡೆಬಿಟ್ ಮಾಡಲಾಗಿದೆ ಎಂಬುದು ಬ್ಯಾಂಕ್ ಸ್ಟೇಟ್ಮೆಂಟ್ ಸಿಕ್ಕ ಮೇಲೆಯೇ ತಿಳಿದುಬರುತ್ತದೆ. ಇತ್ತೀಚಿನ ದಿನಗಳಲ್ಲಿ ಬ್ಯಾಂಕ್ ಸ್ಟೇಟ್ಮೆಂಟ್ ಗಳು ಈಮೇಲ್ ಮೂಲಕ ಬರುವುದರಿಂದ ಹಲವರು ಅದನ್ನು ತೆರೆದು ನೋಡಲು ಕೂಡ ಹೋಗುವುದಿಲ್ಲ. ನೋಡಿದಾಗ ಶಾಕ್ ಆಗುತ್ತಾರೆ. [ಒಂದು ದಿನದ ಬ್ಯಾಂಕ್ ಮುಷ್ಕರದಿಂದಾದ ನಷ್ಟವೆಷ್ಟು?]

Services provided by banks and charges imposed

ಕನಿಷ್ಠ ಬ್ಯಾಲನ್ಸ್

ಹಲವಾರು ಬ್ಯಾಂಕುಗಳು ಕನಿಷ್ಠ ಬ್ಯಾಲನ್ಸ್ ಮೇನ್ಟೇನ್ ಮಾಡಲು ಗ್ರಾಹಕರಿಗೆ ಶಿಫಾರಸು ಮಾಡುತ್ತವೆ. ಇದು ಬೇರೆ ಬೇರೆ ಬ್ಯಾಂಕುಗಳಲ್ಲಿ ಬೇರೆ ಬೇರೆಯಾಗಿರುತ್ತವೆ. ಖಾತೆಯಲ್ಲಿ ಕನಿಷ್ಠ ಹಣಕ್ಕಿಂತ ಕಡಿಮೆಯಿಲ್ಲದೆ ಮುಲಾಜಿಲ್ಲದೆ ಗ್ರಾಹಕನ ಮೇಲೆ ದಂಡ ವಿಧಿಸುತ್ತದೆ ಮತ್ತು ಖಾತೆಯಿಂದಲೇ ದಂಡದ ಹಣವನ್ನು ಹಿಂತೆಗೆದುಕೊಂಡಿರುತ್ತದೆ.

Services provided by banks and charges imposed

ಹಣ ನೀಡಿಕೆ ನಿಲ್ಲಿಸುವುದು

ಯಾರಿಗೋ ಹಣ ಸಂದಾಯವಾಗಲು ಚೆಕ್ ನೀಡಿರುತ್ತೀರಿ. ಅವರು ಬ್ಯಾಂಕಿಗೆ ಸಲ್ಲಿಸಿರುತ್ತಾರೆ. ಯಾವುದೋ ಕಾರಣಕ್ಕೆ ಹಣ ಸಂದಾಯವಾಗಬಾರದೆಂದು ಬ್ಯಾಂಕಿಗೆ ಸೂಚನೆ ನೀಡುತ್ತೀರಿ. ಇದಕ್ಕೂ ಕೂಡ ಕೆಲವೊಂದು ಬ್ಯಾಂಕುಗಳು ಶುಲ್ಕ ವಿಧಿಸುತ್ತವೆ. ಕೆಲವೊಂದು ಬ್ಯಾಂಕುಗಳು ತಮ್ಮ ನೆಚ್ಚಿನ ಗ್ರಾಹಕರಿಗೆ ಉಚಿತ ಸೇವೆಯನ್ನೂ ನೀಡುತ್ತವೆ. [ತೆರಿಗೆ ಟೋಪಿ ತಪ್ಪಿಸಲು ಇಲಾಖೆ ಮಾಸ್ಟರ್ ಪ್ಲ್ಯಾನ್]

Services provided by banks and charges imposed

ಡೆಬಿಟ್ ಕಾರ್ಡ್ ಶುಲ್ಕ

ಡೆಬಿಟ್ ಕಾರ್ಡ್ ಬಳಕೆಯ ಮೇಲೆ ಕೂಡ ಕೆಲವೊಂದು ಬ್ಯಾಂಕುಗಳು ಶುಲ್ಕ ವಿಧಿಸುತ್ತವೆ. 100 ರು.ನಿಂದ 500 ರು.ವರೆಗೆ ಶುಲ್ಕ ವಿಧಿಸುವ ಬ್ಯಾಂಕುಗಳೂ ಇವೆ. ಕುಟುಂಬದ ಸದಸ್ಯರಿಗಾಗಿ ಆ್ಯಡ್ ಆನ್ ಡೆಬಿಟ್ ಕಾರ್ಡ್ ಪಡೆದುಕೊಂಡಿದ್ದರೆ ಅದಕ್ಕೂ ಪ್ರತ್ಯೇಕವಾದಿ ಶುಲ್ಕವಿರುತ್ತದೆ. ಇದು ನಿಮ್ಮ ಗಮನಕ್ಕಿರಲಿ.

Services provided by banks and charges imposed

ಈಮೇಲ್/ಎಸ್ಎಮ್ಎಸ್ ಅಲರ್ಟ್

ಬ್ಯಾಂಕ್ ಖಾತೆಯಲ್ಲಿ ಇಟ್ಟಿರುವ ಬ್ಯಾಲನ್ಸ್, ಜಮಾವಣೆ, ಹಿಂತೆಗೆತ ಮುಂತಾದವಕ್ಕೆ ಸಂಬಂಧಿಸಿದಂತೆ ಹಲವಾರು ಬ್ಯಾಂಕುಗಳು ಗ್ರಾಹಕರಿಗೆ ಈಮೇಲ್ ಅಥವಾ ಎಸ್ಎಮ್ಎಸ್ ಸಂದೇಶ ರವಾನಿಸುತ್ತವೆ. ಅದನ್ನು ನೋಡಿ ನಾವು ಖುಷಿಪಟ್ಟಿರುತ್ತೇವೆ. ಆದರೆ, ಇದಕ್ಕೂ ಬ್ಯಾಂಕುಗಳು ಶುಲ್ಕ ವಿಧಿಸುತ್ತವೆ ಎಂಬುದು ಹಲವರಿಗೆ ಗೊತ್ತಿರುವುದಿಲ್ಲ.

Services provided by banks and charges imposed

ಬ್ಯಾಂಕ್ ಸ್ಟೇಟ್ಮೆಂಟ್

ಇತ್ತೀಚಿನ ದಿನಗಳಲ್ಲಿ ಬ್ಯಾಂಕುಗಳು ಈಮೇಲ್ ಮುಖಾಂತರವೇ ತ್ರೈಮಾಸಿಕ ಸ್ಟೇಟ್ಮೆಂಟ್ ನೀಡುತ್ತಿವೆ. ಇದಕ್ಕೆ ಹೊರತಾಗಿ ಯಾವುದೋ ಕಾರಣಕ್ಕೆಂದು ಬ್ಯಾಂಕ್ ಸ್ಟೇಟ್ಮೆಂಟ್ ಕೇಳಿದರೆ ಅದಕ್ಕೆ ಬ್ಯಾಂಕುಗಳು ಶುಲ್ಕಗಳನ್ನು ವಿಧಿಸುತ್ತವೆ. ಇದನ್ನು ಹೆಚ್ಚಾಗಿ ಎಲ್ಲ ಬ್ಯಾಂಕುಗಳು ಪಾಲಿಸುತ್ತವೆ.

Services provided by banks and charges imposed

ಸ್ಟಾಂಡಿಂಗ್ ಇನ್‌ಸ್ಟ್ರಕ್ಷನ್

ಇಂತಿಂಥವರಿಗೆ ಇಂತಿಷ್ಟು ಹಣವನ್ನು ಇಂಥ ನಿಖರವಾದಿ ದಿನಗಳಲ್ಲಿ ನೀಡಬೇಕು ಎಂಬುದಾಗಿ ಸ್ಟಾಂಡಿಂಗ್ ಇನ್‌ಸ್ಟ್ರಕ್ಷನ್ ನೀಡಲು ಗ್ರಾಹಕನಿಗೆ ಸಾಧ್ಯವಿದೆ. ಆದರೆ, ಅಂಥ ದಿನದಂದು ಖಾತೆಯಲ್ಲಿ ಅಷ್ಟು ಹಣ ಇಲ್ಲದಿದ್ದರೆ ಬ್ಯಾಂಕುಗಳು ಗ್ರಾಹಕರಿಗೆ ಶುಲ್ಕ/ದಂಡ ವಿಧಿಸುತ್ತವೆ.

Services provided by banks and charges imposed

ಪಾಸ್ವರ್ಡ್ ಮರೆತಾಗ

ನೆಟ್ ಬ್ಯಾಂಕಿಂಗ್ ಪಾಸ್ವರ್ಡ್ ಅಥವಾ ಎಟಿಎಂ ಪಿನ್ ಪಾಸ್ವರ್ಡ್ ಮರೆತುಹೋದಾಗ ಕೆಲವೊಂದು ಬ್ಯಾಂಕುಗಳು ಪಾರ್ವರ್ಡ್ ಜೆನರೇಟ್ ಮಾಡಿಕೊಡಲು ಶುಲ್ಕ ವಿಧಿಸುತ್ತವೆ. ಇಂಟರ್ನೆಟ್ ಬ್ಯಾಂಕಿಂಗ್ ಮೂಲಕ ಪಾಸ್ವರ್ಡ್ ರಿಕವರ್ ಮಾಡಬಹುದು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
No bank will give you service free of cost. Though almost everyone will be having bank account, many may not be knowing how banks impose charge of fine on the customer. Internet banking is made life easier but charges also will be applied. Know about such things.
Please Wait while comments are loading...