ಮಾ.31ರ ಬಳಿಕ ಬ್ಯಾಂಕ್‌ಗಳಿಗೆ ಐದು ದಿನದ ಸರಣಿ ರಜೆ
ಬೆಂಗಳೂರು, ಮಾ. 16 : ಬ್ಯಾಂಕ್‌ಗಳ ಕೆಲಸಗಳನ್ನು ಮಾ.31ರೊಳಗೆ ಮುಗಿಸಿಕೊಳ್ಳುವುದು ಒಳ್ಳೆಯದು. ಏಪ್ರಿಲ್ 1ರಿಂದ ಐದು ದಿನಗಳ ಕಾಲ ಬ್ಯಾಂಕ್‌ಗಳಿಗೆ ಸರಣಿ ರಜೆ ಇದೆ. ಸರಣಿ ರಜೆಯಿಂದಾಗಿ ಚೆಕ್ ವಿಲೇವಾರಿ ತಡವಾಗಬಹುದು ಮತ್ತು ಎಟಿಎಂಗಳಲ್ಲೂ ಹಣ ಖಾಲಿಯಾಗುವ ಸಾಧ್ಯತೆ ಇದೆ.
ಮಾರ್ಚ್ 31ಕ್ಕೆ ಆರ್ಥಿಕ ವರ್ಷ ಮುಕ್ತಾಯಗೊಳ್ಳಲಿದ್ದು ನಂತರ ಸರಣಿ ರಜೆಗಳು ಲಭಿಸುತ್ತವೆ. ಏ.4ರ ಶನಿವಾರ ಒಂದು ದಿನ ಸಿಬ್ಬಂದಿಗಳು ರಜೆ ಹಾಕಿದರೆ ಐದು ದಿನಗಳ ನಿರಂತರ ರಜೆ ದೊರೆಯಲಿದೆ. ಆದ್ದರಿಂದ ಬ್ಯಾಂಕ್‌ಗಳ ಕೆಲಸಗಳನ್ನು 31ರೊಳಗೆ ಮುಗಿಸಿಕೊಳ್ಳುವುದು ಉತ್ತಮ.

ಸಾಲು-ಸಾಲು ರಜೆ : ಮಾರ್ಚ್ 31ಕ್ಕೆ ಆರ್ಥಿಕ ವರ್ಷ ಮುಕ್ತಾಯಗೊಳ್ಳಲಿದೆ. ಏ.1ರಂದು ಬ್ಯಾಂಕ್ ವ್ಯವಹಾರಗಳಿಗೆ ವಾರ್ಷಿಕ ರಜೆ ಇದೆ. ಏ.2ರಂದು ಮಹಾವೀರ ಜಯಂತಿ, ಏ.3ರಂದು ಗುಡ್ ಫ್ರೈಡೆ. ಏ.4ರ ಶನಿವಾರ ಸಿಬ್ಬಂದಿ ರಜೆ ಹಾಕಿದರೆ ಏ.5ರಂದು ಭಾನುವಾರದ ರಜೆ ದೊರೆಯಲಿದೆ. [ಬ್ಯಾಂಕ್ ರಜೆಗಳ ಪಟ್ಟಿ ಇಲ್ಲಿದೆ]
ಸರಣಿ ರಜೆಗಳು ದೊರೆಯುವುದರಿಂದ ಚೆಕ್‌ಗಳ ವಿಲೇವಾರಿ ತಡವಾಗಬಹುದು ಮತ್ತು ಎಟಿಎಂಗಳಲ್ಲಿ ಹಣವೂ ಖಾಲಿಯಾಗಬಹುದು. ಆದ್ದರಿಂದ ಬ್ಯಾಂಕ್‌ಗಳಲ್ಲಿ ಕೆಲಸವಿರುವ ಗ್ರಾಹಕರು ಮಾ.31ರೊಳಗೆ ತಮ್ಮ ಎಲ್ಲಾ ಕೆಲಸಗಳನ್ನು ಪೂರ್ಣಗೊಳಿಕೊಂಡರೆ ಉತ್ತಮ. [2015ರ ಸರ್ಕಾರಿ ರಜಾ ದಿನಗಳು]
ಪ್ರವಾಸಕ್ಕೆ ಹೋಗಲು ಅವಕಾಶ : ಬ್ಯಾಂಕ್ ಸಿಬ್ಬಂದಿಗಳು ಸರಣಿ ರಜೆಯ ಲಾಭ ಪಡೆದು ಪ್ರವಾಸ ತೆರಳಬಹುದು. ಎರಡು ಸರ್ಕಾರಿ ರಜೆಗಳು ಬರುವುದರಿಂದ ಸರ್ಕಾರಿ ನೌಕರರು ಪ್ರವಾಸದ ಯೋಜನೆ ಸಿದ್ಧಪಡಿಸಬಹುದು. ಸರಣಿ ರಜೆ ಹಿನ್ನಲೆಯಲ್ಲಿ ಪ್ರವಾಸ ಹೋಗಲು ಉತ್ತಮ ಅವಕಾಶ ಲಭ್ಯವಾಗಲಿದೆ.












Click it and Unblock the Notifications