ಮಾರುಕಟ್ಟೆ ತಲ್ಲಣ: ಸೆನ್ಸೆಕ್ಸ್ 572 ಅಂಶ, ನಿಫ್ಟಿ 181 ಅಂಶ ಕುಸಿತ

ಮುಂಬೈ, ಡಿಸೆಂಬರ್ 6: ಭಾರತೀಯ ಷೇರು ಮಾರುಕಟ್ಟೆಯಲ್ಲಿ ಗುರುವಾರ ಇಳಿಕೆ ಹಾದಿ ಮುಂದುವರಿದಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಹಣಕಾಸು ನೀತಿಗೆ ಮಾರುಕಟ್ಟೆ ನಕಾರಾಟ್ಮಕವಾಗಿ ಸ್ಪಂದಿಸಿದೆ ಎಂಬ ಉತ್ತರ ದೊರೆಯುತ್ತದೆ. ಸೆನ್ಸೆಕ್ಸ್ ಸೂಚ್ಯಂಕವು 572.28 ಅಂಶ ಕುಸಿದು, 35,312.13 ಅಂಶಕ್ಕೆ ತಲುಪಿದೆ.

ಇನ್ನು ಎನ್ ಎಸ್ ಇ ನಿಫ್ಟಿಯು 181.75 ಅಂಶಗಳಷ್ಟು ಕುಸಿದು 10,601.15 ಅಂಶಕ್ಕೆ ಬಂದು ನಿಂತಿದೆ. ಗುರುವಾರದಂದು ಷೇರು ಮಾರುಕಟ್ಟೆ ಇಳಿಕೆಗೆ ಪ್ರಮುಖವಾಗಿ ಕಾರಣಗಳನ್ನು ಈ ರೀತಿ ಪಟ್ಟಿ ಮಾಡಲಾಗಿದೆ.

* ಜಾಗತಿಕ ಆರ್ಥಿಕತೆಯಲ್ಲಿನ ಅನಿಶ್ಚಿತತೆಯು ಏಷ್ಯನ್ ಮಾರುಕಟ್ಟೆಯಲ್ಲಿ ಮಾರಾಟದ ಒತ್ತಡ ಸೃಷ್ಟಿಸಿದೆ. ಚೀನಾ ಹಾಗೂ ಹಾಂಕಾಂಗ್ ನಲ್ಲಿ ತಂತ್ರಜ್ಞಾನ ಕಂಪನಿ ಷೇರುಗಳಲ್ಲಿ ಇಳಿಕೆ ಆಗಿದೆ. ಹುವೈ ಕಂಪನಿಯ ಮುಖ್ಯ ಆರ್ಥಿಕ ಅಧಿಕಾರಿ ಬಂಧನದ ನಂತರ ಈ ಪರಿಸ್ಥಿತಿ ಸೃಷ್ಟಿ ಆಗಿದೆ.

Sensex plunges 572 points, Nifty holds 10,600; Here are the reasons

* ಆರ್ ಬಿಐನ ಹಣಕಾಸು ನೀತಿ ಪ್ರಕಟ ಆದ ನಂತರ ಬ್ಯಾಂಕಿಂಗ್ ಷೇರುಗಳಲ್ಲಿ ಒತ್ತಡ ಕಾಣಿಸಿಕೊಂಡಿತು. ತೈಲ ಉತ್ಪಾದನೆ ಕಡಿತ ವಿಚಾರವಾಗಿ ಒಪೆಕ್ ಸಭೆಯಿದ್ದು, ಆ ಕಾರಣಕ್ಕೆ ತೈಲ ಕಂಪನಿ ಷೇರುಗಳು ಕುಸಿತವಾಗಿದೆ. ಜತೆಗೆ ಲೋಹದ ಷೇರುಗಳು ಕುಸಿದವು. ಯೆಸ್ ಬ್ಯಾಂಕ್, ಕೊಟಕ್ ಮಹೀಂದ್ರಾ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಇಂಡಸ್ ಇಂಡ್ ಬ್ಯಾಂಕ್, ಆಕ್ಸಿಸ್ ಬ್ಯಾಂಕ್ ಹಾಗೂ ಎಚ್ ಡಿಎಫ್ ಸಿ ಬ್ಯಾಂಕ್ ಕುಸಿತ ದಾಖಲಿಸಿದವು.

* ಡಾಲರ್ ಬಿರುದ್ಧ ರುಪಾಯಿ ಮೌಲ್ಯ ಐವತ್ನಾಲ್ಕು ಪೈಸೆ ಕುಸಿಯಿತು. ಎಪ್ಪತ್ತೊಂದು ರುಪಾಯಿ ತಲುಪಿತು. ಜಿಡಿಪಿ ಪ್ರಗತಿ ದರ ಕಡಿಮೆ ಆಗಬಹುದು ಎಂಬ ಅಂದಾಜು ಮಾಡಿದ್ದು, ಮುಂದಿನ ವರ್ಷದ ಕೊನೆ ಹೊತ್ತಿಗೆ ಡಾಲರ್ ವಿರುದ್ಧ ರುಪಾಯಿ ಎಪ್ಪತ್ತೈದಕ್ಕೆ ತಲುಪಬಹುದು ಎಂಬ ಅಂದಾಜು ಇರುವುದು ಕೂಡ ನಕಾರಾತ್ಮಕ ಅಂಶವಾಗಿದೆ.

* ವಿದೇಶಿ ಹೂಡಿಕೆದಾರರು, ದೇಶೀಯ ಸಾಂಸ್ಥಿಕ ಹೂಡಿಕೆದಾರರು ಷೇರು ಮಾರಾಟಕ್ಕೆ ಮುಂದಾಗಿದ್ದರಿಂದ ಮಾರುಕಟ್ಟೆಗೆ ಹಿನ್ನಡೆ ಆಗಲು ಕಾರಣವಾಯಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+