ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಷೇರು ಮಾರುಕಟ್ಟೆ ಭಾರೀ ಕುಸಿತ: ಹೂಡಿಕೆದಾರರು ಕಂಗಾಲು

|
Google Oneindia Kannada News

ಮುಂಬೈ, ಮೇ. 6: ಕಳೆದ ಒಂದು ತಿಂಗಳಿದ್ದ ಇಳಿಕೆ ಹಾದಿಯಲ್ಲಿ ಸಾಗುತ್ತಿದ್ದ ಷೇರು ಮಾರುಕಟ್ಟೆ ಬುಧವಾರ ಏಕಾಏಕಿ ದಿಢೀರ್ ಕುಸಿತ ಕಂಡಿದೆ. ಸೆನ್ಸೆಕ್ಸ್‌ 722.77 ಅಂಕಗಳ ಭಾರೀ ಕುಸಿತ ಅನುಭವಿಸಿದರೆ, ರಾಷ್ಟ್ರೀಯ ಷೇರು ಮಾರುಕಟ್ಟೆಯ ನಿಫ್ಟಿ 227.80 ಅಂಕ ಕಳೆದುಕೊಂಡಿದೆ. 2015 ರಲ್ಲಿ ಇದೇ ಮೊದಲ ಬಾರಿಗೆ ಕನಿಷ್ಠ ಅಂಕ ದಾಖಲಿಸಿದೆ.

ಅಮೆರಿಕ, ಚೀನಾ ಮತ್ತಿ ಐರೋಪ್ಯ ವಲಯದ ಆರ್ಥಿಕತೆಯಲ್ಲಿ ಕಂಡು ಬಂದಿರುವ ಏರುಪೇರುಗಳು, ಆರ್ಥಿಕ ಅಸ್ಥಿರತೆ ನಮ್ಮ ದೇಶದ ಮಾರುಕಟ್ಟೆಯ ಮೇಲೆ ತೀವ್ರ ತೆರನಾದ ಪರಿಣಾಮ ಉಂಟುಮಾಡಿದೆ. ಸಲ್ಮಾನ್ ಖಾನ್ ಪ್ರಕರಣದ ತೀರ್ಪು ಸಹ ವ್ಯತಿರಿಕ್ತ ಪರಿಣಾಮ ಬೀರಿದೆ.[ಪಿಪಿಎಫ್ ಅವಧಿ 2 ವರ್ಷ ಹೆಚ್ಚಳಕ್ಕೆ ಮುಂದಾದ ಕೇಂದ್ರ]

share market

722.77 ಅಂಕ ಕಳೆದುಕೊಂಡ (ಶೇ.2.6) ಸೆನ್ಸೆಕ್ಸ್ 26,717.37 ಅಂಕಗಳಲ್ಲಿ ಕೊನೆಯಾಗಿದೆ. ನಿಫ್ಟಿ 8097.00 ಅಂಕಕ್ಕೆ ಬಂದು ನಿಂತಿದೆ. ಬುಧವಾರ 599 ಕಂಪನಿಗಳ ಷೇರುಗಳು ಮಾತ್ರ ಏರಿಕೆ ದಾಖಲಿಸಿದದ್ದವು.

ಭಾರ್ತಿ ಏರ್‌ಟೆಲ್‌ ಮುನ್ನಡೆ ಕಾಯ್ದುಕೊಂಡಿತ್ತು. ಆದರೆ ಬಿಎಚ್‌ಇಎಲ್‌, ಐಸಿಐಸಿಐ ಬ್ಯಾಂಕ್‌, ಎಲ್‌ ಅಂಡ್‌ ಟಿ, ಮಾರುತಿ ಮತ್ತು ಎನ್‌ ಟಿ ಪಿ ಸಿ ಷೇರುಗಳು ತೀವ್ರ ಕುಸಿತ ಕಂಡವು.[ಆಸ್ತಿ ಮೇಲೆ ಸಾಲ ಪಡೆಯುವಾಗ ಇವೆಲ್ಲ ಲೆಕ್ಕಕ್ಕೆ ಬರುತ್ತವೆ]

ನಿರಂತರ ಕುಸಿತದ ಪರಿಣಾಮ ಮಾರುಕಟ್ಟೆಯಲ್ಲಿ ಬಂಡವಾಳ ಹೂಡಲು ಹೂಡಿಕೆದಾರರು ಹಿಂದೇಟು ಹಾಕುತ್ತಿದ್ದಾರೆ. ವಿದೇಶಿ ಹೂಡಿಕೆ ಪ್ರಮಾಣದಲ್ಲೂ ಗಣನೀಯ ಇಳಿಕೆ ಕಂಡುಬಂದಿದೆ. ಇತ್ತೀಚೆಗಷ್ಟೇ ತೈಲ ಬೆಲೆಯಲ್ಲಿ ಕೇಂದ್ರ ಪೆಟ್ರೊಲಿಯಂ ಸಚಿವಾಲಯ ತೀವ್ರ ಏರಿಕೆ ಮಾಡಿತ್ತು. 30 ಸಾವಿರ ಸಮೀಪಿಸಿದ್ದ ಮಾರುಕಟ್ಟೆ ಇದೀಗ ಇಳಿಕೆ ಹಾದಿ ಹಿಡಿದಿದೆ.

ಎರೋಸ್ ಷೇರು ತೀವ್ರ ಕುಸಿತ
ಸಲ್ಮಾನ್ ಖಾನ್ ಪ್ರಕರಣದ ತೀರ್ಪು ಎಂಟರ್ ಟೆನ್ ಮೆಂಟ್ ಸಂಸ್ಥೆ ಎರೋಸ್ ಷೇರುಗಳ ಮೇಲೆ ಪರಿಣಾಮ ಬೀರಿದೆ. ಎರೋಸ್ ಶೇ. 5.72 ಕುಸಿತ ಕಂಡಿದೆ. 380.80 ರು ನಲ್ಲಿ ವಹಿವಾಟು ನಡೆಸುತ್ತಿದ್ದ ಷೇರು, 375 ರು ನಲ್ಲಿ ಕೊನೆಯಾಗಿದೆ.

English summary
Mumbai: Indian shares slumped more than 2 percent on Wednesday to wipe out their entire gains for the year because of strong selling on algorithmic trading platforms, while continued offloading by foreign investors amid retrospective tax worries also weighed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X