ಮತ್ತೆ ದಾಖಲೆಯ ಮಟ್ಟಕ್ಕೇರಿದ ಸೆನ್ಸೆಕ್ಸ್: 50 ಸಾವಿರ ಗಡಿದಾಟಿದೆ!

ನವದೆಹಲಿ, ಫೆಬ್ರವರಿ 03: ಭಾರತೀಯ ಮಾರುಕಟ್ಟೆಯಲ್ಲಿ ಷೇರುಪೇಟೆ ನಾಗಾಲೋಟ ಮುಂದುವರಿದಿದ್ದು, ಬುಧವಾರ ಮುಂಬೈ ಷೇರುಪೇಟೆ ಸೆನ್ಸೆಕ್ಸ್ ಮತ್ತು ರಾಷ್ಟ್ರೀಯ ಷೇರುಪೇಟೆ ನಿಫ್ಟಿ ದಾಖಲೆಯ ಮಟ್ಟಕ್ಕೇರಿದೆ.

ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ ಶೇಕಡಾ 0.92ರಷ್ಟು ಅಥವಾ 458.03 ಪಾಯಿಂಟ್ಸ್ ಏರಿಕೆಗೊಂಡು 50,255.75 ಪಾಯಿಂಟ್ಸ್‌ ತಲುಪಿದೆ. ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ ಶೇಕಡಾ 0.97ರಷ್ಟು ಅಥವಾ 142.10 ಪಾಯಿಂಟ್ಸ್ ಹೆಚ್ಚಳಗೊಂಡು 14,790 ಪಾಯಿಂಟ್ಸ್‌ಗೆ ಮುಟ್ಟಿದೆ.

ಇಂದು 1752 ಷೇರುಗಳು ಏರಿಕೆಗೊಂಡರೆ, 1189 ಷೇರುಗಳು ಕುಸಿತಗೊಂಡಿವೆ ಮತ್ತು 149 ಷೇರುಗಳ ಮೌಲ್ಯದಲ್ಲಿ ಯಾವುದೇ ಬದಲಾವಣೆ ಆಗಿಲ್ಲ.

Sensex And Nifty At Record High: Sensex Above 50,000 Points

ಇಂಡಸ್ಇಂಡ್ ಬ್ಯಾಂಕ್, ಪವರ್ ಗ್ರಿಡ್ ಕಾರ್ಪ್, ಸನ್ ಫಾರ್ಮಾ, ಡಾ. ರೆಡ್ಡಿ ಲ್ಯಾಬ್ಸ್ ಮತ್ತು ಡಿವಿಸ್ ಲ್ಯಾಬ್ ನಿಫ್ಟಿಯಲ್ಲಿ ಪ್ರಮುಖ ಲಾಭ ಗಳಿಸಿದ ಷೇರುಗಳಾಗಿವೆ, ಶ್ರೀ ಸಿಮೆಂಟ್ಸ್, ಅಲ್ಟ್ರಾಟೆಕ್ ಸಿಮೆಂಟ್, ಮಾರುತಿ ಸುಜುಕಿ, ಐಟಿಸಿ ಮತ್ತು ಯುಪಿಎಲ್ ಪ್ರಮುಖವಾಗಿ ನಷ್ಟ ಅನುಭವಿಸಿದ ಷೇರುಗಳಾಗಿವೆ.

ಇಂದು ಎಫ್‌ಎಂಸಿಜಿಯನ್ನು ಹೊರತುಪಡಿಸಿ, ಎಲ್ಲಾ ಇತರ ವಲಯ ಸೂಚ್ಯಂಕಗಳು ತಲಾ 2 ಪ್ರತಿಶತದಷ್ಟು ಏರಿಕೆಯಾಗಿವೆ ಮತ್ತು ಆಟೋ, ಲೋಹ ಮತ್ತು ಇಂಧನ ಸೂಚ್ಯಂಕಗಳು ತಲಾ 1 ಪ್ರತಿಶತದಷ್ಟು ಹೆಚ್ಚಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+