ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ 2ನೇ ಅಲೆ ಆರ್ಥಿಕ ಪುನಶ್ಚೇತನಕ್ಕೆ ಅಪಾಯಕಾರಿ: ಆರ್‌ಬಿಐ ಗವರ್ನರ್

|
Google Oneindia Kannada News

ನವದೆಹಲಿ, ಏಪ್ರಿಲ್ 23: ಕೊರೊನಾ ಎರಡನೇ ಅಲೆಯು ಭಾರತದ ಆರ್ಥಿಕ ಪುನಶ್ಚೇತನಕ್ಕೆ ಅಪಾಯಕಾರಿಯಾಗಿದೆ ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಹೇಳಿದ್ದಾರೆ.

ಪ್ರಸಕ್ತ ಆರ್ಥಿಕ ಸಾಲಿನ ತ್ರೈಮಾಸಿಕ ವಿತ್ತೀಯ ಸಭೆಯಲ್ಲಿ ರೆಪೊ ದರ ಮತ್ತು ರಿವರ್ಸ್ ರೆಪೊ ದರವನ್ನು ಬದಲಾಯಿಸದೆ ಕಳೆದ ಆರ್ಥಿಕ ಸಾಲಿನ ಕೊನೆಯ ತ್ರೈಮಾಸಿಕದಷ್ಟೇ ಇರಿಸಿದೆ.

ಅಂತರರಾಜ್ಯ ಆಮ್ಲಜನಕ ಪೂರೈಕೆ ವಾಹನಗಳಿಗೆ ಯಾವುದೇ ನಿರ್ಬಂಧವಿಲ್ಲಅಂತರರಾಜ್ಯ ಆಮ್ಲಜನಕ ಪೂರೈಕೆ ವಾಹನಗಳಿಗೆ ಯಾವುದೇ ನಿರ್ಬಂಧವಿಲ್ಲ

ಚಿಲ್ಲರೆ ಹಣದುಬ್ಬರ ಮತ್ತು ಕೊರೊನಾ ಎರಡನೇ ಅಲೆ ಎದ್ದ ನಂತರ ಉಂಟಾಗಿರುವ ಆರ್ಥಿಕ ಅನಿಶ್ಚಿತತೆ ಹಿನ್ನೆಲೆಯಲ್ಲಿ ಆರ್ ಬಿಐ ಈ ನಿರ್ಧಾರಕ್ಕೆ ಬಂದಿದೆ. 2021-22ನೇ ಸಾಲಿನಲ್ಲಿ ಹಣದುಬ್ಬರ ದರವನ್ನು ಶೇಕಡಾ 5ರಷ್ಟು ಆರ್‌ಬಿಐಯ ವಿತ್ತೀಯ ನೀತಿ ಸಮಿತಿ ಸದಸ್ಯರು ಅಂದಾಜು ಮಾಡಿದ್ದಾರೆ.

Second COVID-19 Wave Biggest Risk To Economic Recovery: RBI Governor

ದೇಶದಲ್ಲಿ ಪ್ರತಿದಿನ ಹೊಸ ಕೊರೊನಾ ಸೋಂಕಿನ ಸಂಖ್ಯೆ ಹೆಚ್ಚಾಗುತ್ತಲೇ ಇದೆ, ಸ್ಥಳೀಯ ಮಟ್ಟದಲ್ಲಿ ಮಿನಿ ಲಾಕ್‌ಡೌನ್ ಹೇರಲಾಗುತ್ತಿದೆ, ಇದರಿಂದ ವ್ಯಾಪಾರ-ವಹಿವಾಟು ಸಂಪರ್ಕ-ತೀವ್ರ ವಲಯಗಳ ಬೇಡಿಕೆಯನ್ನು ಕುಂಠಿತಗೊಳಿಸುತ್ತದೆ, ನಿಧಾನ ಬಳಕೆ ಬೇಡಿಕೆ ಮತ್ತು ದೊಡ್ಡ ಹೂಡಿಕೆಗಳು, ಬೆಳವಣಿಗೆಯನ್ನು ತಡೆಯುತ್ತದೆ ಎಂದು ವಿತ್ತೀಯ ಸಮಿತಿ ಸದಸ್ಯರು ಅಭಿಪ್ರಾಯಪಟ್ಟಿದ್ದಾರೆ.

ಬೇಡಿಕೆಗಳ ಪರಿಸ್ಥಿತಿಯನ್ನು ಸುಧಾರಿಸುವುದು, ಸರ್ಕಾರದಿಂದ ಹೂಡಿಕೆಯ ವರ್ಧನೆಯ ಕ್ರಮಗಳು ಬೆಳವಣಿಗೆಯ ನಿರೀಕ್ಷೆಗಳನ್ನು ಹುಸಿಮಾಡಿವೆ. ದೇಶಲ್ಲಿ ಕೋವಿಡ್-19 ಸೋಂಕಿನ ಸಂಖ್ಯೆ ವೇಗವಾಗಿ ವೃದ್ಧಿಸುತ್ತಿದೆ.

ಈ ಸಂದರ್ಭದಲ್ಲಿ ಕಳೆದ ವರ್ಷ ಲಾಕ್ ಡೌನ್ ನಂತರ ತೀವ್ರ ಕುಸಿತ ಕಂಡ ಆರ್ಥಿಕತೆಯನ್ನು ಪುನಶ್ಚೇತನಗೊಳಿಸುವುದು ದೊಡ್ಡ ಸವಾಲಾಗಿ ಪರಿಣಮಿಸಿದೆ.

ಆರ್ಥಿಕ ಚೇತರಿಕೆಯನ್ನು ಪರಿಣಾಮಕಾರಿಯಾಗಿ ಭದ್ರಪಡಿಸುವುದು ಈ ಹೊತ್ತಿನ ಅಗತ್ಯವಾಗಿದ್ದು, ಈ ಮೂಲಕ ದೀರ್ಘ ಕಾಲಕ್ಕೆ ವಿಸ್ತಾರವಾಗಿ ಆರ್ಥಿಕ ಬೆಳವಣಿಗೆಯನ್ನು ಕಾಣಬಹುದಾಗಿದೆ ಎಂದಿದ್ದಾರೆ.

English summary
The six-member Monetary Policy Committee (MPC) of the Reserve Bank of India (RBI) believes that the dramatic surge in COVID-19 infections is the single biggest risk to India's economic growth, according to the minutes of the latest policy meeting released.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X