ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೆಬಿ ನಿಯಮ ಉಲ್ಲಂಘನೆ: ಅಂಬಾನಿ ಕುಟುಂಬಕ್ಕೆ 25ಕೋಟಿ ರು ದಂಡ

|
Google Oneindia Kannada News

ಮುಂಬೈ, ಏಪ್ರಿಲ್ 8: ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ (ಸೆಬಿ) ನಿಯಮಾವಳಿಗಳ ಉಲ್ಲಂಘನೆ ಮಾಡಿರುವ ಮುಕೇಶ್‌ ಮತ್ತು ಅನಿಲ್‌ ಅಂಬಾನಿ ಹಾಗೂ ಅವರ ಕುಟುಂಬ ಸದಸ್ಯರಿಗೆ 25 ಕೋಟಿ ರೂ ದಂಡ ವಿಧಿಸಲಾಗಿದೆ.

ಜನವರಿ 2000ರಲ್ಲಿ 38 ಹಂಚಿಕೆ ಘಟಕಗಳಿಗೆ ಪ್ರತಿ ಷೇರಿಗೆ 75 ರೂ ದರದಲ್ಲಿ ರಿಲಯನ್ಸ್ ಇಂಡಸ್ಟ್ರೀಸ್‌ನ 12 ಕೋಟಿ ಷೇರುಗಳ ವಿತರಣೆಗೆ ಸಂಬಂಧಿಸಿದಂತೆ ಅಕ್ರಮ ನಡೆದಿದೆ ಎಂದು ದೂರು ಬಂದಿತ್ತು. 2011 ರ ಸೆಬಿ ನಿಯಮಾವಳಿಗಳ ಉಲ್ಲಂಘನೆ, ಸ್ವಾಧೀನದ ನಿಯಮಗಳ ನಿಯಂತ್ರಣ ಸಂಖ್ಯೆ 11 (1) ರ ಪ್ರಕಾರ, ಸಾರ್ವಜನಿಕ ಪ್ರಕಟಣೆ ನೀಡದ ಹೊರತಾಗಿ ಮತದಾನದ ಹಕ್ಕಿನ ಶೇ.5ಕ್ಕೂ ಹೆಚ್ಚು ಹೆಚ್ಚುವರಿ ಷೇರುಗಳನ್ನು ಸ್ವಾಧೀನಪಡಿಸಿಕೊಳ್ಳಲು ಆರ್‌ಐಎಲ್‌ ಗೆ ನಿರ್ಬಂಧ ಹೇರಲಾಗಿತ್ತು.

ಆದರೆ, ಆರ್‌ಐಎಲ್ ಪ್ರವರ್ತಕರು ಮತ್ತು ಪರ್ಸನ್ಸ್ ಆಕ್ಟಿಂಗ್ ಇನ್ ಕನ್ಸರ್ಟ್ (ಪಿಎಸಿ) ಷೇರುಗಳನ್ನು ಸ್ವಾಧೀನಪಡಿಸಿಕೊಳ್ಳಲು ಯಾವುದೇ ಸಾರ್ವಜನಿಕ ಘೋಷಣೆ ಮಾಡದೆ, ಅಂಬಾನಿ ಕುಟುಂಬಸ್ಥರು 11(1)ರ ನಿಬಂಧನೆಗಳನ್ನು ಉಲ್ಲಂಘಿಸಿದ್ದಾರೆ ಎಂದು ಸೆಬಿಯ ನ್ಯಾಯ ನಿರ್ಣಯ ಅಧಿಕಾರಿ ಕೆ ಸರವಣನ್‌ ಆದೇಶದಲ್ಲಿ ತಿಳಿಸಿದ್ದಾರೆ.

SEBI Imposes ₹ 25 Crore Penalty On Mukesh and Anil Ambani and family

ಮುಕೇಶ್ ಅಂಬಾನಿ, ನೀತಾ ಅಂಬಾನಿ, ಅನಿಲ್ ಅಂಬಾನಿ, ಟೀನಾ ಅಂಬಾನಿ, ಮುಕೇಶ್ ಅಂಬಾನಿ ಮಕ್ಕಳಾದ ಆಕಾಶ್ ಮತ್ತು ಇಶಾ ಸೇರಿದಂತೆ 36 ಆರ್‌ಐಎಲ್ ಪ್ರವರ್ತಕರ ವಿರುದ್ಧ 2011 ರಲ್ಲಿ ನ್ಯಾಯ ನಿರ್ಣಯ ಪ್ರಕ್ರಿಯೆ ಆರಂಭಿಸಲಾಗಿತ್ತು. ಇದು ಉದ್ದೇಶಪೂರ್ವಕ ಆರೋಪ, ಅವಧಿ ಮೀರಿದ ನಿರ್ಣಯ ಎಂದು ಅಂಬಾನಿ ಕುಟುಂಬದವರು ನ್ಯಾಯ ನಿರ್ಣಯ ಅಧಿಕಾರಿ ಮುಂದೆ ವಾದಿಸಿದ್ದರು. ಆದರೆ, ನ್ಯಾಯ ನಿರ್ಣಯ ಅಧಿಕಾರಿ ಸರವಣನ್‌ ಅವರು 1995ರ ಸೆಬಿ ನಿಯಮಾವಳಿಗಳು 1956ರ ಕಂಪೆನಿ ಕಾಯಿದೆಯ ಉಲ್ಲಂಘನೆಯಾಗಿದೆ ಎಂದು ತಿಳಿಸಿ ರೂ.25 ಕೋಟಿ ದಂಡ ವಿಧಿಸಿದ್ದಾರೆ.(ಮಾಹಿತಿ ಕೃಪೆ: ಬಾರ್ ಅಂಡ್ ಬೆಂಚ್)

English summary
The Securities and Exchange Board of India has imposed a penalty of Rupees 25 Crores on prominent members of the Reliance family Mukesh Ambani, Anil Ambani.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X