ಬಿಸಾಡುವ ಕಸವೇ ಬಂಡವಾಳ, ಗುಜರಿ ವ್ಯಾಪಾರವನ್ನೇ ಕೋಟಿ ಉದ್ಯಮವಾಗಿಸಿದ ಸಾಮಾನ್ಯ ಯುವಕನ ರೋಚಕ ಸ್ಟೋರಿ

ತ್ಯಾಜ್ಯ ಎಂದು ಬಿಸಾಡುವ ವಸ್ತುಗಳನ್ನ ಬಳಸಿಕೊಂಡು ವ್ಯಕ್ತಿಯೊಬ್ಬರು ಚಮತ್ಕಾರವನ್ನೇ ಮಾಡಿ ಈಗ ದೊಡ್ಡ ಉದ್ಯಮವನ್ನೇ ಸೃಷ್ಟಿಸಿದ್ದಾರೆ. 'ಕಸದಿಂದ ರಸ ತೆಗೆಯುವುದು' ಎನ್ನುವ ಪದಕ್ಕೆ ಇದು ಸರಿಯಾಗಿ ಸೂಕ್ತವಾಗಿದೆ. ಹಾಗಾದ್ರೆ ಈ ಕುರಿತ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

'ವೇಸ್ಟ್ ಟು ವೆಲ್ತ್' (Waste to Wealth) ಪರಿಕಲ್ಪನೆಯಲ್ಲಿ ಅದ್ಭುತ ಯಶಸ್ಸು ಕಂಡ ಕುರಿತು ಉದ್ಯಮಿ ಆನಂದ್ ಠಾಕೂರ್ ಅವರು ತಮ್ಮ ಲಿಂಕ್ಡ್‌ಇನ್ ಪೋಸ್ಟ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಮರುಬಳಕೆ ಹಾಗೂ ಸೃಜನಶೀಲತೆಯ ಮೂಲಕ ಪರಿಸರ ಸಂರಕ್ಷಣೆ ಮತ್ತು ಉದ್ಯೋಗ ಸೃಷ್ಟಿ ಎರಡನ್ನೂ ಸಾಧಿಸುವ ಈ ವಿಶಿಷ್ಟ ಮಾದರಿಯು ಇಂದಿನ ಯುವ ಸ್ಟಾರ್ಟ್‌ಅಪ್‌ಗಳಿಗೆ ಹೊಸ ದಾರಿದೀಪವಾಗಿದೆ.

ScrapUncle Turning Waste Into Wealth With a Unique Recycling Business Huge Viral on Social media

ಗುಜರಿ ಮಾರುಕಟ್ಟೆಯಲ್ಲಿ ದೊಡ್ಡ ಕ್ರಾಂತಿ

ಸಾಮಾನ್ಯವಾಗಿ ಜನರು ಹಳೆಯ ಅಥವಾ ಗುಜರಿ ವಸ್ತುಗಳನ್ನು ಮನೆಯಿಂದ ಹೊರಹಾಕುವುದು ಹೇಗೆ? ಎಂದು ಯೋಚಿಸುತ್ತಾರೆ. ಆದರೆ 2019ರಲ್ಲಿ ಮುಕುಲ್ ಛಾಬ್ರಾ ಎಂಬ ಯುವಕ ಈ ಸಮಸ್ಯೆಯನ್ನೇ ಇಟ್ಟುಕೊಂಡು ಒಂದು ಬಿಸಿನೆಸ್ ಕಟ್ಟಲು ಸಾಧ್ಯವೇ? ಎಂದು ಆಲೋಚಿಸಿದರು. ಈ ಒಂದೇ ಒಂದು ಆಲೋಚನೆ ಭಾರತದ ದೊಡ್ಡ ಗುಜರಿ ಮಾರುಕಟ್ಟೆಯಲ್ಲಿ ದೊಡ್ಡ ಕ್ರಾಂತಿಯನ್ನೇ ಸೃಷ್ಟಿಸಿತು.

ಸಮಾಜದಲ್ಲಿ ತ್ಯಾಜ್ಯ ನಿರ್ವಹಣೆ ಎಂಬುದು ಇಂದು ದೊಡ್ಡ ಸವಾಲಾಗಿದೆ. ಈ ಕೊರತೆಯನ್ನು ನೀಗಿಸಲು ಮುಕುಲ್ ಛಾಬ್ರಾ ಅವರು 2019ರಲ್ಲಿ 'ScrapUncle' ಎಂಬ ಡಿಜಿಟಲ್ ಪ್ಲಾಟ್‌ಫಾರ್ಮ್ ಅನ್ನು ಪ್ರಾರಂಭಿಸಿದರು. ಗ್ರಾಹಕರು ಸುಲಭವಾಗಿ ಮೊಬೈಲ್ ಮೂಲಕವೇ ತಮ್ಮ ಮನೆಯಲ್ಲಿರುವ ಹಳೆಯ ವಸ್ತುಗಳು, ಪ್ಲಾಸ್ಟಿಕ್, ಲೋಹ ಹಾಗೂ ಇ-ತ್ಯಾಜ್ಯಗಳನ್ನು ಮಾರಾಟ ಮಾಡಲು ಇದು ಹಾದಿ ಮಾಡಿಕೊಟ್ಟಿತು.

ಉದ್ಯಮಕ್ಕೆ ಪ್ರಮುಖವಾಗಿ ಬೇಕಿರುವುದು ಏನು?

ದೊಡ್ಡ ಉದ್ಯಮಗಳನ್ನು ಕಟ್ಟಲು ಯಾವಾಗಲೂ ಕ್ರಾಂತಿಕಾರಿ ಅಥವಾ ಅಸಾಧಾರಣ ಆಲೋಚನೆಗಳೇ ಬೇಕಿಲ್ಲ. ನಮ್ಮ ಕಣ್ಣಮುಂದೆ ಇರುವ ತೀರ ಸಾಮಾನ್ಯ ಸಮಸ್ಯೆಯನ್ನು ಗುರುತಿಸಿ, ಅದನ್ನು ಪ್ರಾಮಾಣಿಕವಾಗಿ ಹಾಗೂ ವ್ಯವಸ್ಥಿತವಾಗಿ ಬಗೆಹರಿಸುವ ಛಲವಿದ್ದರೆ ಯಶಸ್ಸು ಖಂಡಿತ ಸಿಗುತ್ತದೆ ಎಂಬುದಕ್ಕೆ ಮುಕುಲ್ ಛಾಬ್ರಾ ಮತ್ತು ಅವರ 'ಸ್ಕ್ರ್ಯಾಪ್‌ಅಂಕಲ್' ಪ್ರಮುಖ ಸಾಕ್ಷಿಯಾಗಿದೆ.

ಆಲೋಚನೆಯೇ ಬಂಡವಾಳ

ಆನಂದ್ ಠಾಕೂರ್ ಅವರು ಉಲ್ಲೇಖಿಸಿರುವ ಈ ಕಥೆಯಲ್ಲಿ, ಉಪಯೋಗಕ್ಕೆ ಬಾರದೆ ಬಿಸಾಡಿದ ವಸ್ತುಗಳನ್ನೇ ಕಚ್ಚಾವಸ್ತುವಾಗಿ ಬಳಸಿಕೊಂಡು ಹೊಸ ಉತ್ಪನ್ನಗಳನ್ನು ತಯಾರಿಸುವ 'ಸರ್ಕ್ಯುಲರ್ ಎಕಾನಮಿ' ಮಾದರಿಯನ್ನು ಪರಿಚಯಿಸಲಾಗಿದೆ. ಅನೇಕರಿಗೆ ಕಸವಾಗಿ ಕಾಣಿಸಿದ್ದು, ಈ ಯುವ ಉದ್ಯಮಿಗೆ ಲಾಭದಾಯಕ ಉದ್ಯಮದ ಬಾಗಿಲು ತೆರೆಯಿತು.

ಮರುಬಳಕೆ ಮಾಡಬಹುದಾದ ಪ್ಲಾಸ್ಟಿಕ್, ಲೋಹ ಹಾಗೂ ಇತರ ಹಳೆಯ ವಸ್ತುಗಳನ್ನು ಸಂಗ್ರಹಿಸಿ, ಅವುಗಳನ್ನು ಪುನರ್ಬಳಕೆಯ ಉತ್ಪನ್ನಗಳಾಗಿ ಪರಿವರ್ತಿಸುವ ಮೂಲಕ ಪರಿಸರ ಸಂರಕ್ಷಣೆಯ ಜೊತೆಗೆ ಉದ್ಯೋಗಾವಕಾಶಗಳನ್ನೂ ಸೃಷ್ಟಿಸಿ ಗಮನ ಸೆಳದರು ಎಂದು ಬರೆದುಕೊಂಡಿದ್ದಾರೆ.

ಈ ಉದ್ಯಮದ ಪ್ರಮುಖ ಅಂಶಗಳು, ಪ್ರಯೋಜನಾ

* ಸಾಮಾನ್ಯ ಜನರು ಗುಜರಿ ಅಂದುಕೊಳ್ಳುವ ವಸ್ತುಗಳಲ್ಲಿ ಉದ್ಯಮದ ಸಾಧ್ಯತೆಗಳನ್ನು ಕಂಡುಕೊಳ್ಳುವುದು.

* ಹೊಸ ಕಚ್ಚಾವಸ್ತುಗಳನ್ನು ಖರೀದಿಸುವ ಬದಲು, ಬಿಸಾಡಿದ ವಸ್ತುಗಳನ್ನೇ ಮರುಸಂಸ್ಕರಿಸಿ ಕಡಿಮೆ ವೆಚ್ಚದಲ್ಲಿ ಉಪಯುಕ್ತ ವಸ್ತುಗಳನ್ನು ನಿರ್ಮಿಸುವುದು.

* ತ್ಯಾಜ್ಯವು ಭೂಮಿಯನ್ನು ಸೇರುವುದನ್ನು ತಡೆದು, ಮರುಬಳಕೆ ಪ್ರಕ್ರಿಯೆಗೆ ಉತ್ತೇಜನ ನೀಡುವುದು.

ಯುವಜನತೆಗೆ ಮಹತ್ವದ ಸಂದೇಶ

ಉದ್ಯಮಶೀಲತೆ ಎಂದರೆ ಕೇವಲ ದೊಡ್ಡ ಹೂಡಿಕೆ ಅಥವಾ ಹೈಟೆಕ್ ಕೋಡಿಂಗ್ ಮಾತ್ರವಲ್ಲ. ನಮ್ಮ ಸುತ್ತಮುತ್ತಲಿರುವ ಸಮಸ್ಯೆಗಳಿಗೆ ಹಾಗೂ ಸವಾಲುಗಳಿಗೆ ಸೃಜನಶೀಲ ಪರಿಹಾರ ಕಂಡುಕೊಳ್ಳುವುದೇ ನಿಜವಾದ ಉದ್ಯಮಶೀಲತೆ ಎಂಬ ಸ್ಪಷ್ಟ ಸಂದೇಶವನ್ನು ಇದು ಸಾರುತ್ತದೆ. ಇಂದಿನ ಯುವ ಪೀಳಿಗೆ ಹಾಗೂ ಹೊಸ ಸ್ಟಾರ್ಟ್‌ಅಪ್‌ಗಳು ಕೇವಲ ಸಾಂಪ್ರದಾಯಿಕ ಉದ್ಯಮಗಳತ್ತ ಗಮನಹರಿಸದೆ, ಇಂತಹ 'ವೇಸ್ಟ್ ಟು ವೆಲ್ತ್' (Waste to Wealth) ಕ್ಷೇತ್ರದಲ್ಲಿರುವ ಅಪಾರ ಅವಕಾಶಗಳನ್ನು ಬಳಸಿಕೊಳ್ಳಬೇಕು ಎಂದು ಆನಂದ್ ಠಾಕೂರ್ ತಮ್ಮ ಪೋಸ್ಟ್ ಮೂಲಕ ಕರೆ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+