ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏರ್ ಇಂಡಿಯಾ 90 ಕೋಟಿ ಆಸ್ತಿ ಖರೀದಿಗೆ ಎಸ್ ಬಿಐ ಸಿದ್ಧ

|
Google Oneindia Kannada News

ನವದೆಹಲಿ, ಮಾ. 31: ನಷ್ಟ ದಲ್ಲಿರುವ ಏರ್‌ ಇಂಡಿಯಾ ಸಂಸ್ಥೆಗೆ ಸೇರಿದ ಸುಮಾರು 90 ಕೋಟಿ ರೂ. ಮೌಲ್ಯದ ಆಸ್ತಿ ಖರೀದಿ ಮಾಡಲು ಭಾರತೀಯ ಸ್ಟೇಟ್‌ ಬ್ಯಾಂಕ್‌ ಮುಂದಾಗಿದೆ.

ಮುಂಬೈನಲ್ಲಿರುವ ಏರ್‌ಇಂಡಿಯಾ ದ ನಾಲ್ಕು ಫ್ಲ್ಯಾಟ್‌ಗಳನ್ನು ಖರೀದಿಸಲು ಎಲ್ಲಾ ರೀತಿಯ ಅನುಮತಿಗಳೂ ಸಿಕ್ಕಿವೆ. ಏರ್‌ ಇಂಡಿಯಾದಿಂದ ಈ ಬಗ್ಗೆ ಅಧಿಕೃತ ಒಪ್ಪಿಗೆ ಸಿಗುವುದಷ್ಟೇ ಬಾಕಿ ಎಂದು ಮೂಲಗಳು ತಿಳಿಸಿವೆ.[7 ವಿಮಾನ ಲೀಸ್ ಪಡೆದ ಏರ್ ಇಂಡಿಯಾ ಎಕ್ಸ್ ಪ್ರೆಸ್]

sbi

ಈ ಫ್ಲ್ಯಾಟ್‌ಗಳನ್ನು ಖರೀದಿಸಿದ ನಂತರ ಬ್ಯಾಂಕ್‌ನ ಉಪ ವ್ಯವಸ್ಥಾಪಕ ನಿರ್ದೇಶಕ ಮತ್ತು ಪ್ರಧಾನ ವ್ಯವಸ್ಥಾಪಕ ಹುದ್ದೆಯಲ್ಲಿ ಇರುವವರ ವಾಸಕ್ಕೆ ನೀಡಲು ಎಸ್‌ಬಿಐ ನಿರ್ಧರಿಸಿದೆ.

ಏರ್‌ ಇಂಡಿಯಾ ಕಳೆದ ಎರಡು ವರ್ಷಗಳಿಂದಲೇ ಈ ಫ್ಲ್ಯಾಟ್‌ಗಳ ಮಾರಾಟಕ್ಕೆ ಪ್ರಯತ್ನ ನಡೆಸುತ್ತಿತ್ತು. ಈ ಕುರಿತಾಗಿ ಏರ್‌ ಇಂಡಿಯಾ ಅಧಿಕಾರಿಗಳು ಪ್ರತಿಕ್ರಿಯೆ ನೀಡಿದ್ದು, ಎಸ್‌ಬಿಐ ಪ್ರಸ್ತಾವವನ್ನು ನಾಗರಿಕ ವಿಮಾನಯಾನ ಸಚಿವಾಲಯದ ಅನುಮೋದನೆಗಾಗಿ ಕಳುಹಿಸಲಾಗಿದೆ ಎಂದು ಹೇಳಿದ್ದಾರೆ.[ಬೆಂಗಳೂರಿನಲ್ಲಿ ಮನೆ ಖರೀದಿ ಪ್ರಮಾಣ ದೇಶದಲ್ಲೇ ಹೆಚ್ಚು]

ಹಣಕಾಸು ಮುಗ್ಗಟ್ಟು ಎದುರಿಸುವ ಸ್ಥಿತಿ ತಲುಪಿರುವ ಏರ್ ಇಂಡಿಯಾ ಫ್ಲ್ಯಾಟ್ ಗಳು ಮತ್ತೊಂದು ಸರ್ಕಾರಿ ಸ್ವಾಮ್ಯದ ಸಂಸ್ಥೆಯ ಕೈ ಸೇರುತ್ತಿರುವುದುದು ಉತ್ತಮ ಬೆಳವಣಿಗೆ ಎಂದೇ ಹೇಳಲಾಗಿದೆ. ಒಟ್ಟಿನಲ್ಲಿ ಇಂಥ ಕ್ರಮಗಳ ಮುಖೇನ ಏರ್ ಇಂಡಿಯಾ ತನ್ನ ಸ್ಥಿತಿ ಸುಧಾರಿಸಿಕೊಳ್ಳುವತ್ತ ಹೆಜ್ಜೆ ಇಡುತ್ತಿದೆ.

ಇತ್ತ ಎಸ್ ಬಿಐ ಷೇರುಗಳು ಸಹ ಮಾರುಕಟ್ಟೆಯಲ್ಲಿ ಮೌಲ್ಯ ವೃದ್ಧಿ ಮಾಡಿಕೊಳ್ಳುತ್ತಿವೆ. ಸದ್ಯ 269 ಅಂಕಗಳಲ್ಲಿ ವಹಿವಾಟು ನಡೆಸುತ್ತಿದ್ದು ಶೇ. 0.65 ಏರಿಕೆಯಲ್ಲಿ ಮುನ್ನಡೆಯುತ್ತಿದೆ. ವಿಮಾ ವಿಭಾಗದಲ್ಲಿ ಹೂಡಿಕೆ ಮಾಡಿರುವ ಬಂಡವಾಳದಲ್ಲಿ ಶೇ. 10 ನ್ನು ಹಿಂದಕ್ಕೆ ಪಡೆಯುವುದಾಗಿಯೂ ಎಸ್ ಬಿಐ ಕೆಲ ದಿನಗಳ ಹಿಂದೆ ಹೇಳಿತ್ತು.

English summary
State Bank of India has received all necessary approvals to buy residential properties of cash-starved national carrier, Air India, in south Mumbai for Rs 90 crore. The bank has got all the required approvals and it has conveyed its willingness to buy the properties from Air India. SBI is now waiting for the airline to complete its side of approvals.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X