ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಸ್ ಬಿಐ ಸೇರಿ 6 ಕಂಪನಿಗಳು ಕಳೆದುಕೊಂಡಿದ್ದು 45 ಸಾವಿರ ಕೋಟಿ!

|
Google Oneindia Kannada News

ನವದೆಹಲಿ, ಡಿಸೆಂಬರ್ 25: ಮೌಲ್ಯಯುತ ಕಂಪನಿಗಳು ಎನಿಸಿಕೊಂಡಿರುವ 10 ಕಂಪನಿಗಳ ಪೈಕಿ ಆರರ ಮಾರುಕಟ್ಟೆ ಮೌಲ್ಯದಲ್ಲಿ 44,928 ಕೋಟಿ ಕುಸಿತವಾಗಿದೆ. ಡಿಸೆಂಬರ್ 19ರಿಂದ 23ರ ಮಧ್ಯೆ ಈ ಕುಸಿತವಾಗಿದ್ದು, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ ಅತಿ ಹೆಚ್ಚು ನಷ್ಟವಾಗಿದೆ. ಜೊತೆಗೆ ಸೆನ್ಸೆಕ್ಸ್ ಕೂಡ ಶೇ 1.69ರಷ್ಟು ನಷ್ಟ ಅನುಭವಿಸಿದೆ.

ಎಸ್ ಬಿಐ, ಒಎನ್ ಜಿಸಿ, ಎಚ್ ಡಿಎಫ್ ಸಿ, ಹಿಂದೂಸ್ತಾನ್ ಯುನಿಲಿವರ್ ಲಿಮಿಟೆಡ್, ಇನ್ಫೋಸಿಸ್, ಕೋಲ್ ಇಂಡಿಯಾ ಹಾಗೂ ಐಟಿಸಿಯ ಮಾರುಕಟ್ಟೆ ಮೌಲ್ಯದಲ್ಲಿ ಕುಸಿತವಾಗಿದೆ. ಆದರೆ ಇದೇ ವಾರದಲ್ಲಿ ಟಾಟಾ ಕನ್ಸಲ್ಟನ್ಸಿ ಸರ್ವೀಸ್, ಎಚ್ ಡಿಎಫ್ ಸಿ ಬ್ಯಾಂಕ್ ಮತ್ತು ರಿಲಯನ್ಸ್ ಇಂಡಸ್ಟ್ರಿಯ ಷೇರುಗಳು ಏರಿಕೆ ದಾಖಲಿಸಿವೆ.[ರಿಸರ್ವ್ ಬ್ಯಾಂಕ್ ರೆಪೋ ದರದಲ್ಲಿ ನೋ ಚೇಂಜ್: ಹುಸಿಯಾಯಿತು ನಿರೀಕ್ಷೆ]

SBI, Six Other Companies Lose Rs. 44,928 Crore In Market Value

ಎಸ್ ಬಿಐ ಒಟ್ಟು ಮಾರುಕಟ್ಟೆ ಮೌಲ್ಯದಲ್ಲಿ ಹನ್ನೆರಡು ಸಾವಿರ ಕೋಟಿ ಬಿದ್ದಿದೆ. ಇನ್ನು ಒಎನ್ ಜಿಸಿ 11,288 ಕೋಟಿ ಹಾಗೂ ಎಚ್ ಡಿಎಫ್ ಸಿ 7,155 ಕೋಟಿ ರುಪಾಯಿ ಕಳೆದುಕೊಂಡಿವೆ. ಹಿಂದೂಸ್ತಾನ್ ಯುನಿಲಿವರ್ ಲಿಮಿಟೆಡ್ 5,704 ಕೋಟಿ, ಇನ್ಫೋಸಿಸ್ 3,421 ಕೋಟಿ, ಐಟಿಸಿ 2,121 ಕೋಟಿ ಮಾರುಕಟ್ಟೆ ಮೌಲ್ಯದಲ್ಲಿ ಕುಸಿತ ಕಂಡಿವೆ.

ವಾರದ ಅರಂಭದಲ್ಲೇ ಷೇರು ಮಾರುಕಟ್ಟೆ ದುರ್ಬಲವಾಗಿತ್ತು. ಬ್ಯಾಂಕ್ ಆಫ್ ಜಪಾನ್ ನ ದರ ನೀತಿ ಪ್ರಕಟವಾಗಬೇಕಿದ್ದು, ಹೂಡಿಕೆದಾರರು ಜಾಗೃತರಾಗಿದ್ದಾರೆ. ಜತೆಗೆ ಯಾವುದೇ ಒಳ್ಳೆ ಸುದ್ದಿ ಅಥವಾ ಬಲ ಮಾರುಕಟ್ಟೆಗೆ ಇಡೀ ವಾರದಲ್ಲಿ ಸಿಗಲೇ ಇಲ್ಲ. ಆದ್ದರಿಂದ ಕುಸಿತವಾಗಿದೆ ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.[ತಲ್ಲಣಿಸಿತು ಮುಂಬೈ ಷೇರು ಮಾರುಕಟ್ಟೆ: 1600 ಅಂಶ ಕುಸಿತ]

ಈ ವಾರ ಸೆನ್ಸೆಕ್ಸ್ 448.86 ಅಂಶ ಕುಸಿತ ಕಂಡಿದ್ದರೆ, ನಿಫ್ಟಿ ನೂರೈವತ್ತಕ್ಕೂ ಹೆಚ್ಚು ಅಂಶ ಕುಸಿದಿದೆ. ನವೆಂಬರ್ 18ರ ನಂತರ ಕಂಡುಬಂದಿರುವ ದೊಡ್ಡ ಪ್ರಮಾಣದ ಕುಸಿತವಿದು.

English summary
Seven of the 10 most valued companies took a combined hit of Rs. 44,928 crore in their market valuation in the week from December 19 to December 23, with State Bank of India (SBI) reporting maximum losses, even as the benchmark Sensex lost 1.69 per cent.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X