ಎಸ್ಬಿಐ 2ನೇ ತ್ರೈಮಾಸಿಕ : ನಿವ್ವಳ ಲಾಭದಲ್ಲಿ ಶೇ 40ರಷ್ಟು ಕುಸಿತ
ಬೆಂಗಳೂರು, ನವೆಂಬರ್ 05: ದೇಶದ ಅತಿದೊಡ್ಡ ಬ್ಯಾಂಕಿಂಗ್ ಸಂಸ್ಥೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ ಬಿಐ) ಸೋಮವಾರದಂದು ತನ್ನ ಎರಡನೇ ತ್ರೈಮಾಸಿಕ ವರದಿ ಪ್ರಕಟಿಸಿದೆ. ಜುಲೈ- ಸೆಪ್ಟಂಬರ್ ಅವಧಿಯ ತ್ರೈಮಾಸಿಕ ವರದಿಯಂತೆ ವರ್ಷದಿಂದ ವರ್ಷಕ್ಕೆ ನಿವ್ವಳ ಲಾಭದಲ್ಲಿ ಶೇ 40.3 ರಷ್ಟು ಕುಸಿತ ಕಂಡಿದೆ.
ಕಳೆದ ವರ್ಷ ಇದೇ ಅವಧಿಯಲ್ಲಿ 1,581.55 ಕೋಟಿ ರು ಗಳಿಸಿತ್ತು. ಈ ಬಾರಿ 944.87 ಕೋಟಿ ಗಳಿಸಿದೆ. ಎಸ್ಬಿಐ ಸಂಸ್ಥೆಯ ಒಟ್ಟಾರೆ ಆದಾಯ ಕಳೆದ ವರ್ಷಕ್ಕೆ ಹೋಲಿಸಿದರೆ ಕೊಂಚ ಏರಿಕೆಯಾಗಿದೆ. ಕಳೆದ ವರ್ಷ 65,429.63 ಕೋಟಿ ರು ನಷ್ಟಿತ್ತು. ಈ ತ್ರೈಮಾಸಿಕದ ಅಂತ್ಯಕ್ಕೆ 66,607.98 ಕೋಟಿ ರು ಗಳಿಕೆಯಾಗಿದೆ.
ಕಳೆದ ತ್ರೈಮಾಸಿಕಕ್ಕೆ ಹೋಲಿಸಿದರೆ ಎನ್ ಪಿ ಎ(non performing assets) ಉತ್ತಮವಾಗಿದ್ದು, ಶೇ9.95ರಷ್ಟಿದೆ. ಕಳೆದ ತ್ರೈಮಾಸಿಕದಲ್ಲಿ ಶೇ 10.69ರಷ್ಟಿತ್ತು.

ತ್ರೈಮಾಸಿಕ ವರದಿ ಪ್ರಕಟವಾಗುತ್ತಿದ್ದಂತೆ ಎಸ್ಬಿಐ ಷೇರುಗಳು ಶೇ 5ರಷ್ಟು ಏರಿಕೆ ಕಂಡಿತ್ತು. ಒಟ್ಟಾರೆ ದಿನದ ಅಂತ್ಯಕ್ಕೆ ಶೇ 3.8ರಷ್ಟು ಪ್ರಗತಿ ಪಡೆದುಕೊಂಡಿತ್ತು.












Click it and Unblock the Notifications