ಎಸ್‌ಬಿಐ ತ್ರೈಮಾಸಿಕ ವರದಿ: ನಿವ್ವಳ ಲಾಭ 5,196 ಕೋಟಿ ರೂಪಾಯಿ
ನವದೆಹಲಿ, ಫೆಬ್ರವರಿ 04: ಪ್ರಸಕ್ತ ಹಣಕಾಸು ವರ್ಷದ ಮೂರನೇ ತ್ರೈಮಾಸಿಕದಲ್ಲಿ ದೇಶದ ಅತಿದೊಡ್ಡ ಸರ್ಕಾರಿ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ವಾರ್ಷಿಕ ಲಾಭದಲ್ಲಿ ಶೇ. 6.9 ರಷ್ಟು ಕುಸಿತ ಕಂಡಿದ್ದು, ಡಿಸೆಂಬರ್‌ನಲ್ಲಿ ಕೊನೆಗೊಂಡ ತ್ರೈಮಾಸಿಕದಲ್ಲಿ 5,196.22 ಕೋಟಿ ರೂ. ನಿವ್ವಳ ಲಾಭಗಳಿಸಿದೆ.
ನಿವ್ವಳ ಬಡ್ಡಿ ಆದಾಯ, ಗಳಿಸಿದ ಬಡ್ಡಿ ಮತ್ತು ಖರ್ಚು ಮಾಡಿದ ಬಡ್ಡಿ ನಡುವಿನ ವ್ಯತ್ಯಾಸವು ವರ್ಷದಿಂದ ವರ್ಷಕ್ಕೆ ಶೇಕಡಾ 3.7 ರಷ್ಟು ಏರಿಕೆಯಾಗಿದ್ದು, ತೃತೀಯ ತ್ರೈಮಾಸಿಕದಲ್ಲಿ 28,819.94 ಕೋಟಿ ರೂ.ಗೆ ತಲುಪಿದೆ.
ಒಟ್ಟು ಠೇವಣಿಗಳು ಶೇಕಡಾ 13.64 ರಷ್ಟು ಏರಿಕೆಯಾಗಿದ್ದು, ಅದರಲ್ಲಿ ಚಾಲ್ತಿ ಖಾತೆ ಠೇವಣಿ 11.33 ಪ್ರತಿಶತದಷ್ಟು ಹೆಚ್ಚಾಗಿದೆ, ಜೊತೆಗೆ ಬ್ಯಾಂಕ್ ಠೇವಣಿ ಉಳಿತಾಯವು 15.99 ಪ್ರತಿಶತದಷ್ಟು ಹೆಚ್ಚಾಗಿದೆ ಎಂದು ಬ್ಯಾಂಕ್ ತಿಳಿಸಿದೆ. ನಿವ್ವಳ ಬಡ್ಡಿ ಅಂಚು ಶೇಕಡಾ 3.12 ರಷ್ಟಿದ್ದು, ವರ್ಷದಿಂದ ವರ್ಷಕ್ಕೆ 21 ಬಿಪಿಎಸ್ ಸಂಕುಚಿತಗೊಂಡಿದೆ.

ಸಿಎನ್‌ಬಿಸಿ-ಟಿವಿ 18 ಸಮೀಕ್ಷೆ ನಡೆಸಿದ ವಿಶ್ಲೇಷಕರ ಅಂದಾಜಿನ ಪ್ರಕಾರ, ತೃತೀಯ ತ್ರೈಮಾಸಿಕದಲ್ಲಿ 5,332.1 ಕೋಟಿ ಮತ್ತು ನಿವ್ವಳ ಬಡ್ಡಿ ಆದಾಯ 28,750.3 ಕೋಟಿ ರೂಪಾಯಿ ನಷ್ಟಿದೆ.












Click it and Unblock the Notifications