ಎಸ್ ಬಿಐ ಗ್ರಾಹಕರಿಗೊಂದು ಸಮಾಧಾನಕರ ಸುದ್ದಿ!

Posted By:
Subscribe to Oneindia Kannada

ಬೆಂಗಳೂರು, ಮಾರ್ಚ್ 13: ಸರ್ಕಾರಿ ಸ್ವಾಮ್ಯದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗ್ರಾಹಕರಿಗೊಂದು ಸಮಾಧಾನಕರ ಸುದ್ದಿ ಕೊಟ್ಟಿದೆ.

ಉಳಿತಾಯ ಖಾತೆಯ Average Monthly Balance(AMB) ಹೊಂದಿರದ ಗ್ರಾಹಕರಿಗೆ ವಿಧಿಸುತ್ತಿದ್ದ ದಂಡವನ್ನು ಶೇ.75ರಷ್ಟು ಇಳಿಕೆ ಮಾಡಲಾಗಿದೆ. ಏಪ್ರಿಲ್ 1ರಿಂದ ಪರಿಷ್ಕೃತ ಶುಲ್ಕ ಜಾರಿಯಾಗಲಿದೆ.

SBI Lowers minimum balance charges per month

ಮೆಟ್ರೋ ಸಿಟಿ ಹಾಗೂ ನಗರ ಪ್ರದೇಶಗಳಲ್ಲಿ ತಿಂಗಳಿಗೆ 50 ರೂಪಾಯಿ ದಂಡ ಹಾಗೂ ಜಿಎಸ್ಟಿ ವಿಧಿಸಲಾಗುತ್ತಿತ್ತು. ಈಗ ಅದನ್ನು 50 ರುಪಾಯಿಗಳಿಂದ 15 ರೂಪಾಯಿಗೆ ಇಳಿಸಲಾಗಿದೆ. ಜೊತೆಗೆ ಜಿಎಸ್ಟಿ ಕೂಡ ವಿಧಿಸಲಾಗುತ್ತದೆ.

ಅರೆ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ 40 ರೂಪಾಯಿ ದಂಡವನ್ನು 12 ರೂ. ಹಾಗೂ 10 ರೂಪಾಯಿಗೆ ಇಳಿಸಲಾಗಿದ್ದು, ಜೊತೆಗೆ ಜಿಎಸ್ಟಿ ವಿಧಿಸಲಾಗುತ್ತದೆ. ಈ ಪರಿಷ್ಕೃತ ದರದಿಂದ ಸುಮಾರು 25 ಕೋಟಿ ಬ್ಯಾಂಕ್ ಗ್ರಾಹಕರಿಗೆ ಉಪಯೋಗವಾಗಲಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
State Bank of India (SBI) has charges for non-maintenance of Average monthly balance (AMB) for customers in Metro and Urban centres from Maximum Rs 50 to Rs 15 per month.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ