ಎಟಿಎಂ ಪಿನ್ ಮರೆತುಹೋಗಿದೆಯಾ? ಮೊಬೈಲ್ ಒಟಿಪಿ ನೋಡಿ

Subscribe to Oneindia Kannada

ನವದೆಹಲಿ, ಏಪ್ರಿಲ್, 11: "ಅಯ್ಯೋ.. ಎಟಿಎಂ ಪಿನ್ ಮರೆತುಹೋಯ್ತು, ಮೂರು ಬಾರಿ ತಪ್ಪು ಪಿನ್ ನಮೂದು ಮಾಡಿಬಿಟ್ಟೆ' ಎಂದು ಇನ್ನು ಮುಂದೆ ಕೊರಗಬೇಕಿಲ್ಲ. ಅಲ್ಲದೇ ಹೊಸ ಪಿನ್ ಪಡೆಯಲು ಬ್ಯಾಂಕ್ ಗೆ ಅರ್ಜಿ ಸಲ್ಲಿಸಿ ಕಾಯಬೇಕಿಲ್ಲ.[ಹಣ ಬಾರದಿದ್ದರೆ, ಕಾರ್ಡ್ ಸಿಕ್ಕಿಕೊಂಡರೆ ಯಾರು ಹೊಣೆ]

ಹಾಗಾದರೆ ಮರೆತುಹೋದ ಪಿನ್ ಯಾರು ನೀಡುತ್ತಾರೆ? ಉತ್ತರ ಇಲ್ಲಿದೆ... ಎಟಿಎಂ ಯಂತ್ರಗಳಿಂದಲೇ ಹೊಸ ಪಾಸ್‌ವರ್ಡ್ ಪಡೆಯುವಂಥ ವ್ಯವಸ್ಥೆಯನ್ನು ಸ್ಟೇಟ್ ಬ್ಯಾಂಕ್ ಆಫ್ಇಂಡಿಯಾ ಜಾರಿಗೊಳಿಸಿದೆ.[ಎಟಿಎಂನೊಳಗೆ ಕಾರ್ಡ್ ಸಿಕ್ಕೊಂಡ್ರೆ ಏನು ಮಾಡೊದು?]

 SBI Launches new way to find ATM Password through OTP

ಎಟಿಎಂ ನಲ್ಲಿ ಹೊಸ ಆಯ್ಕೆಯನ್ನು ಎಸ್ ಬಿಐ ನೀಡಿದೆ. ಇದನ್ನು ಆಯ್ದುಕೊಂಡಾಗ ಗ್ರಾಹಕನ ನೋಂದಣಿಯಾಗಿರುವ ಮೊಬೈಲ್ ದೂರವಾಣಿಗೆ ಒಟಿಪಿ (ಒನ್ ಟೈಮ್ ಪಾಸ್‌ವರ್ಡ್) ಸಂದೇಶ ಬರುತ್ತದೆ. ಇದರ ಆಧಾರದಲ್ಲಿ ಆತ ಹೊಸ ಪಿನ್ ಸಂಖ್ಯೆ ನಮೂದಿಸಬಹುದು. ಬಳಿಕ 24 ಗಂಟೆಗಳಲ್ಲಿ ಹೊಸ ಪಿನ್ ಸಂಖ್ಯೆ ದೃಢೀಕೃತಗೊಂಡಿರುವ ಕುರಿತು ಆತನ ಮೊಬೈಲ್ ದೂರವಾಣಿಗೆ ಸಂದೇಶ ಬರುತ್ತದೆ.[ಒಟಿಪಿ ಎಂದರೇನು? ಪಡೆದುಕೊಳ್ಳುವುದು ಹೇಗೆ?]

ವ್ಯವಸ್ಥೆಯನ್ನು ಸದ್ಯ ಎಸ್‌ಬಿಐನ 400 ಎಟಿಎಂಗಳಲ್ಲಿ ಪ್ರಾಯೋಗಿಕವಾಗಿ ಜಾರಿಮಾಡಲಾಗಿದೆ. ಜನರ ಪ್ರತಿಕ್ರಿಯೆ ಆಧಾರದಲ್ಲಿ ದೇಶದ ಎಲ್ಲೆಡೆ ಜಾರಿ ಮಾಡುವ ಚಿಂತನೆಯಿದೆ ಎಂದು ಎಸ್ ಬಿಐ ತಿಳಿಸಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Forgot ATM password? No worry. State Bank of India (SBI), country's largest commercial bank launched a new way to find ATM Password through OTP. This is an innovative features launched by India's largest bank.
Please Wait while comments are loading...