ಗೃಹಸಾಲದ ಮೇಲಿನ ಕನಿಷ್ಠ ಬಡ್ಡಿದರ ಹೆಚ್ಚಿಸಿದ ಎಸ್‌ಬಿಐ
ನವದೆಹಲಿ, ಏಪ್ರಿಲ್ 5: ದೇಶದ ಅತಿ ದೊಡ್ಡ ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್ ಎನಿಸಿರುವ ಭಾರತೀಯ ಸ್ಟೇಟ್ ಬ್ಯಾಂಕ್ , ಗೃಹ ಸಾಲದ ಮೇಲಿನ ಕನಿಷ್ಠ ಬಡ್ಡಿ ದರವನ್ನು 25 ಮೂಲ ಪಾಯಿಂಟ್‌ಗಳಷ್ಟು ಹೆಚ್ಚಿಸಿದೆ. ಅಂದರೆ ಕನಿಷ್ಠ ಬಡ್ಡಿದರವು ಶೇ 6.70 ರಿಂದ ಶೇ 6.75ಕ್ಕೆ ಏರಿಕೆಯಾಗಿದೆ. ಎಸ್‌ಬಿಐನ ಗೃಹಸಾಲದ ಮೇಲಿನ ಬಡ್ಡಿದರದ ಏರಿಕೆಯು ಏಪ್ರಿಲ್ 1ರ ಹೊಸ ಹಣಕಾಸು ವರ್ಷದಿಂದಲೇ ಜಾರಿಯಾಗಿದೆ.
ಎಸ್‌ಬಿಐ ಬಡ್ಡಿ ದರ ಏರಿಕೆ ಮಾಡಿರುವ ಹಿನ್ನೆಲೆಯಲ್ಲಿ ಇತರೆ ಬ್ಯಾಂಕುಗಳು ಕೂಡ ಶೀಘ್ರದಲ್ಲಿಯೇ ಇದೇ ಮಾರ್ಗ ಅನುಸರಿಸುವ ಸಾಧ್ಯತೆ ಇದೆ. ಇದರಿಂದ ಗೃಹಸಾಲದ ಬಡ್ಡಿ ದರದಲ್ಲಿ ಮತ್ತಷ್ಟು ಹೆಚ್ಚಳವಾಗುವ ಲಕ್ಷಣ ಕಂಡುಬಂದಿದೆ.
ಎಸ್‌ಬಿಐ ಕಳೆದ ತಿಂಗಳ ಮಾರ್ಚ್ 1ರಂದು ಗೃಹಸಾಲದ ಮೇಲಿನ ಕನಿಷ್ಠ ಬಡ್ಡಿದರವನ್ನು ಶೇ 6.80ರಿಂದ ಶೇ 6.70ಕ್ಕೆ ಇಳಿಸಿತ್ತು. ಆದರೆ ಇದು ಆಸಕ್ತ ಗೃಹ ಖರೀದಿದಾರರಿಗಾಗಿ ನೀಡಲಾಗಿದ್ದ ಸೀಮಿತ ಅವಧಿಯ ಆಫರ್ ಆಗಿತ್ತು.

ಏಪ್ರಿಲ್ ಆರಂಭದಿಂದ ಕನಿಷ್ಠ ಬಡ್ಡಿದರವನ್ನು ಏರಿಸಿರುವುದು ಮಾತ್ರವಲ್ಲದೆ, ಎಲ್ಲ ಗೃಹಸಾಲಗಳ ಪ್ರಕ್ರಿಯೆ ಶುಲ್ಕವನ್ನು ಸಹ ಸೇರ್ಪಡೆ ಮಾಡಲಾಗಿದೆ. ಕನಿಷ್ಠ 10,000 ರೂಪಾಯಿಯಿಂದ ಗರಿಷ್ಠ 30,000 ರೂಪಾಯಿಯವರೆಗೆ ಜಿಎಸ್‌ಟಿ ಸೇರಿಕೊಂಡಂತೆ ಸಾಲದ ಮೇಲೆ ಶೇ 0.40ರಷ್ಟು ಮೊತ್ತವನ್ನು ಪ್ರಕ್ರಿಯೆ ಶುಲ್ಕವನ್ನಾಗಿ ವಿಧಿಸುವ ಸಾಧ್ಯತೆ ಇದೆ.
ಬಿಲ್ಡರ್ ಪಾಲುದಾರಿಕೆಯ ಯೋಜನೆಗಳಲ್ಲಿ ಟಿಐಆರ್ ಅಥವಾ ಟೈಟಲ್ ಇನ್‌ವೆಸ್ಟಿಗೇಷನ್ ರಿಪೋರ್ಟ್ ಮತ್ತು ಮೌಲ್ಯಮಾಪನ ಅಗತ್ಯವಿರುವುದಿಲ್ಲ. ಜಿಎಸ್‌ಟಿ ಒಳಗೊಂಡ ಗರಿಷ್ಠ ಮೊತ್ತ 10,000 ರೂಪಾಯಿಗೆ ಸಾಲದ ಮೇಲಿನ ಶೇ 0.40ರಷ್ಟು ಪ್ರಕ್ರಿಯೆ ಶುಲ್ಕ ಇರಲಿದೆ ಎಂದು ಎಸ್‌ಬಿಐ ತನ್ನ ವೆಬ್‌ಸೈಟ್‌ನಲ್ಲಿ ತಿಳಿಸಿದೆ.
ಟಿಐರ್ ಅಗತ್ಯವಿರುವಲ್ಲಿ ಸಾಮಾನ್ಯ ಶುಲ್ಕಗಳು ಅನ್ವಯವಾಗಲಿವೆ. ಇದಕ್ಕೂ ಮುನ್ನ ಮಾರ್ಚ್ ತಿಂಗಳ 31ರವರೆಗೂ ಬ್ಯಾಂಕ್ ಗೃಹಸಾಲ ಪ್ರಕ್ರಿಯೆ ಶುಲ್ಕವನ್ನು ಮನ್ನಾ ಮಾಡಿತ್ತು.
-
ಕೊಹ್ಲಿ ಭಾಯ್ಗೆ ಮೈದಾನದಲ್ಲಿ ಕೆಣಕ್ಬೇಡಿ, ತುಂಬಾ ಸಮಯ ನಿಲ್ಲಲು ಬಿಡಬೇಡಿ; ಎಸ್ಆರ್ಎಚ್ ಸಹ ಆಟಗಾರರಿಗೆ ಇಶಾನ್ ಎಚ್ಚರಿಕೆ ಸಂದೇಶ -
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Bengaluru Property Tax: ಆಸ್ತಿ ತೆರಿಗೆ ಸ್ವೀಕಾರಕ್ಕಾಗಿ ರಾತ್ರಿ 10ಗಂಟೆವರೆಗೆ ಪಾಲಿಕೆ ಕಚೇರಿ ಓಪನ್ -
Arecanut Price: ದಾವಣಗೆರೆ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ ಭರ್ಜರಿ ಏರಿಕೆ: ಇಲ್ಲಿದೆ ಮಾರ್ಚ್ 30ರ ದರಪಟ್ಟಿ -
Hardik Pandya: ಕೇವಲ 35 ದಿನಗಳಲ್ಲಿ ಕೋಟಿ.. ಕೋಟಿ ಖರ್ಚು ಮಾಡಿದ ಹಾರ್ದಿಕ್ ಪಾಂಡ್ಯ; ಇಲ್ಲಿದೆ ಪಟ್ಟಿ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ












Click it and Unblock the Notifications