ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿ ಕನಸಿಗಾಗಿ ಸಾಲದ ದರ ಇಳಿಕೆ ಮಾಡಿದ ಎಸ್ ಬಿಐ

ಸರ್ಕಾರಿ ಸ್ವಾಮ್ಯದ ಅತಿದೊಡ್ಡ ಬ್ಯಾಂಕ್ ಎಸ್ ಬಿಐ, 30 ಲಕ್ಷ ರು ವರೆಗಿನ ಮನೆ ಸಾಲದ ದರ ಮೂಲಾಂಶವನ್ನು ಶೇ 25ರಷ್ಟು ತಗ್ಗಿಸಿದೆ. ನೂತನ ಬಡ್ಡಿದರ 8.35% ಸೋಮವಾರದಿಂದಲೇ ಜಾರಿಗೊಳ್ಳಲಿದೆ.

By Mahesh
|
Google Oneindia Kannada News

ಬೆಂಗಳೂರು, ಮೇ 08: ಸರ್ಕಾರಿ ಸ್ವಾಮ್ಯದ ಅತಿದೊಡ್ಡ ಬ್ಯಾಂಕ್ ಎಸ್ ಬಿಐ, 30 ಲಕ್ಷ ರು ವರೆಗಿನ ಮನೆ ಸಾಲದ ದರ ಮೂಲಾಂಶವನ್ನು ಶೇ 25ರಷ್ಟು ತಗ್ಗಿಸಿದೆ. ನೂತನ ಬಡ್ಡಿದರ 8.35% ಸೋಮವಾರದಿಂದಲೇ ಜಾರಿಗೊಳ್ಳಲಿದೆ. ಎಲ್ಲರಿಗೂ ಮನೆ ಒದಗಿಸುವ ಪ್ರಧಾನ್ ಮಂತ್ರಿ ಆವಾಸ್ ಯೋಜನೆ ಸಾಕಾರಗೊಳ್ಳಲು ಇದು ನೆರವಾಗಲಿದೆ ಎಂದು ಎಸ್ ಬಿ ಐ ಹೇಳಿದೆ.

ಹೊಸ ದರ ಪಟ್ಟಿಯಂತೆ 30 ಲಕ್ಷ ರು ವರೆಗಿನ ಮನೆ ಸಾಲ ಪಡೆಯುವವರು ಶೇ 8.35 ವಾರ್ಷಿಕ ಬಡ್ಡಿದರದಂತೆ ಸಾಲ ಪಡೆಯಬಹುದು. ಇದು ಮಾರುಕಟ್ಟೆಯಲ್ಲಿ ಅತ್ಯಂತ ಕಡಿಮೆ ಮೊತ್ತದ ದರವಾಗಿದೆ. ಮೇ 9, 2017ರಿಂದಲೇ ಈ ದರ ಜಾರಿಗೆ ಬರಲಿದೆ.

SBI cuts home loan rate by 25 bps for loans up to ₹ 30 lakh

ಪ್ರಧಾನ್ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ಅರ್ಹರಾದ ಗ್ರಾಹಕರು 2.67 ಲಕ್ಷ ರು ವರೆಗಿನ ಬಡ್ಡಿದರ ಸಬ್ಸಿಡಿಯನ್ನು ಹೊಂದಬಹುದಾಗಿದೆ. 30 ಲಕ್ಷ ರು ಮೇಲ್ಪಟ್ಟ ಸಾಲದ ಬಡ್ಡಿದರ ಶೇ 8.5 ರಷ್ಟಿದೆ. 75 ಲಕ್ಷ ರು ಮೇಲ್ಪಟ್ಟ ಸಾಲದ ಬಡ್ಡಿದರ ಶೇ 8.6ರಷ್ಟಿದೆ.

30 ಲಕ್ಷ ರು ಗೂ ಅಧಿಕ ಮೊತ್ತದ ಗೃಹಸಾಲದ ಮೇಲಿನ ಬಡ್ಡಿದರ ಕೂಡಾ ಇಳಿಕೆಯಾಗಿದೆ. ಸರ್ಕಾರಿ ಯೋಜನೆಗೆ ಅನುಗುಣವಾಗಿ ಹೌಸಿಂಗ್ ಪ್ರಾಜೆಕ್ಟ್ ಕೈಗೆತ್ತಿಕೊಂಡಿರುವ ಬಿಲ್ಡರ್ ಗಳಿಗೂ ಆರ್ಥಿಕ ನೆರವನ್ನು ಎಸ್ ಬಿಐ ಒದಗಿಸುತ್ತಿದೆ.

ಸ್ವಂತ ಮನೆ ಹೊಂದುವ ಕನಸು ಹೊತ್ತ ಲಕ್ಷಾಂತರ ಮಂದಿಗೆ ನೆರವಾಗುವುದು ನಮ್ಮ ಉದ್ದೇಶ ಎಂದು ಎಸ್ ಬಿಐಯ ಎಬಿಜಿ ವ್ಯವಸ್ಥಾಪಕ ನಿರ್ದೇಶಕ ರಜನೀಶ್ ಕುಮಾರ್ ಹೇಳಿದ್ದಾರೆ.

English summary
The bank announced a rate cut for home loans to the tune of 25 basis points to 8.35 percent per annum for sub Rs 30 lakh loan. With this reduction, SBI's offering is the lowest in the market. The new rate will be effective from May 9, 2017.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X