ಕೋಟ್ಯಾಧೀಶ ಸಾಮ್ಸಂಗ್ ಉತ್ತರಾಧಿಕಾರಿಗೆ 5 ವರ್ಷ ಜೈಲು

Subscribe to Oneindia Kannada

ಸಿಯೋಲ್, ಆಗಸ್ಟ್ 25: ಬಹುರಾಷ್ಟ್ರೀಯ ಕಂಪನಿ ಸಾಮ್ಸಂಗ್ ನ ಉತ್ತರಾಧಿಕಾರಿ ಹಾಗೂ ಹಾಲಿ ಉಪಾಧ್ಯಕ್ಷ ಲೀ ಜೆ ಯಾಂಗ್ ಗೆ ದಕ್ಷಿಣ ಕೊರಿಯಾದ ನ್ಯಾಯಾಲಯ 5 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.

ಜೈಲಿನಲ್ಲಿರೋ ಸ್ಯಾಮ್ ಸಂಗ್ ಬಾಸ್ ಕೈಯಲ್ಲೇ ಸ್ಮಾರ್ಟ್ ಫೋನಿಲ್ಲ!!

ಲಂಚ, ಹಣ ದುರುಪಯೋಗ, ವಿದೇಶಿ ಸ್ವತ್ತುಗಳನ್ನು ಬಚ್ಚಿಡುವುದು, ಕ್ರಿಮಿನಲ್ ಕೃತ್ಯಗಳು ಮತ್ತು ಲಾಭವನ್ನು ಮುಚ್ಚಿಡುವ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರಿಗೆ ಈ ಶಿಕ್ಷೆ ವಿಧಿಸಲಾಗಿದೆ.

Samsung heir Lee Jae-yong jailed for five years

ತನ್ನ ವ್ಯಾಪಾರದ ಮಹತ್ವಾಕಾಂಕ್ಷೆಗಳನ್ನು ಇಡೇರಿಸಿಕೊಳ್ಳಲಿ ಲೀ ದಕ್ಷಿಣ ಕೊರಿಯಾದ ಅಧ್ಯಕ್ಷ ಪಾರ್ಕ್ ಗ್ಯುನ್-ಹೈ ಗೆ ಲಂಚ ನೀಡಲು ಹೋಗಿದ್ದರು. ಪರಿಣಾಮ ಅಧ್ಯಕ್ಷರನ್ನೇ ಅಲ್ಲಿನ ಸಂಸದರು ಉಚ್ಛಾಟಿಸಿದ್ದರು.ಇದೀಗ ಸ್ಯಾಮ್ಸಂಗ್ ಉತ್ತರಾಧಿಕಾರಿ ಜೈಲು ಪಾಲಾಗಲಿದ್ದಾರೆ.

ಅತ್ತ ದಕ್ಷಿಣ ಕೊರಿಯಾದ ಮಾಜಿ ಅಧ್ಯಕ್ಷೆ ಪಾರ್ಕ್ ಗ್ಯುನ್-ಹೈ ಕೂಡಾ ವಿಚಾರಣೆ ಎದುರಿಸುತ್ತಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Samsung heir Lee Jae-Yong jailed for five years on bribery charges in South Korea.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ