ಚಿಪ್ ತಯಾರಿಕೆಯಲ್ಲಿ ಇಂಟೆಲ್ ಕಂಪನಿ ಹಿಂದಿಕ್ಕಿದ ಸ್ಯಾಮ್ಸಂಗ್
ಜಾಗತಿಕ ಮಟ್ಟದ ಅಗ್ರ ಚಿಪ್ ತಯಾರಿಕಾ ಸಂಸ್ಥೆ ಇಂಟೆಲ್ ಹಿಂದಿಕ್ಕಿದ ಸ್ಯಾಮ್ಸಂಗ್. ಈ ಕ್ಷೇತ್ರದಲ್ಲಿ ಕಳೆದ ಮೂರು ತಿಂಗಳಲ್ಲಿ ಅತಿ ಹೆಚ್ಚು ಹಾಗೂ ದಾಖಲೆಯ ವಹಿವಾಟು ನಡೆಸಿ ನಂಬರ್ ಒನ್ ಸಂಸ್ಥೆಯಾದ ಸ್ಯಾಮ್ಸಂಗ್.
ಸಿಯೋಲ್ (ದಕ್ಷಿಣ ಕೊರಿಯಾ), ಜುಲೈ 27: ಜಾಗತಿಕ ಮಟ್ಟದ ಕಂಪ್ಯೂಟರ್ ಚಿಪ್ ತಯಾರಿಕಾ ಕ್ಷೇತ್ರದಲ್ಲಿ ಇಂಟೆಲ್ ಸಂಸ್ಥೆಯು ಹೊಂದಿದ್ದ ಅಧಿಪತ್ಯವನ್ನು ಕೊನೆಗಾಣಿಸುವಲ್ಲಿ ಯಶಸ್ವಿಯಾಗಿರುವ ದಕ್ಷಿಣ ಕೊರಿಯಾದ ಸ್ಯಾಮ್ಸಂಗ್ ಸಂಸ್ಥೆ, ಈ ಕ್ಷೇತ್ರದಲ್ಲಿ ಮೊದಲ ಸ್ಥಾನಕ್ಕೇರಿದೆ.
ಕಂಪನಿಯು ಗುರುವಾರ, ತನ್ನ ಇತ್ತೀಚಿನ ಮೂರು ತಿಂಗಳ (ಏಪ್ರಿಲ್ ನಿಂದ ಜೂನ್ ವರೆಗಿನ) ತ್ರೈಮಾಸಿಕ ವಹಿವಾಟಿನ ಮಾಹಿತಿ ಬಹಿರಂಗಗೊಳಿಸಿದ್ದು, ಈ ಅವಧಿಯಲ್ಲಿ ಸ್ಯಾಮ್ಸಂಗ್ ಸಂಸ್ಥೆಯು 15.8 ಬಿಲಿಯನ್ ಡಾಲರ್ ನಷ್ಟು ವಹಿವಾಟು ನಡೆಸಿರುವುದಾಗಿ ಹೇಳಿದೆ.

ಇದು ಈ ಕ್ಷೇತ್ರದಲ್ಲಿ ಅತಿ ಗರಿಷ್ಠ ಮೊತ್ತದ ವ್ಯವಹಾರವಾಗಿದ್ದು, ಈ ಮೂಲಕ ಸ್ಯಾಮ್ಸಂಗ್ ಹೊಸ ದಾಖಲೆ ಬರೆದಿದೆ ಎಂದು ಈ ಕ್ಷೇತ್ರದ ಪಂಡಿತರು ಹೇಳಿದ್ದಾರೆ.
ಇಂಟೆಲ್ ಕಂಪನಿಯೂ ಗುರುವಾರ ತನ್ನ ತ್ರೈಮಾಸಿಕ (ಏಪ್ರಿಲ್ ನಿಂದ ಜೂನ್) ವರದಿಯನ್ನು ನೀಡಿದ್ದು, ಅದರಲ್ಲಿ ತಾನು 14.4 ಬಿಲಿಯನ್ ಡಾಲರ್ ಮೊತ್ತದ ವಹಿವಾಟು ಮಾಡಿರುವುದಾಗಿ ಹೇಳಿಕೊಂಡಿದೆ.











Click it and Unblock the Notifications