ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೀನಾ ಎಫೆಕ್ಟ್: 69 ಪೈಸೆ ಕಳೆದುಕೊಂಡ ರುಪಾಯಿ

|
Google Oneindia Kannada News

ನವದೆಹಲಿ, ಆಗಸ್ಟ್. 12: ಏಷ್ಯಾ ಖಂಡದ ಪ್ರಮುಖ ದೇಶಗಳ ಆರ್ಥಿಕ ವ್ಯವಸ್ಥೆಗೆ ಬುಧವಾರ ಕೆಟ್ಟ ದಿನ. ಭಾರತದ ರುಪಾಯಿ ಗಣನೀಯ ಪ್ರಮಾಣದಲ್ಲಿ ಅಪಮೌಲ್ಯಗೊಂಡಿದೆ. ಅತ್ತ ಚೀನಾದ ಕರೆನ್ಸಿ ಸಹ ಮೌಲ್ಯ ಕಳೆದುಕೊಂಡಿದೆ.

ಎರಡು ವರ್ಷಗಳ ಹಿಂದಿನ ಮೊತ್ತಕ್ಕೆ ರುಪಾಯಿ ಕುಸಿತ ಕಂಡಿದೆ. ಒಂದೇ ದಿನ ಡಾಲರ್ ಎದುರು 69 ಪೈಸೆ ಕಳೆದುಕೊಂಡ ಭಾರತೀಯ ಕರೆನ್ಸಿ 64.88 ತಲುಪಿದೆ. ಆಗಸ್ಟ್ 11 ರಂದೂ ರೂಪಾಯಿ ಮೌಲ್ಯ 32 ಪೈಸೆಯಷ್ಟು ಕುಸಿದಿತ್ತು. ರುಪಾಯಿ ಮೌಲ್ಯ ಕುಸುದ ಪರಿಣಾಮ ಬಿಎಸ್ಇ ಸೆನ್ಸೆಕ್ಸ್ ಸೂಚ್ಯಂಕ 120 ಪಾಯಿಂಟ್ ನಷ್ಟ ಅನುಭವಿಸಿತು.[ರುಪಾಯಿ ಮೌಲ್ಯ ಹೆಚ್ಚಿಸಲಿದೆ ಹಂಪಿ ಕಲ್ಲಿನ ರಥ]

india

ರೂಪಾಯಿ ಮೌಲ್ಯ ಕುಸಿದರೆ ಇತ್ತ ಚಿನ್ನದ ಮಾರುಕಟ್ಟೆಯಲ್ಲಿ ಏರಿಕೆ ಕಂಡುಬಂದಿದೆ. ಕಳೆದ ಕೆಲ ದಿನಗಳಿಂದ ಇಳಿಕೆ ಹಾದಿ ಹಿಡಿದಿದ್ದ ಹಳದಿ ಲೋಹ ಬುಧವಾರ ಇದ್ದಕ್ಕಿದ್ದಂತೆ 350 ರು. ಏರಿಕೆ ದಾಖಲಿಸಿದೆ. ಇಂದಿನ ಚಿನ್ನದ ದರ ನೋಡಿ

ಯಾಕೆ ಹೀಗಾಯಿತು?
ಪೀಪಲ್ಸ್‌ ಬ್ಯಾಂಕ್‌ ಆಫ್ ಚೈನಾ ಬುಧವಾರ ತನ್ನ ಯುವಾನ್‌ ಕರೆನ್ಸಿಯನ್ನು ಅಮೆರಿಕನ್‌ ಡಾಲರ್‌ ಎದುರು ಶೇ. 2ರಷ್ಟು ಅಪಮೌಲ್ಯಗೊಳಿಸಿದ್ದು ಪ್ರಪಂಚದ ಮಾರುಕಟ್ಟೆ ಮೇಲೆ ಪರಿಣಾಮ ಉಂಟುಮಾಡಿತು. ಚೀನಾದ ಸೆಂಟ್ರಲ್‌ ಬ್ಯಾಂಕ್‌ ಡಾಲರ್‌ ಎದುರಿನ ದಿನನಿತ್ಯ ವಹಿವಾಟನ್ನು ಅಳೆಯುವ ಮಾನದಂಡದಲ್ಲಿ ತಂದ ವ್ಯತ್ಯಾಸಗಳು ಮಾರುಕಟ್ಟೆ ಅಲ್ಲೋಲ ಕಲ್ಲೋಲ ಆಗಲು ಕಾರಣವಾಯಿತು.

English summary
Indian rupee tumbled 69 paise to a nearly 2-year low to 64.88 on Wednesday, a level last seen in September 2013. The rupee's tumble comes amid a sharp decline across emerging market currencies following the devaluation of yuan by the Chinese government.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X