74ರ ಗಡಿದಾಟಿದ ರೂಪಾಯಿ ಮೌಲ್ಯ: ಷೇರುಪೇಟೆಯಲ್ಲಿ ತಲ್ಲಣ

ನವದೆಹಲಿ, ಅಕ್ಟೋಬರ್ 9: ಮಂಗಳವಾರ ಬೆಳಿಗ್ಗೆ ತುಸು ಚೇತರಿಕೆಯ ಲಕ್ಷಣ ತೋರಿಸಿದ್ದ ಷೇರು ಪೇಟೆ ಸೂಚ್ಯಂಕ ಷೇರುದಾರರಲ್ಲಿ ಉತ್ಸಾಹ ಮೂಡಿಸಿತ್ತು. ಆದರೆ, ಡಾಲರ್ ದೈತ್ಯನ ಎದುರು ಸೋತು ಬಸವಳಿದಿರುವ ರೂಪಾಯಿಗೆ ಮತ್ತೆ ಹೊಡೆತ ಬಿದ್ದಿದ್ದು, ಅದರ ನೇರ ಪರಿಣಾಮ ರೂಪಾಯಿ ಸಾಮರ್ಥ್ಯದ ಕುರಿತು ನಂಬಿಕೆ ಇರಿಸಿಕೊಂಡಿರುವ ಷೇರುದಾರರ ಮೇಲಾಗಿದೆ.

ಶುಕ್ರವಾರ ಷೇರುಪೇಟೆಯ ವಹಿವಾಟಿಗೆ ಬಾಗಿಲು ಮುಚ್ಚುವ ವೇಳೆ ಡಾಲರ್ ಎದುರು ರೂಪಾಯಿ ಮೌಲ್ಯ 73.77 ರೂ.ನಷ್ಟಿತ್ತು. ಎರಡು ದಿನಗಳ ವಿರಾಮದ ಬಳಿಕ ಸೋಮವಾರ ಮತ್ತೆ ಬಾಗಿಲು ತೆರೆದಾಗ ಏಕಾಏಕಿ 73.96 ರೂ.ಗೆ ಅಪಮೌಲ್ಯಗೊಂಡಿತ್ತು. ಸೋಮವಾರ ದಿನದ ಅಂತ್ಯಕ್ಕೆ 74 ರೂ. ದಾಟುವ ಮೂಲಕ ಸಾರ್ವಕಾಲಿಕ ಹಿನ್ನಡೆ ಅನುಭವಿಸಿದ ರೂಪಾಯಿ ಮೌಲ್ಯ 74.07ಕ್ಕೆ ನಿಂತಿತ್ತು.

ಮಂಗಳವಾರ ದಿನದ ವಹಿವಾಟು ಆರಂಭವಾದ ಕೆಲ ಹೊತ್ತಿನಲ್ಲೇ ಮತ್ತೆ ಮೂರು ಪೈಸೆಯಷ್ಟು ಮೌಲ್ಯ ಕಳೆದುಕೊಂಡಿತು. 74.10 ರೂನೊಂದಿಗೆ ವಹಿವಾಟು ನಡೆಸಿತು.

rupee falls against dollar 74.10 rupees share market japan yen

ಜಪಾನ್‌ನ ಯೆನ್ ಎದುರು ಡಾಲರ್ ಮೌಲ್ಯ ಕುಸಿತ ಕಂಡಿದೆ. ಅಮೆರಿಕದ ಬಾಂಡ್ ಯೀಲ್ಡ್‌ಗಳ ಕುರಿತಾದ ಗೊಂದಲ, ಚೀನಾ-ಅಮೆರಿಕ ವ್ಯಾಪಾರ ಸಮರ ಹಾಗೂ ಯುರೋಪ್‌ನಲ್ಲಿನ ರಾಜಕೀಯ ಗದ್ದಲಗಳು ಯೆನ್-ಡಾಲರ್ ವಹಿವಾಟಿನ ಮೇಲೆ ಪರಿಣಾಮ ಬೀರಿವೆ.

ಡಾಲರ್‌ ಎದುರು ಸತತ ನಾಲ್ಕನೆಯ ಬಾರಿ ಯೆನ್ ತಮ್ಮ ಮೌಲ್ಯ ಹೆಚ್ಚಿಸಿಕೊಂಡಿದೆ. ಪ್ರತಿ ಡಾಲರ್‌ಗೆ 114.55 ಯೆನ್ ಇದೆ.

ಭಾರತದಲ್ಲಿ ವಿದೇಶಿ ಹೂಡಿಕೆದಾರರು ಅಕ್ಟೋಬರ್ ತಿಂಗಳಿನಲ್ಲಿ ಇದುವರೆಗೂ ದೇಶಿ ಬಂಡವಾಳ ಮಾರುಕಟ್ಟೆಯಿಂದ 9 ಸಾವಿರ ಕೋಟಿ ರೂ ಹಿಂಪಡೆದುಕೊಂಡಿದ್ದಾರೆ.

2018ರಲ್ಲಿ ಅತಿ ಹೀನಾಯ ಸನ್ನಿವೇಶದಲ್ಲಿರುವ ಏಷ್ಯಾದ ಕರೆನ್ಸಿ ಎಂಬ ಅಪಕೀರ್ತಿಗೆ ಭಾರತದ ರೂಪಾಯಿ ಒಳಗಾಗಿದೆ. ಈ ವರ್ಷ ರೂಪಾಯಿ ಇದುವರೆಗೂ ಸುಮಾರು ಶೇ 14ರಷ್ಟು ಕುಸಿತ ಅನುಭವಿಸಿದೆ. ಚೀನಾದ ರೆನ್ಬಿಂಬಿ ಕರೆನ್ಸಿ ಮೌಲ್ಯ ಶೇ 6ರಷ್ಟು ಮಾತ್ರ ಇಳಿಕೆ ಕಂಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+