ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕ ಡಾಲರ್ ವಿರುದ್ಧ ಸಾರ್ವಕಾಲಿಕ ದಾಖಲೆ ಕುಸಿತ ಕಂಡ ರುಪಾಯಿ

|
Google Oneindia Kannada News

ಅಮೆರಿಕ ಡಾಲರ್ ವಿರುದ್ಧ ರುಪಾಯಿ ಮೌಲ್ಯ ಗುರುವಾರ ಸಾರ್ವಕಾಲಿಕ ದಾಖಲೆಯ ಕುಸಿತ ಕಂಡಿದೆ. ಏಷ್ಯಾದ ಇತರ ಕರೆನ್ಸಿಗಳ ಮೌಲ್ಯವೂ ಅಮೆರಿಕ ಡಾಲರ್ ವಿರುದ್ಧ ಕುಸಿದಿವೆ. ರುಪಾಯಿ ಮೌಲ್ಯ ಇನ್ನೂ ಹೆಚ್ಚಿನ ಕುಸಿತ ಕಾಣದಂತೆ ಕೇಂದ್ರ ಬ್ಯಾಂಕ್ ಕ್ರಮ ಕೈಗೊಳ್ಳಬಹುದು ಎಂಬ ಭರವಸೆ ವ್ಯಕ್ತವಾಗಿದೆ.

ಗುರುವಾರ ಬೆಳಗ್ಗೆ 11.12ರ ಸಮಯದಲ್ಲಿ ಡಾಲರ್ ವಿರುದ್ಧ ರುಪಾಯಿ 68.92/93ರಷ್ಟಿತ್ತು. ಇದಕ್ಕೂ ಮುನ್ನ 69.0950 ತಲುಪಿತ್ತು. ಈ ಹಿಂದಿನ ಸಾರ್ವಕಾಲಿಕ ದಾಖಲೆಯ ಕುಸಿತ 68.8650 ನವೆಂಬರ್ 24, 2016ರಲ್ಲಿ ತಲುಪಿತ್ತು. ಡಾಲರ್ ನ ಮೌಲ್ಯ ಅದರ ಇತರ ಪೈಪೋಟಿ ಕರೆನ್ಸಿಗಳಿಗಿಂತ ಸ್ಥಿರವಾಗಿತ್ತು.

ಡಾಲರ್ ಎದುರು ಕುಸಿತ ಕಂಡ ರೂಪಾಯಿ, ಇಂಧನ ಬೆಲೆ ಹೆಚ್ಚಳ ಸಾಧ್ಯತೆಡಾಲರ್ ಎದುರು ಕುಸಿತ ಕಂಡ ರೂಪಾಯಿ, ಇಂಧನ ಬೆಲೆ ಹೆಚ್ಚಳ ಸಾಧ್ಯತೆ

ಅಮೆರಿಕದಲ್ಲಿ ಚೀನಾದ ಹೂಡಿಕೆ ಮೇಲೆ ನಿರ್ಬಂಧ ಹೇರುವ ವಿಚಾರವಾಗಿ ಪ್ರಸ್ತಾವ ಇಟ್ಟಿದ್ದು, ಯುಎಸ್- ಚೀನಾ ವ್ಯವಹಾರ ತಿಕ್ಕಾಟವು ಆರ್ಥಿಕ ಮಾರುಕಟ್ಟೆಯ ಮೇಲೆ ಪರಿಣಾಮ ಬೀರಿದೆ. ಇನ್ನು ರುಪಾಯಿ ಮೌಲ್ಯ ಕುಸಿತದ ವಿಚಾರಕ್ಕೆ ಬಂದರೆ, ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಏರುತ್ತಿರುವ ಕಚ್ಚಾ ತೈಲ ಬೆಲೆಯಿಂದ ಚಾಲ್ತಿ ಖಾತೆ ಕೊರತೆ (ಸಿಎಡಿ) ಮತ್ತಿತರ ಸಂಗತಿಗಳು ಈ ವರ್ಷ ರುಪಾಯಿ ಮೌಲ್ಯದ ಮೇಲೆ ಪರಿಣಾಮ ಬೀರಿವೆ.

Rupee crashes to life time Low of 69 against US dollar

ಇಷ್ಟು ವೇಗವಾಗಿ ರುಪಾಯಿ ಮೌಲ್ಯ ಕುಸಿದರೆ ವಿಶ್ವಾಸವನ್ನೇ ಕಡಿಮೆ ಮಾಡುತ್ತದೆ. ರುಪಾಯಿ ಮೌಲ್ಯ ಹೆಚ್ಚು ಕುಸಿಯದಂತೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ನೋಡಿಕೊಳ್ಳಬೇಕು ಅನ್ನೋದು ಮಾರುಕಟ್ಟೆಯ ನಿರೀಕ್ಷೆ. ಭಾರತದ ರುಪಾಯಿ ಮೇಲೆ ಹೆಚ್ಚಿನ ಒತ್ತಡವಿದೆ. ಎಪ್ಪತ್ತು ರುಪಾಯಿ ಮುಟ್ಟಬಹುದು ಎಂಬ ಅಭಿಪ್ರಾಯ ಕೂಡ ವ್ಯಕ್ತವಾಗಿದೆ.

English summary
The rupee fell to an all-time low against the US dollar on Thursday tracking Asian peers, with weakening macro-economic fundamentals on the domestic front also weighing on the currency.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X