ಎಟಿಎಂನಲ್ಲಿ 2,000 ರು ಮಿತಿ ಅಂದ್ರೆ ಏನ್ ನಮ್ ಗತಿ?

Posted By:
Subscribe to Oneindia Kannada

ಬೆಂಗಳೂರು, ನವೆಂಬರ್ 09: ಪ್ರಧಾನಿ ನರೇಂದ್ರ ಮೋದಿ ಅವರು ಕಪ್ಪು ಹಣ ನಿಯಂತ್ರಣಕ್ಕಾಗಿ ಜಾರಿಗೊಳಿಸಿರುವ ಆದೇಶಕ್ಕೆ ಎಲ್ಲೆಡೆಯಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಆದರೆ, ದೇಶದೆಲ್ಲೆಡೆ ಎಟಿಎಂಗಳಲ್ಲಿ ನೂಕುನುಗ್ಗಲು, ಗೊಂದಲ ಮುಂದುವರೆದಿದೆ. ಈ ನಡುವೆ ದಿನವೊಂದಕ್ಕೆ ಕೇವಲ 2,000 ಮಾತ್ರ ಎಟಿಎಂ ಕಾರ್ಡಿನಿಂದ ವಿಥ್ ಡ್ರಾ ಮಾಡಬಹುದು ಎಂಬ ತಾತ್ಕಾಲಿಕ ಆದೇಶ ಜನ ಸಾಮಾನ್ಯರನ್ನು ಚಿಂತೆಗೀಡು ಮಾಡಿದೆ.

500 ಹಾಗೂ 1,000 ರು ಮುಖಬೆಲೆಯ ಕರೆನ್ಸಿ ನೋಟುಗಳು ಮಂಗಳವಾರ (ನವೆಂಬರ್ 08) ಮಧ್ಯರಾತ್ರಿಯಿಂದ ಮಾನ್ಯತೆ ಕಳೆದುಕೊಂಡಿವೆ. 500 ರು ಹಾಗೂ 2,000 ರು ಹೊಸ ನೋಟುಗಳು ನವೆಂಬರ್ 10ರಿಂದ ಜನರ ಕೈ ಸೇರಲಿದೆ. [ದೇಶದೆಲ್ಲೆಡೆ ಎಟಿಎಂಗಳಲ್ಲಿ ನೂಕು ನುಗ್ಗಲು]

ಅಲ್ಲಿ ತನಕ ಈ ಗೊಂದಲ ಮುಂದುವರೆಯಲಿದೆ. ನವೆಂಬರ್ 9 ಹಾಗೂ 10ರಂದು ಯಾವುದೇ ಎಟಿಎಂ ಕಾರ್ಯ ನಿರ್ವಹಿಸುವುದಿಲ್ಲ. ಗ್ರಾಹಕರಿಗೆ ಚೆಕ್, ಡಿಡಿ, ಮೊಬೈಲ್, ಆನ್ ಲೈನ್ ಬ್ಯಾಂಕಿಂಗ್ ವ್ಯವಹಾರಕ್ಕೆ ಯಾವುದೇ ತೊಂದರೆ ಇರುವುದಿಲ್ಲ.[ನೋಟಿಗೆ ಕಡಿವಾಣ : ಎಲ್ಲರೂ ತಿಳಿಯಬೇಕಾಗಿರುವುದೇನು?]

ತಾತ್ಕಾಲಿಕ ಮಿತಿ

ತಾತ್ಕಾಲಿಕ ಮಿತಿ

ಪ್ರತಿ ದಿನ ಎಟಿಎಂನಿಂದ ವಿಥ್ ಡ್ರಾ ಮಾಡುವ ಮಿತಿಯನ್ನು ಪ್ರತಿ ಕಾರ್ಡಿಗೆ 2,000 ರು ಗಳಿಗೆ ಸೀಮಿತಗೊಳಿಸಲಾಗಿದೆ. ಈ ಕ್ರಮ ಕೆಲ ದಿನಗಳ ಮಟ್ಟಿಗೆ ಜಾರಿಯಲ್ಲಿರಲಿದೆ. ನಂತರ ಈ ಮಿತಿಯನ್ನು 4,000 ರು ಗಳಿಗೆ ಏರಿಸಲಾಗುತ್ತದೆ ಎಂದು ಆರ್ ಬಿಐ ಮೂಲಗಳು ಹೇಳಿವೆ.

ಪ್ರತಿ ದಿನ ವಿಥ್ ಡ್ರಾ ಮಿತಿ

ಪ್ರತಿ ದಿನ ವಿಥ್ ಡ್ರಾ ಮಿತಿ

ಇದರ ಜೊತೆಗೆ ಪ್ರತಿ ದಿನ ವಿಥ್ ಡ್ರಾ ಮಿತಿಯನ್ನು 10,000 ರು ಗಳಿಗೆ ಸೀಮಿತಗೊಳಿಸಲಾಗಿದೆ. ಪ್ರತಿ ವಾರದ ಮಿತಿ 20,000 ರು ತನಕ ಇದೆ. ಇದನ್ನು ಮುಂಬರುವ ದಿನಗಳಲ್ಲಿ ಹೆಚ್ಚಿಸಲಾಗುತ್ತದೆ.

ನೋಟುಗಳನ್ನು ಬದಲಾಯಿಸಿಕೊಳ್ಳಬಹುದು

ನೋಟುಗಳನ್ನು ಬದಲಾಯಿಸಿಕೊಳ್ಳಬಹುದು

ಮುಂದಿನ 72ಗಂಟೆಗಳಲ್ಲಿ ಈ ಕೆಳಕಂಡಲ್ಲಿ ನೋಟುಗಳನ್ನು ಬದಲಾಯಿಸಿಕೊಳ್ಳಬಹುದು
* ಸರ್ಕಾರಿ ಆಸ್ಪತ್ರೆ, ರೈಲು, ವಿಮಾನ, ಬಸ್ ಟಿಕೆಟ್ ಬುಕ್ಕಿಂಗ್ ಕೌಂಟರ್,
* ಎಟಿಎಂ, ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳ ಬಂಕ್
* ಸರ್ಕಾರಿ ಸ್ವಾಮ್ಯದ ರೀಟೆಲ್ ಮಳಿಗೆ
* ಚಿತಾಗಾರ ಹಾಗೂ ಸ್ಮಶಾನ.

ಗುರುತಿನ ಚೀಟಿ ನೀಡಿ

ಗುರುತಿನ ಚೀಟಿ ನೀಡಿ

ನವೆಂಬರ್ 10 ರಿಂದ ಡಿಸೆಂಬರ್ 30 ರ ತನಕ ಯಾವುದೇ ಮಿತಿ ಇಲ್ಲದೆ ಬ್ಯಾಂಕ್ ಅಥವಾ ಅಂಚೆ ಕಚೇರಿಗಳಲ್ಲಿ ಹಳೆ ನೋಟುಗಳನ್ನು ನೀಡಿ ಹೊಸ ನೋಟು ಪಡೆಯಬಹುದು. ನಂತರ ಗುರುತಿನ ಚೀಟಿ ನೀಡಿ ಮಾರ್ಚ್ 2017ರ ತನಕ ನೋಟುಗಳನ್ನು ಬದಲಾಯಿಸಿಕೊಳ್ಳಬಹುದಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
In the event of Rs 1,000 and Rs 500 notes being taken out of circulation, there would be a limit of Rs 2,000 that can be withdrawn in ATMs for a couple of days.
Please Wait while comments are loading...