ರಾಯಲ್‌ ಎನ್‌ಫೀಲ್ಡ್‌ ಬೈಕ್‌ : ಅರ್ಧ ಬೆಲೆಗೆ ಬುಲೆಟ್‌ ಬೈಕ್ ಖರೀದಿಸುವುದು ಹೇಗೆ?

ನವದೆಹಲಿ, ನವೆಂಬರ್ 23: ಅನೇಕ ಬೈಕ್ ಸವಾರರು ರಾಯಲ್‌ ಎನ್‌ಫೀಲ್ಡ್ ಬೈಕ್ ಹೊಂದಬೇಕು ಎಂದು ಕನಸು ಕಂಡಿರುತ್ತಾರೆ. ಇನ್ನೂ ಅನೇಕರಿಗೆ ಅದರ ಬೆಲೆಯಿಂದಾಗಿ, ಬೈಕ್‌ಗಳ ಖರೀದಿ ಸಾಧ್ಯವಾಗುವುದಿಲ್ಲ.

ರಾಯಲ್ ಎನ್‌ಫೀಲ್ಡ್ ನೋಟವು ಬೈಕ್ ಪ್ರಿಯರನ್ನು ಬಹಳಷ್ಟು ಆಕರ್ಷಿಸುತ್ತದೆ. ಆದರೆ ಸಾಮಾನ್ಯ ಬೈಕ್‌ಗಳಿಗಿಂತ ಹೆಚ್ಚಿನ ಬೆಲೆ ತೆರಬೇಕಾದ ಕಾರಣ ನೋಡಿ ಸುಮ್ಮನಾದವರು ಹೆಚ್ಚು. ಅದರಲ್ಲೂ ಬುಲೆಟ್ ಬೈಕ್‌ನ ಶಬ್ದವೇ ಎಂತವರನ್ನು ಒಮ್ಮೆ ತಿರುಗಿ ನೋಡುವಂತೆ ಮಾಡುತ್ತದೆ. ಆದರೆ ಈ ಬೈಕ್‌ಗಳನ್ನು ಅರ್ಧ ಬೆಲೆಗೂ ಖರೀದಿಸಬಹುದು. ರಾಯಲ್‌ ಎನ್‌ಫೀಲ್ಡ್ ಬೈಕ್‌ ಖರೀದಿಸಲೇಬೇಕು ಎನ್ನುವವರಿಗೆ ಇಲ್ಲಿ ಒಂದು ಮಾರ್ಗವಿದೆ. ಕಡಿಮೆ ಬೆಲೆಗೆ ರಾಯಲ್ ಎನ್‌ಫೀಲ್ಡ್‌ ಬೈಕ್‌ಗಳ ಖರೀದಿಗೆ ಇಲ್ಲಿ ಅವಕಾಶವಿದೆ. ಅದು ಹೇಗೆ ಮತ್ತು ಎಲ್ಲಿ ಎಂಬುದನ್ನು ಹೇಳುತ್ತೇವೆ.

ಸೆಕೆಂಡ್ ಹ್ಯಾಂಡ್ ಬೈಕು ಅನ್ನು ಅರ್ಧಕ್ಕಿಂತ ಕಡಿಮೆ ಬೆಲೆಗೆ ಖರೀದಿಸಬಹುದು. ಒಳ್ಳೆಯ ವಿಚಾರ ಏನಂದ್ರೆ ನಿಮ್ಮ ನೆಚ್ಚಿನ ರಾಯಲ್ ಎನ್‌ಫೀಲ್ಡ್ ಬೈಕು ಖರೀದಿಸಲು ನೀವು ಕಂಪನಿಯ ಶೋ ರೂಂಗೆ ಹೋಗಬೇಕಾಗಿಲ್ಲ. ನೀವು ಅದನ್ನು ಮನೆಯಲ್ಲಿ ಕುಳಿತುಕೊಂಡು ಆರ್ಡರ್ ಮಾಡಲು ಸಾಧ್ಯವಾಗುತ್ತದೆ.

ಮನೆಯಲ್ಲಿಯೇ ಕುಳಿತು ಬುಲೆಟ್‌ ಬೈಕ್ ಬುಕ್ ಮಾಡಿ

ಮನೆಯಲ್ಲಿಯೇ ಕುಳಿತು ಬುಲೆಟ್‌ ಬೈಕ್ ಬುಕ್ ಮಾಡಿ

ನೀವು ರಾಯಲ್ ಎನ್‌ಫೀಲ್ಡ್‌ ಬುಲೆಟ್ ಬೈಕ್ ಖರೀದಿಸಲು ಬಯಸಿದರೆ, ಇದಕ್ಕಾಗಿ ನೀವು ಎಲ್ಲಿಯೂ ಹೋಗಬೇಕಿಲ್ಲ. ಪ್ರಸಿದ್ಧ ಆನ್‌ಲೈನ್ ವೆಬ್‌ಸೈಟ್ ಡ್ರೂಮ್‌ನಿಂದ ನೀವು ಮನೆಯಲ್ಲಿ ಕುಳಿತು ರಾಯಲ್ ಎನ್‌ಫೀಲ್ಡ್‌ ಬುಲೆಟ್ ಬೈಕ್‌ ಅನ್ನು ಅರ್ಧಕ್ಕಿಂತ ಕಡಿಮೆ ಬೆಲೆಗೆ ಕಾಯ್ದಿರಿಸಬಹುದು. ಹೀಗೆ ವೆಬ್‌ಸೈಟ್‌ನಲ್ಲಿ ಕಂಡುಬರುವ ಕೆಲವು ಬುಲೆಟ್‌ಗಳ ಬಗ್ಗೆ ನಿಮಗೆ ಮಾಹಿತಿ ಸಿಗುತ್ತದೆ. ಇದರಿಂದ ನೀವು ಆ ಬೈಕ್‌ಗಳ ಬಗ್ಗೆ ತಿಳಿದುಕೊಳ್ಳಲು ಮತ್ತು ಖರೀದಿಸಲು ಸಾಧ್ಯ.

ಸೆಕೆಂಡ್ ಹ್ಯಾಂಡ್‌ ಬೈಕ್‌ಗಳು ಎಲ್ಲಿಂದ ಸಿಗುತ್ತೆ?

ಸೆಕೆಂಡ್ ಹ್ಯಾಂಡ್‌ ಬೈಕ್‌ಗಳು ಎಲ್ಲಿಂದ ಸಿಗುತ್ತೆ?

ಡ್ರೂಮ್ ವೆಬ್‌ಸೈಟ್‌ನಲ್ಲಿ ನೀಡಿರುವ ಮಾಹಿತಿಯ ಪ್ರಕಾರ ಬುಲೆಟ್‌ ಬೈಕ್‌ಗಳ ಬಗ್ಗೆ ಇರುವ ವಿಷಯವನ್ನು ನಾವು ನಿಮಗೆ ತಿಳಿಸುತ್ತೇವೆ. ಈ ಎಲ್ಲಾ ಬೈಕ್‌ಗಳು ದೆಹಲಿಯಲ್ಲಿ ಮತ್ತು ಇತರ ನಗರಗಳಲ್ಲಿ ಲಭ್ಯವಿದೆ. ಆದರೆ ಹಳೆಯ ವಾಹನಗಳನ್ನು ಖರೀದಿಸುವ ಮೊದಲು, ಅದರ ದಾಖಲೆಗಳು ಮತ್ತು ಸ್ಥಿತಿಯ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯುವುದು ಬಹಳ ಮುಖ್ಯ ಎಂಬುದನ್ನು ನೆನಪಿನಲ್ಲಿಡಿ.

ರಾಯಲ್‌ ಎನ್‌ಫೀಲ್ಡ್‌ ಥಂಡರ್ ಬರ್ಡ್ 350 ಸಿಸಿ

ರಾಯಲ್‌ ಎನ್‌ಫೀಲ್ಡ್‌ ಥಂಡರ್ ಬರ್ಡ್ 350 ಸಿಸಿ

ರಾಯಲ್ ಎನ್‌ಫೀಲ್ಡ್ನ ಪ್ರಸಿದ್ಧ ಬೈಕ್ ಥಂಡರ್ ಬರ್ಡ್ 350 ಸಿಸಿ, ಇದು 2005 ರ ಮಾದರಿಯಾಗಿದೆ. ಈ ಬೈಕು ಸುಮಾರು 50,000 ಕಿಲೋಮೀಟರ್ ಓಡಿದೆ. ವೆಬ್‌ಸೈಟ್ ಮಾಹಿತಿ ಪ್ರಕಾರ ಇದು 40,000 ಕ್ಕೆ ಲಭ್ಯವಿದೆ. ಈ ಮೂಲಕ ನೀವು ಮತ್ತೊಂದು ಶಕ್ತಿಯುತ ಥಂಡರ್ ಬರ್ಡ್ ಅನ್ನು ಅಗ್ಗದ ಬೆಲೆಗೆ ಖರೀದಿಸಬಹುದು. ರಾಯಲ್ ಎನ್‌ಫೀಲ್ಡ್ ಥಂಡರ್ ಬರ್ಡ್ ಇದು 350 ಸಿಸಿ, 2009 ಮಾದರಿಯಾಗಿದೆ. ಈ ಬೈಕು 54,000 ಕಿ.ಮೀ ಓಡಿಸಲಾಗಿದ್ದು, ಇದರ ಬೆಲೆ 35,000. ಈ ಬೈಕುಗಳನ್ನು ಕಪ್ಪು ಬಣ್ಣದಲ್ಲಿ ಫರಿದಾಬಾದ್‌ನಿಂದ ಖರೀದಿಸಬಹುದು ಎಂಬ ಮಾಹಿತಿ ನೀಡಲಾಗಿದೆ.

ನೀವು ಬೈಕ್ ಖರೀದಿಗೆ ಮುನ್ನ ನಿಮ್ಮ ನಗರದ ಆಯ್ಕೆಯನ್ನು ಆರಿಸಿಕೊಳ್ಳಬಹುದು ಮತ್ತು ಆಯ್ಕೆಯ ಬೈಕು ಖರೀದಿಸಬಹುದು.

Recommended Video

    ಶಾಲೆಗಳ ವಿಚಾರದಲ್ಲಿ ಮಹತ್ವದ ನಿರ್ಧಾರ ಕೈಗೊಂಡ ರಾಜ್ಯ ಸರ್ಕಾರ | Oneindia Kannada
    ಅನೇಕ ಮಾದರಿಯ ಬುಲೆಟ್ ಬೈಕ್‌ಗಳು ಲಭ್ಯವಿದೆ

    ಅನೇಕ ಮಾದರಿಯ ಬುಲೆಟ್ ಬೈಕ್‌ಗಳು ಲಭ್ಯವಿದೆ

    ಡ್ರೂಮ್ ವೆಬ್‌ಸೈಟ್‌ನಲ್ಲಿ ನಿಮಗೆ ಅನೇಕ ಕಂಪನಿಯ ಮಾಡೆಲ್‌ಗಳ ಬೈಕ್ ಲಭ್ಯವಿದೆ. ಇದರ ಜೊತೆಗೆ ಬುಲೆಟ್ ಬೈಕ್ ಖರೀದಿಸುವ ಆಸೆ ಹೊಂದಿರುವವರಿಗೂ ಆಯ್ಕೆಗಳಿವೆ. ರಾಯಲ್ ಎನ್‌ಫೀಲ್ಡ್ ಬುಲೆಟ್ 350 ಸಿಸಿ, ಇದು 1992 ರ ಮಾದರಿಯಾಗಿದೆ. ಈ ಬೈಕು 15,000 ಕಿ.ಮೀ. ಓಡಿದ್ದು, 43,000 ಕ್ಕೆ ಮಾರಾಟ ಮಾಡಲಾಗುತ್ತದೆ. ಈ ಬೈಕುಗಳನ್ನು ಸಂಪೂರ್ಣವಾಗಿ ಕಪ್ಪು ಬಣ್ಣದಲ್ಲಿ ಖರೀದಿಸಬಹುದು ಎಂಬ ಮಾಹಿತಿ ವೆಬ್‌ಸೈಟ್‌ನಲ್ಲಿ ಲಭ್ಯವಿದೆ.

    ಇದರೊಂದಿಗೆ, 350 ಸಿಸಿ, 1990 ಮಾದರಿಯ ಮತ್ತೊಂದು ಬುಲೆಟ್. ಈ ಬೈಕು 35,000 ಕಿ.ಮೀ ಓಡಿಸಲಾಗಿದ್ದು, ಇದರ ಬೆಲೆ 45,000. ಈ ಬೈಕುಗಳನ್ನು ಕೆಂಪು ಬಣ್ಣದಲ್ಲಿ ಮಥುರಾದಿಂದ ಖರೀದಿಸಬಹುದು ಎಂಬ ಮಾಹಿತಿಯನ್ನು ಕಾಣಬಹುದು. ಹೀಗೆ ಈ ವೆಬ್‌ಸೈಟ್ ಮೂಲಕ ನೀವು ಕಡಿಮೆ ಬೆಲೆಯಲ್ಲಿ ಬುಲೆಟ್ ಬೈಕ್ ಖರೀದಿಗೆ ಸಾಧ್ಯ. ಆದರೆ ಎಲ್ಲದಕ್ಕಿಂತ ಮುಖ್ಯವಾಗಿ ಬೈಕ್ ದಾಖಲೆಗಳು ಮತ್ತು ಸ್ಥಿತಿಯ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯುವುದು ಉತ್ತಮ.

    Notifications
    Settings
    Clear Notifications
    Notifications
    Use the toggle to switch on notifications
    • Block for 8 hours
    • Block for 12 hours
    • Block for 24 hours
    • Don't block
    Gender
    Select your Gender
    • Male
    • Female
    • Others
    Age
    Select your Age Range
    • Under 18
    • 18 to 25
    • 26 to 35
    • 36 to 45
    • 45 to 55
    • 55+