ಹಣದುಬ್ಬರ ದರ ವರ್ಷದಲ್ಲೇ ಕನಿಷ್ಠ; ತರಕಾರಿ-ಬೇಳೆಕಾಳುಗಳು ಸಸ್ತಾ

ನವದೆಹಲಿ, ನವೆಂಬರ್ 12: ಚಿಲ್ಲರೆ ಹಣದುಬ್ಬರವು ಅಕ್ಟೋಬರ್ ನಲ್ಲಿ ಒಂದು ವರ್ಷದ ಕನಿಷ್ಠ ಮಟ್ಟವಾದ 3.31%ಗೆ ತಲುಪಿದೆ. ಇದರಿಂದ ಅಡುಗೆ ಮನೆಗೆ ಬೇಕಾದ ಆಹಾರ ಪದಾರ್ಥಗಳು, ಹಣ್ಣು ಹಾಗೂ ಪ್ರೊಟೀನ್ ಸಮೃದ್ಧವಾದ ಪದಾರ್ಥಗಳ ಬೆಲೆ ಅಗ್ಗವಾಗಿದೆ ಎಂದು ಸೋಮವಾರ ಬಿಡುಗಡೆಯಾದ ಅಧಿಕೃತ ದತ್ತಾಂಶಗಳು ಮಾಹಿತಿ ನೀಡಿವೆ.

ಹಣದುಬ್ಬರವು ಗ್ರಾಹಕ ಬೆಲೆ ಸೂಚ್ಯಂಕದ (CPI) ಮೇಲೆ ಅವಲಂಬಿತವಾಗಿದ್ದು, ಸೆಪ್ಟೆಂಬರ್ 2018ರಲ್ಲಿ 3.7% ಇತ್ತು. ಅಕ್ಟೋಬರ್ 2017ರಲ್ಲಿ 3.58% ಇತ್ತು. ಚಿಲ್ಲರೆ ಹಣದುಬ್ಬರವು ಸೆಪ್ಟೆಂಬರ್ 2017ರಲ್ಲಿ 3.28% ತಲುಪಿತ್ತು. ಆ ನಂತರ ತಲುಪಿದ ಕನಿಷ್ಠ ಮಟ್ಟ ಈಗಿನದಾಗಿದೆ.

ಆಹಾರ ಪದಾರ್ಥಗಳ ಬೆಲೆ ಏರಿಕೆ ಪ್ರಮಾಣವು ಅಕ್ಟೋಬರ್ ನಲ್ಲಿ 0.86% ಆದರೆ, ಸೆಪ್ಟೆಂಬರ್ ನಲ್ಲಿ 0.51% ಏರಿಕೆ ಆಗಿತ್ತು ಎಂದು ಕೇಂದ್ರ ಸಾಂಖ್ಯಿಕ ಇಲಾಖೆ ಮಾಹಿತಿ ನೀಡಿದೆ. ತರಕಾರಿಗಳ ಬೆಲೆಗಳು ಅಕ್ಟೋಬರ್ ನಲ್ಲಿ 8.06% ಕಡಿಮೆಯಾಗಿದ್ದರೆ, ಸೆಪ್ಟೆಂಬರ್ ನಲ್ಲಿ 4.15% ಕಡಿಮೆಯಾಗಿತ್ತು. ಹಣ್ಣುಗಳ ಹಣದುಬ್ಬರವು 0.35% ಇಳಿಕೆಯಾಗಿದ್ದು, ತಿಂಗಳ ಹಿಂದೆ ಈ ಪ್ರಮಾಣ 1.12% ದಾಖಲಾಗಿತ್ತು.

Retail inflation cools to year low in October

ಪ್ರೊಟೀನ್ ಯುಕ್ತವಾದ ಬೇಳೆ ಕಾಳುಗಳು, ಮೊಟ್ಟೆ, ಹಾಲು ಮತ್ತಿತರ ಪದಾರ್ಥಗಳ ಚಿಲ್ಲರೆ ಹಣದುಬ್ಬರ ಕೂಡ ಇಳಿಕೆ ಆಗಿದೆ. ಆದರೆ ಕಳೆದ ತಿಂಗಳು 8.47% ಇದ್ದ ಇಂಧನ ಹಾಗೂ ವಿದ್ಯುಚ್ಛಕ್ತಿ ವರ್ಗದ ಹಣದುಬ್ಬರವು ಈ ತಿಂಗಳು 8.55%ಗೆ ಏರಿಕೆ ಕಂಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+