ಕೈಗೆಟಕುವ ಬೆಲೆಯಲ್ಲಿ ರಿಲಯನ್ಸ್ ನಿಂದ 4ಜಿ ಸ್ಮಾರ್ಟ್ ಫೋನ್

Posted By:
Subscribe to Oneindia Kannada

ಬೆಂಗಳೂರು, ಜುಲೈ 12: ದೇಶದ ಸ್ಮಾರ್ಟ್ ಫೋನ್ ಕ್ಷೇತ್ರಕ್ಕೆ ಅತ್ಯಂತ ಆಕರ್ಷಕ ಬೆಲೆಯಲ್ಲಿ ರಿಲಯನ್ಸ್ ತನ್ನ ಗ್ರಾಹಕರಿಗೆ ರಿಲಯನ್ಸ್ ಲೈಫ್(LYF) ಟ್ರೂ 4ಜಿ ಸ್ಮಾರ್ಟ್ ಫೋನ್ ಹಾಗೂ ನೈಜ 4 ಜಿ ಶ್ರೇಣಿಯ ನಾಲ್ಕು ಫ್ಲೇಮ್ ಮಾಡೆಲ್ ಕಲೆಕ್ಷನ್ ಮಾರುಕಟ್ಟೆಯಲ್ಲಿ ಪರಿಚಯಿಸುತ್ತಿದೆ.

ಫ್ಲೇಮ್ ಶ್ರೇಣಿಯ ನಾಲ್ಕು ಮೊಬೈಲ್ ಗಳಾದ ಫ್ಲೇಮ್ 3, ಫ್ಲೇಮ್ 4, ಫ್ಲೇಮ್ 5 ಹಾಗೂ ಫ್ಲೇಮ್ 6ನ್ನು ದೇಶಾದ್ಯಂತ 2,999 ರೂ. ಬೆಲೆಯಲ್ಲಿ ಪರಿಚಯಿಸುತ್ತಿದೆ.[ಲೈಫ್ ವಿಂಡ್ 5 ಸ್ಮಾರ್ಟ್ ಫೋನ್ ಹೊರಬಿಟ್ಟ ರಿಲಯನ್ಸ್ ]

Reliance LYF Smartphone+ Flame Models offer price of Rs. 2999

ಪ್ರಧಾನ ಮಂತ್ರಿಯವರ ಡಿಜಿಟಲೀ ಕನೆಕ್ಟೆಡ್ ಇಂಡಿಯಾ ಕನಸಿಗೆ ಸರಿಹೊಂದುವ ರೀತಿಯಲ್ಲಿ ನಿರ್ಮಾಣಗೊಂಡ ಈ ಲೈಫ್ ಮೊಬೈಲ್ ಗಳು ಭಾರತದಲ್ಲಿ ಅತ್ಯಂತ ಕಡಿಮೆ ಬೆಲೆಯಲ್ಲಿ ಎಲ್ಲಾ ವರ್ಗದ ಜನರಿಗೂ ದೊರೆಯುವ ವೋಲ್ಟೆ(VoLTE) ಸ್ಮಾರ್ಟ್ ಫೋನ್ ಆಗಿದೆ ಮತ್ತು ಇದು ಲಕ್ಷಾಂತರ ಗ್ರಾಹಕರ ಡಿಜಿಟಲ್ ಜೀವನದ ಬಾಗಿಲು ತೆರೆಯಲಿದೆ. [ನಮೋ ಟೆಲ್ -99 ರು ಗಳಿಗೆ ಕೊಳ್ಳಿ ಸ್ಮಾರ್ಟ್ ಫೋನ್]

ಲೈಫ್ ನ ಇತರೆ ಡಿವೈಸ್ ಗಳಂತೆ ಫ್ಲೇಮ್ ಸರಣಿ ಕೂಡಾ, ವೋಲ್ಟೆ ಅಥವಾ ವಾಯ್ಸ್ ಓವರ್ ಎಲ್‍ಟಿಇ ತಂತ್ರಜ್ಞಾನದೊಂದಿಗೆ ಸುಸಜ್ಜಿತಗೊಂಡಿದೆ. [ಕೊಹ್ಲಿ ಹೆಸರಿನಲ್ಲಿ ಮೋಟೋ ಜಿ ಸ್ಮಾರ್ಟ್ ಫೋನ್!]

ಈ ತಂತ್ರಜ್ಞಾನವು ಬಳಕೆದಾರರಿಗೆ ಸುಧಾರಿತ ವೈಶಿಷ್ಟ್ಯಗಳಾದ ಫಾಸ್ಟರ್ ಕಾಲ್ ಸೆಟಪ್, ಹೈ ಡೆಫಿನೀಶನ್ (ಎಚ್ಡಿ) ಧ್ವನಿ ಮತ್ತು ವೀಡಿಯೋ ಕರೆ, ಧ್ವನಿ ಮತ್ತು ವಿಡಿಯೋ ಕರೆಯ ನಡುವಿನ ತಡೆರಹಿತ ಸ್ವಿಚಿಂಗ್ ಮತ್ತು ಮಲ್ಟಿ ಪಾರ್ಟಿ ಕಾನ್ಫರೆನ್ಸಿಂಗ್ ಅನ್ನು 4ಜಿ ಎಲ್‍ಟಿಇ ನೆಟ್‍ವರ್ಕ್ ನಲ್ಲಿ ಒದಗಿಸಲಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
LYF Smartphone+, the True 4G smartphone brand from Reliance Retail, has pushed the envelope of affordability in the Indian smartphone space by announcing a very aggressive price of Rs. 2999 on four of its Flame models – Flame 3, Flame 4, Flame 5 and Flame 6.
Please Wait while comments are loading...