ರಿಲಯನ್ಸ್ ಜಿಯೋ ಲೋಕಾರ್ಪಣೆ: ಗ್ರಾಹಕರಿಗೆ ವಾಯ್ಸ್ ಕಾಲ್ ಉಚಿತ

Posted By:
Subscribe to Oneindia Kannada

ಮುಂಬೈ, ಸೆಪ್ಟೆಂಬರ್ 01: ಮುಖೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಟೆಲಿಕಾಂ ಸಂಸ್ಥೆ ತನ್ನ ಮಹತ್ವಾಕಾಂಕ್ಷಿ ಯೋಜನೆ 'ಜಿಯೋ' ಗುರುವಾರ ಲೋಕಾರ್ಪಣೆ ಮಾಡಿದೆ. ಜಿಯೋ ಮೂಲಕ ವಿಶ್ವದ ಅತ್ಯಂತ ಕಡಿಮೆ ವೆಚ್ಚದ ದರ ಪಟ್ಟಿಯುಳ್ಳ ಆಫರ್ ಒದಗಿಸಲಿದೆ ಎಂದು ಮುಖೇಶ್ ಅಂಬಾನಿ ಘೋಷಿಸಿದ್ದಾರೆ.

ಸೆಪ್ಟೆಂಬರ್ 5ರಿಂದ ಭಾರತದಲ್ಲಿ ಸ್ಮಾರ್ಟ್ ಫೋನ್ ಬಳಕೆ ಮಾಡುವ ವಿಧಾನ ಬದಲಾಗಿದೆ ಎಂದು ಅಂಬಾನಿ ಘೋಷಿಸಿದ್ದಾರೆ. ಭಾರತೀಯರಿಗೆ ಇಲ್ಲಿ ತನಕ 'ಗಾಂಧಿಗಿರಿ' ಗೊತ್ತಿದೆ. ಇನ್ಮೇಲೆ 'Data-giri' ಪದ ಬಳಕೆಯಾಗಲಿದೆ.[ರಿಲಯನ್ಸ್ ಜಿಯೋ ಎಫೆಕ್ಟ್: ಏರ್ ಟೆಲ್ ಇಂಟರ್ನೆಟ್ ದರ ಕಡಿತ]

Reliance Jio Will Have Lowest Data Rates in the World : Mukesh Ambani


ಪ್ರಮುಖ ಘೋಷಣೆ:
* ಜಿಯೋ ಪ್ರಿವ್ಯೂ ಆಫರ್ ನಲ್ಲಿ 90 ದಿನಗಳ ಕಾಲ ಉಚಿತ ಇಂಟರ್ನೆಟ್ ಪ್ಯಾಕೇಜ್, ವಾಯ್ಸ್ ಕಾಲ್ ಹಾಗೂ ಎಸ್ಎಂಎಸ್ ಲಭ್ಯ.
* ಗುರುವಾರದ ಘೋಷಣೆಯಂತೆ 50 ರು ಗಳಿಗೆ 1ಜಿಬಿ 149 ರು ಪ್ರತಿ ತಿಂಗಳ ಪ್ಲ್ಯಾನ್ ಲಭ್ಯವಿದೆ.
* ಭಾರತದಾದ್ಯಂತ ರೋಮಿಂಗ್ ಚಾರ್ಜ್ ಗಳನ್ನು ಕಡಿತಗೊಳಿಸಲಾಗಿದೆ. [ಜಿಯೋ ಪ್ರಿವ್ಯೂ ಆಫರ್ ಮೈಕ್ರೋಮ್ಯಾಕ್ಸ್ ನಲ್ಲೂ ಲಭ್ಯ!]
* ರಿಲಯನ್ಸ್ ಜಿಯೋ ಗ್ರಾಹಕರಿಗೆ ವಾಯ್ಸ್ ಕಾಲ್ ಸಂಪೂರ್ಣ ಉಚಿತವಾಗಿದೆ.

* ಮಾರ್ಚ್ 2017ರೊಳಗೆ ಭಾರತದ ಶೇ 90ರಷ್ಟು ಜನಸಂಖ್ಯೆಯನ್ನು ರಿಲಯನ್ಸ್ ತಲುಪಲಿದೆ.
* ದೀಪಾವಳಿ ಸೇರಿದಂತೆ ಎಲ್ಲಾ ಹಬ್ಬಗಳಂದು ಎಸ್ಎಂಎಸ್ ಗೆ ಹೆಚ್ಚಿನ ದರ ವಿಧಿಸುವುದಿಲ್ಲ.
ಎಜಿಎಂನಲ್ಲಿ ಮುಖೇಶ್ ಅಂಬಾನಿ ಭಾಷಣದ ಸಂಪೂರ್ಣ ಪ್ರತಿ ಡೌನ್ ಲೋಡ್ ಮಾಡಿಕೊಳ್ಳಿ

* ಮುಂದಿನ ಸೋಮವಾರದಿಂದ ರಿಲಯನ್ಸ್ ಜಿಯೋ ಆಫರ್ ಹೊಂದಿರುವ ಗ್ರಾಹಕರು ಡಿಸೆಂಬರ್ 31ರ ತನಕ ಯಾವುದೇ ಚಾರ್ಜ್ ಕಟ್ಟದೆ ಸೇವೆ ಬಳಕೆ ಮಾಡಬಹುದು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The Mukesh Ambani-led Reliance Industries is all set to official launch their mobile network, Jio, on Thursday.
Please Wait while comments are loading...