ಜಿಯೋದಿಂದ 38 ಸಾವಿರ ಕಾಲೇಜುಗಳಿಗೆ ವೈ ಫೈ?

Posted By:
Subscribe to Oneindia Kannada

ಮುಂಬೈ, ಜುಲೈ 24: ಉಚಿತ ಜಿಯೋ ಫೋನ್‌ ಘೋಷಿಸಿದ ಬಳಿಕ ರಿಲಯನ್ಸ್ ಸಂಸ್ಥೆ, ಈಗ ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ವೈ-ಫೈ ನೀಡಲು ಮುಂದಾಗಿದೆ. ಈ ಸಂಬಂಧ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯಕ್ಕೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ.

ಒಂದು ವೇಳೆ ರಿಲಯನ್ಸ್ ನ ಯೋಜನೆಗೆ ಸರ್ಕಾರ ಸಮ್ಮತಿಸಿದರೆ ದೇಶಾದ್ಯಂತ 38 ಸಾವಿರ ಕಾಲೇಜುಗಳ 3 ಕೋಟಿ ವಿದ್ಯಾರ್ಥಿಗಳಿಗೆ ಉಚಿತವಾಗಿ ವೈ-ಫೈ ಸಿಗಲಿದೆ.

Reliance Jio wants to connect 38,000 colleges with Free Wi-Fi

ಮಾನವ ಸಂಪನ್ಮೂಲ ಸಚಿವಾಲಯ ಕೇಂದ್ರಿಯ ವಿವಿಗಳಿಗೆ ಉಚಿತ ವೈಫೈ ನೀಡಲು ಪ್ರಸ್ತಾವನೆ ಸಲ್ಲಿಸಿದ್ದು ಈ ಯೋಜನೆ ಈ ವರ್ಷವೇ ಪೂರ್ಣವಾಗುವ ಸಾಧ್ಯತೆಯಿದೆ. ಸಚಿವ ಪ್ರಕಾಶ್ ಜಾವ್ಡೇಕರ್ ಕೆಲ ದಿನಗಳ ಹಿಂದೆ ಆಗಸ್ಟ್ 31ರ ಒಳಗಡೆ ದೇಶದ 38 ವಿವಿಗಳಿಗೆ ವೈಫೈ ಸೌಲಭ್ಯವನ್ನು ಕಲ್ಪಿಸಲಾಗುವುದು ಎಂದು ತಿಳಿಸಿದ್ದರು.

ಆದರೆ ಬೇರೆ ಕಂಪೆನಿಗಳಿಗೆ ಅವಕಾಶ ನೀಡದೇ, ಟೆಂಡರ್ ಕರೆಯದೆ ಪ್ರಸ್ತಾವಿತ ಯೋಜನೆಯ ಹೊಣೆಯನ್ನು ರಿಲಯನ್ಸ್ ಗೆ ನೀಡಲು ಸಾಧ್ಯವಿಲ್, ಪಾರದರ್ಶಕವಾಗಿ ಟೆಂಡರ್ ಕರೆಯಲಾಗುವುದು ಎಂದು ಸರ್ಕಾರದ ಮೂಲಗಳು ಹೇಳಿವೆ.

20 Million Reliance Jio Data Have Been Leaked | Oneindia Kannada

ಈ ಯೋಜನೆ ಜಾರಿಗೊಂಡರೆ ಆರಂಭದಲ್ಲಿ ದೆಹಲಿ ವಿಶ್ವವಿದ್ಯಾಲಯ, ಬನಾರಸ್ ನ ಹಿಂದೂ ವಿಶ್ವವಿದ್ಯಾಲಯ, ಆಲಿಗಢದ ಮುಸ್ಲಿಂ ವಿಶ್ವವಿದ್ಯಾಲಯ, ಜಮಿಯಾ ಮಿಲಿಯಾ ಇಸ್ಲಾಮಿಯಾ ವಿವಿ, ಹಿಮಾಚಲ ಪ್ರದೇಶ, ಬಿಹಾರ ಹಾಗೂ ಜಮ್ಮುವಿನಲ್ಲಿರುವ ಕೇಂದ್ರಿಯ ವಿವಿಗಳಿಗೆ ಸೌಲಭ್ಯ ಸಿಗಲಿದೆ ಎಂಬ ಸುದ್ದಿಯಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
According to reports Reliance Jio wants to connect over 38,000 colleges in the country with its Wi-Fi services. For this, the telco has submitted a proposal, which is being considered by the Human Resource and Development (HRD) ministry.
Please Wait while comments are loading...