ಮೊಬೈಲ್ ವ್ಯಾಲೆಟ್ ಸೇವೆಗಾಗಿ ಜಿಯೋ - ಸೊಡೆಕ್ಸೋ ಹೊಂದಾಣಿಕೆ

Posted By:
Subscribe to Oneindia Kannada

ಬೆಂಗಳೂರು, ಏಪ್ರಿಲ್ 13: ಭಾರತದ ಡಿಜಿಟಲ್ ಪರಿವರ್ತನೆಯನ್ನು ಚುರುಕುಗೊಳಿಸುವ ಉದ್ದೇಶದಿಂದ ರಿಲಯನ್ಸ್ ಜಿಯೋ ಹಾಗೂ ಉದ್ಯೋಗಿ ಪ್ರಯೋಜನ ನಿರ್ವಹಣೆಯಲ್ಲಿನ ಮುಂಚೂಣಿ ಸಂಸ್ಥೆ ಸೊಡೆಕ್ಸೋ ಒಂದು ಹೊಸ ಸಹಭಾಗಿತ್ವವನ್ನು ಸಾಧಿಸಿವೆ.

ತಮ್ಮ ಪೂರಕ ಸಾಮರ್ಥ್ಯ ಹಾಗೂ ಸೇವೆಗಳನ್ನು ಪರಿಣಾಮಕಾರಿಯಾಗಿ ಬಳಸಲಿರುವ ಜಿಯೋ ಮತ್ತು ಸೊಡೆಕ್ಸೋ ಭಾರತೀಯರಿಗಾಗಿ ಉತ್ಕೃಷ್ಟ ಡಿಜಿಟಲ್ ಜೀವನಶೈಲಿಯನ್ನು ರೂಪಿಸಲಿವೆ.

ಜಿಯೋದಿಂದ ಭಾರತದ ಜಿಡಿಪಿಯಲ್ಲಿ ಶೇಕಡಾ 5.65ರಷ್ಟು ಏರಿಕೆ

ಜಿಯೋ ಪೇಮೆಂಟ್ಸ್ ಬ್ಯಾಂಕ್ ನಿರ್ವಹಿಸುತ್ತಿರುವ ಪೂರ್ವಪಾವತಿ (ಪ್ರೀಪೇಯ್ಡ್ ಪೇಮೆಂಟ್ ಇನ್ಸ್‌ಟ್ರುಮೆಂಟ್, ಪಿಪಿಐ) ವ್ಯಾಲೆಟ್ ಆದ ಜಿಯೋಮನಿ ಜೊತೆಗೆ ಸೊಡೆಕ್ಸೋ ಮೀಲ್ ಕಾರ್ಡ್‌ಗಳನ್ನು ಸಂಯೋಜಿಸುವುದು ಈ ಸಹಭಾಗಿತ್ವದಿಂದಾಗಿ ಸಾಧ್ಯವಾಗಲಿದೆ.

Reliance Jio, Sodexo come together for mobile wallet services

ಇದರಿಂದಾಗಿ ದೇಶಾದ್ಯಂತ ಸೊಡೆಕ್ಸೋ ಜಾಲದ ಭಾಗವಾಗಿರುವ ಸಾವಿರಾರು ದಿನಸಿ ಅಂಗಡಿಗಳು, ರೆಸ್ಟೋರೆಂಟ್ ಹಾಗೂ ಕೆಫೆ‌ಗಳಂತಹ ಸ್ಥಳಗಳಲ್ಲಿ ಸೊಡೆಕ್ಸೋ ಮೂಲಕ ಡಿಜಿಟಲ್ ಪಾವತಿ ಮಾಡಬಹುದಾಗಿದೆ.

ಕ್ಷಿಪ್ರ ಹಣಪಾವತಿ ಸಾಧ್ಯವಾಗಿಸುವ ದೃಷ್ಟಿಯಿಂದ ಸೊಡೆಕ್ಸೋ ಮೀಲ್ ಪಾಸ್ ಅನ್ನು ಜಿಯೋಮನಿ ಖಾತೆಗೆ ಸಂಯೋಜಿಸುವುದು ಇದೀಗ ಸಾಧ್ಯವಾಗಿದೆ. ಕ್ಷಿಪ್ರವಾಗಿ ಬೆಳೆಯುತ್ತಿರುವ ಜಿಯೋಮನಿ ಗ್ರಾಹಕ ಸಮೂಹಕ್ಕೆ ಈಗಾಗಲೇ ಲಭ್ಯವಿರುವ ಹಲವು ಸಾಧ್ಯತೆಗಳ ಸಾಲಿಗೆ ಇದೊಂದು ಹೊಸ ಸೇರ್ಪಡೆಯಾಗಲಿದೆ.

ಜಿಯೋ ಈಗ ಭಾರತದಲ್ಲಿ ನಂ.1, ವಿಶ್ವದ ನಂ 17

ಆಹಾರ ಮತ್ತು ಆಲ್ಕೋಹಾಲ್‌-ರಹಿತ ಪಾನೀಯಗಳ ಖರೀದಿಗೆ ಸೊಡೆಕ್ಸೋ ಕಾರ್ಡನ್ನು ಕೊಂಡೊಯ್ಯಲೇಬೇಕಾದ ಅನಿವಾರ್ಯ ಈ ಮೂಲಕ ನಿವಾರಣೆಯಾಗಲಿದೆ. ಗ್ರಾಹಕರು ತಮ್ಮ ಸೊಡೆಕ್ಸೋ ಖಾತೆಯಲ್ಲಿರುವ ಹಣವನ್ನು ಜಿಯೋಮನಿ ಆಪ್‌ಗೆ ಸೇರಿಸಿಕೊಂಡು ತಮ್ಮ ಖರೀದಿಗಳಿಗೆ ಕ್ಷಿಪ್ರ ಹಣಪಾವತಿ ಮಾಡಬಹುದು.

ತಮ್ಮ ಸೇವೆಗಳನ್ನು ಹೆಚ್ಚು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಜಿಯೋ ಹಾಗೂ ಸೊಡೆಕ್ಸೋ ಎರಡೂ ಸಂಸ್ಥೆಗಳು ಕೆಲಸ ಮುಂದುವರೆಸಲಿವೆ.

ಈ ಸಹಭಾಗಿತ್ವದ ಕುರಿತು ಮಾತನಾಡಿದ ಜಿಯೋಮನಿ ಬಿಸಿನೆಸ್ ಮುಖ್ಯಸ್ಥ ಅನಿರ್ಬನ್ ಎಸ್ ಮುಖರ್ಜಿ "ಬೆಳೆಯುತ್ತಿರುವ ಡಿಜಿಟಲ್ ತಂತ್ರಜ್ಞಾನಗಳ ಪ್ರಯೋಜನವನ್ನು ಎಲ್ಲ ಭಾರತೀಯರಿಗೂ ತಲುಪಿಸುವ, ಡಿಜಿಟಲ್ ಜೀವನಶೈಲಿಯನ್ನು ಸಂಪೂರ್ಣವಾಗಿ ಅನುಭವಿಸಲು ಅವರಿಗೆ ನೆರವಾಗುವ ಜಿಯೋ ಪ್ರಯತ್ನವನ್ನು ಈ ಸಹಭಾಗಿತ್ವ ಇನ್ನಷ್ಟು ಮುನ್ನಡೆಸಲಿದೆ" ಎಂದು ಹೇಳಿದರು.

"ಈ ಸಹಭಾಗಿತ್ವದ ಮೂಲಕ ಜಿಯೋಮನಿ ಹಾಗೂ ಸೊಡೆಕ್ಸೋ ಗ್ರಾಹಕರೆಲ್ಲರಿಗೂ ಹೊಸ ಅನುಕೂಲಕರ ಆಯ್ಕೆಗಳು ದೊರಕುವಂತಾಗಿದೆ. ಮುಂದಿನ ದಿನಗಳಲ್ಲಿ ಎರಡೂ ಸಂಸ್ಥೆಗಳು ಪರಸ್ಪರರ ಸಾಮರ್ಥ್ಯಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಭಾರತದ ಉದಯೋನ್ಮುಖ ಡಿಜಿಟಲ್ ಪರಿಸರದಲ್ಲಿ ತಮ್ಮ ವ್ಯಾಪ್ತಿ ಹಾಗೂ ಉಪಸ್ಥಿತಿಯನ್ನು ಹೆಚ್ಚಿಸಿಕೊಳ್ಳಲಿವೆ" ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಸೊಡೆಕ್ಸೋ ಬೆನಿಫಿಟ್ಸ್ ಆಂಡ್ ರಿವಾರ್ಡ್ಸ್ ಸರ್ವಿಸಸ್ ಇಂಡಿಯಾ ಸಂಸ್ಥೆಯ ಸಿಇಓ ಸ್ಟೆಫಾನ್ ಮಿಶೆಲಿನ್ ಮಾತನಾಡಿ, ತಮ್ಮ ಜಾಲದಲ್ಲಿ ಸೊಡೆಕ್ಸೋ ಮೀಲ್ ಕಾರ್ಡ್ ಬಳಸಲು ಹೊಸ ಮಾರ್ಗಗಳನ್ನು ಪರಿಚಯಿಸುವ ಮೂಲಕ ಗ್ರಾಹಕರ ಅನುಭವವನ್ನು ಉತ್ತಮಪಡಿಸಲು ತಮ್ಮ ಸಂಸ್ಥೆ ನಿರಂತರವಾಗಿ ಶ್ರಮಿಸುತ್ತಿದೆ ಎಂದು ಹೇಳಿದರು.

"ಪ್ರತಿನಿತ್ಯ ನಮ್ಮ ಸೇವೆಗಳನ್ನು ಬಳಸುವ ಮೂರು ಮಿಲಿಯನ್ ಗ್ರಾಹಕರ ರೀಟೇಲ್ ಅನುಭವವನ್ನು ಉತ್ತಮಪಡಿಸುವುದು ನಮ್ಮ ಗುರಿ. ಜಿಯೋಮನಿಯ ಎಂಪಿಓಎಸ್ ವ್ಯವಸ್ಥೆ ಮೂಲಕ ಆಹಾರ ಹಾಗೂ ಆಹಾರೇತರ ಖರೀದಿಗಳನ್ನು ಸಣ್ಣಪ್ರಮಾಣದ ವರ್ತಕರಲ್ಲೂ ಪ್ರತ್ಯೇಕಿಸುವುದು ಈ ಸಹಭಾಗಿತ್ವದಿಂದಾಗಿ ಸಾಧ್ಯವಾಗಲಿದ್ದು ಇದು ಮಾರುಕಟ್ಟೆಯಲ್ಲಿ ಸೊಡೆಕ್ಸೋ ಸಂಸ್ಥೆಯ ಸ್ಥಾನವನ್ನು ಇನ್ನಷ್ಟು ಉತ್ತಮಪಡಿಸಲಿದೆ" ಎಂದು ಅವರು ಹೇಳಿದರು.

ಈ ವ್ಯವಸ್ಥೆಯನ್ನು ಮುಂಬಯಿಯಲ್ಲಿ ಈಗಾಗಲೇ ಪರಿಚಯಿಸಲಾಗಿದ್ದು ಗ್ರಾಹಕರ ಅತ್ಯುತ್ತಮ ಪ್ರತಿಕ್ರಿಯೆ ದೊರೆತಿದೆ. ದೇಶಾದ್ಯಂತ ಸೊಡೆಕ್ಸೋ ಸ್ವೀಕರಿಸುವ ಎಲ್ಲ ವರ್ತಕರಲ್ಲೂ ಜಿಯೋಮನಿ ವ್ಯವಸ್ಥೆಯನ್ನು ಸದ್ಯದಲ್ಲೇ ಪರಿಚಯಿಸಲಾಗುವುದು. ತಮ್ಮತಮ್ಮ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿರುವ ಜಿಯೋಮನಿ ಹಾಗೂ ಸೊಡೆಕ್ಸೋ ನಡುವಿನ ಈ ಸಹಭಾಗಿತ್ವ ದೇಶದ ಪಾವತಿ ವ್ಯವಸ್ಥೆಯಲ್ಲಿ ಗಮನಾರ್ಹ ಬದಲಾವಣೆ ತರಲಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Telecom major Reliance Jio and employee benefits provider Sodexo on Thursday announced a partnership in the mobile wallet segment. According to the telecom major, the partnership between JioMoney and Sodexo will enable digital transactions across retail point of sales like grocery stores, restaurants and cafeterias.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ