ಕಡಿಮೆ ವೆಚ್ಚದ ಜಿಯೋ ರೀಚಾರ್ಜ್ ಯೋಜನೆಗಳು

Written By:
Subscribe to Oneindia Kannada

ಬೆಂಗಳೂರು, ಫೆಬ್ರವರಿ 09: ರಿಲಯನ್ಸ್ ಜಿಯೋ ಹಾಗೂ ಭಾರ್ತಿ ಏರ್ ಟೆಲ್ ಸಂಸ್ಥೆಗಳ ನಡುವೆ ಕಡಿಮೆ ಬೆಲೆಯ ಪ್ರೀಪೇಯ್ಡ್ ಯೋಜನೆಗಳ ಪೈಪೋಟಿ ನಡೆದಿದೆ. ಗ್ರಾಹಕರಿಗೆ ಹೊಸ ಹೊಸ ಕೊಡುಗೆಗಳ ಪೈಕಿ ಯಾವುದನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬ ಗೊಂದಲ ಸಹಜ ಮೂಡುತ್ತದೆ.

ರಿಲಾಯನ್ಸ್ ಜಿಯೋ ತನ್ನ ಪ್ರಿಪೇಯ್ಡ್ ಗ್ರಾಹಕರಿಗೆ ಎರಡು ಹೊಸ ಯೋಜನೆಗಳನ್ನು ಪರಿಷ್ಕರಿಸಿದೆ. ಈಗ ರಿಲಯನ್ಸ್ ಜಿಯೋ 19 ರು ಕಡಿಮೆ ಬೆಲೆಯ ರೀಚಾರ್ಜ್ ನಿಂದ 9,999 ರು ತನಕ ರೀಚಾರ್ಜ್ ತನಕ ರೇಂಜ್ ಹೊಂದಿದೆ. ವಿವಿಧ ಶ್ರೇಣಿಯಲ್ಲಿ ರೀಚಾರ್ಜ್ ಹೊಂದಿದೆ. 19 ರು, 49ರು, 52 ರು, 98 ರು, 99 ರು ರೀಚಾರ್ಜ್ ಯೋಜನೆಗಳಿವೆ.

ಕಡಿಮೆ ಬೆಲೆಯ ರೀಚಾರ್ಜ್ ಮಾಡಲು ಗ್ರಾಹಕರು ಈಗ ಹೆಚ್ಚೆಚ್ಚು ಬಯಸುತ್ತಿದ್ದು, 100 ರುಪಾಯಿಯೊಳಗೆ ಯಾವೆಲ್ಲ ರೀಚಾರ್ಜ್ ಗಳಿವೆ, ಅವುಗಳಿಂದ ಸಿಗುವ ಸೌಲಭ್ಯಗಳೇನು ಎಂಬುದನ್ನು ಮುಂದೆ ಓದಿ....

19ರು ರೀ ಚಾರ್ಜ್ ಯೋಜನೆ

19ರು ರೀ ಚಾರ್ಜ್ ಯೋಜನೆ

19 ರು ರೀ ಚಾರ್ಜ್ ನಲ್ಲೂ ಡೇಟಾ ಪ್ಯಾಕ್ ನೀಡಲಾಗುತ್ತೆ. 0.15ಜಿಬಿಯಷ್ಟು 4ಜಿ ಹೈ ಸ್ಪೀಡ್ ಡೇಟಾ ಪ್ರತಿದಿನಕ್ಕೆ ಸಿಗಲಿದೆ. ನಂತರ ಇಂಟರ್ನೆಟ್ ವೇಗ 64ಕೆಬಿಪಿಎಸ್ ಗೆ ಇಳಿಯಲಿದೆ. ಉಚಿತವಾಗಿ ಅನಿಯಮಿತ ಲೋಕಲ್, ಎಸ್ಟಿಡಿ ಹಾಗೂ ರೋಮಿಂಗ್ ವಾಯ್ಸ್ ಕಾಲ್ ಕೂಡಾ ಲಭ್ಯವಿದೆ. 20 ಉಚಿತ ಎಸ್ಎಂಎಸ್ ಜತೆಗೆ ಜಿಯೋ ಆಪ್ ಗಳು ಲಭ್ಯವಿದೆ. ವ್ಯಾಲಿಡಿಟಿ 1 ದಿನ ಮಾತ್ರ.

52 ರು ಯೋಜನೆ- ಪ್ರೀಪೇಯ್ಡ್

52 ರು ಯೋಜನೆ- ಪ್ರೀಪೇಯ್ಡ್

52 ರು ಯೋಜನೆಯಲ್ಲಿ 1.05ಜಿಬಿಯಲ್ಲಿ 4ಜಿ ಹೈಸ್ಪೀಡ್ ಡೇಟಾ 7 ದಿನಗಳ ತನಕ ಸಿಗಲಿದೆ. ಪ್ರತಿದಿನದ ಡೇಟಾ ಮಿತಿ ಇಲ್ಲ. ನಂತರ 64ಕೆಬಿಪಿಎಸ್ ಗೆ ಇಳಿಯಲಿದೆ.

ಉಚಿತ ಹಾಗೂ ಅನಿಯಮಿತ ಸ್ಥಳೀಯ, ಎಸ್ಟಿಡಿ, ರೋಮಿಂಗ್ ವಾಯ್ಸ್ ಕಾಲ್ ಲಭ್ಯವಿದೆ. 70 ಉಚಿತ ಎಸ್ಎಂಎಸ್ ಲಭ್ಯವಿದ್ದು, ಜಿಯೋ ಆಪ್ ಗಳು ಲಭ್ಯವಿದೆ.

49 ರೂಪಾಯಿ ಪ್ಲಾನ್

49 ರೂಪಾಯಿ ಪ್ಲಾನ್

49 ರೂಪಾಯಿ ಪ್ಲಾನ್ ನಲ್ಲಿ ಗ್ರಾಹಕರಿಗೆ 1ಜಿಬಿ ಡೇಟಾ ಸಿಗಲಿದೆ. ಈ ಡೇಟಾ 4ಜಿ ಸ್ಪೀಡ್ ನಲ್ಲಿ ಸಿಗಲಿದ್ದು, ಇದು 28 ದಿನಗಳ ವ್ಯಾಲಿಡಿಟಿ ಹೊಂದಿದೆ. ಉಚಿತ ಹಾಗೂ ಅನಿಯಮಿತ ಸ್ಥಳೀಯ ಹಾಗೂ ಎಸ್ಟಿಡಿ ಕರೆಗಳು ಲಭ್ಯವಾಗಲಿವೆ. ಜಿಯೋ ಆಪ್ ಗಳು ಲಭ್ಯವಿದೆ.

ಜಿಯೋ ರೀಚಾರ್ಜ್ ಯೋಜನೆಗಳು

ಜಿಯೋ ರೀಚಾರ್ಜ್ ಯೋಜನೆಗಳು

98 ರು ಯೋಜನೆಯಲ್ಲಿ 2ಜಿಬಿಯಲ್ಲಿ 4ಜಿ ಹೈಸ್ಪೀಡ್ ಡೇಟಾ 28 ದಿನಗಳ ತನಕ ಸಿಗಲಿದೆ. ಪ್ರತಿದಿನದ ಡೇಟಾ ಮಿತಿ ಇಲ್ಲ. ನಂತರ 64ಕೆಬಿಪಿಎಸ್ ಗೆ ಇಳಿಯಲಿದೆ.

ಉಚಿತ ಹಾಗೂ ಅನಿಯಮಿತ ಸ್ಥಳೀಯ, ಎಸ್ಟಿಡಿ, ರೋಮಿಂಗ್ ವಾಯ್ಸ್ ಕಾಲ್ ಲಭ್ಯವಿದೆ. 300 ಉಚಿತ ಎಸ್ಎಂಎಸ್ ಲಭ್ಯವಿದ್ದು, ಜಿಯೋ ಆಪ್ ಗಳು ಲಭ್ಯವಿದೆ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Reliance jio is introducing new plans and revising its existing prepaid plans in order to offer more benefits to users at lower prices. Here are Jio's prepaid recharge plans under Rs 100.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ