ರಿಲಯನ್ಸ್ ಜಿಯೋ ಎಫೆಕ್ಟ್: ಏರ್ ಟೆಲ್ ಇಂಟರ್ನೆಟ್ ದರ ಕಡಿತ

Posted By:
Subscribe to Oneindia Kannada

ಬೆಂಗಳೂರು, ಆಗಸ್ಟ್ 30: ರಿಲಯನ್ಸ್ ಜಿಯೋ ಸಿಮ್ ಕಾರ್ಡ್, ಉಚಿತ ಇಂಟರ್ನೆಟ್ ಆಫರ್ ಗಳು ಟೆಲಿಕಾಂ ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸುತ್ತಿವೆ. ಇದರಿಂದ ಮತ್ೊಮ್ಮೆ ಇಂಟರ್ನೆಟ್ ದರ ಸಮರ ಆರಂಭವಾಗಿದ್ದು, ಭಾರ್ತಿ ಏರ್ ಟೆಲ್ ತನ್ನ ಇಂಟರ್ನೆಟ್ ಪ್ಯಾಕೇಜ್ ಮೇಲೆ ಕಡಿತ ಘೋಷಿಸಿದೆ.

ಭಾರತದ ಅತ್ಯಂತ ಜನಪ್ರಿಯ ಹಾಗೂ ಅತಿದೊಡ್ಡ ಟೆಲಿಕಾಂ ಸಂಸ್ಥೆ ಭಾರ್ತಿ ಏರ್ ಟೆಲ್ ತನ್ನ ಗ್ರಾಹಕರಿಗೆ ಹೊಸ ಇಂಟರ್ನೆಟ್ ಪ್ಯಾಕೇಜ್ ಘೋಷಿಸಿದೆ.[ಏರ್ ಟೆಲ್ ನಿಂದ ಹೊಸ ಆಫರ್ : ಉಚಿತ ವಾಯ್ಸ್ ಕಾಲ್ ಇನ್ನು ಸುಲಭ!]

Reliance Jio effect: Airtel launches new Mega Saver Pack Data offer

'ಮೇಗಾ ಸೇವರ್ ಪ್ಯಾಕ್' ಬಳಕೆ ಮಾಡಿಕೊಂಡು 3 ಜಿ ಅಥವಾ 4 ಜಿ ಪ್ಲಾನ್ ನಲ್ಲಿ 1 ಜಿಬಿ ಡಾಟಾ ಕೇವಲ 51 ರೂಪಾಯಿಗೆ ಪಡೆಯಬಹುದಾಗಿದೆ. ಈ ಮೊದಲು 1 ಜಿಬಿ ಡಾಟಾ ಪಡೆಯಲು 259 ರೂಪಾಯಿ ತೆರಬೇಕಾಗಿತ್ತು.

ಒಂದು ವರ್ಷದ ಅವಧಿಗೆ ಪ್ಲಾನ್ ಪಡೆದುಕೊಳ್ಳಬೇಕಾದರೆ 1,498 ರೂಪಾಯಿ ನೀಡಿದರೆ ಸಾಕು. ಪ್ರೀಪೇಯ್ಡ್ ಬಳಕೆದಾರರಿಗೆ ಮಾತ್ರ ಈ ಅವಕಾಶ ಘೋಷಿಸಲಾಗಿದೆ. ಇನ್ನು 7
48 ರೂಪಾಯಿಗೆ 6 ತಿಂಗಳ ಅವಧಿಗೆ ಇಂಟರ್ನೆಟ್ ಪ್ಯಾಕ್ ಕೂಡ ಲಭ್ಯವಿದೆ. ಇದನ್ನು 99 ರು ಪಾವತಿಸಿ ಪಡೆಯಬಹುದಾಗಿದೆ.[ಜಿಯೋ ಪ್ರಿವ್ಯೂ ಆಫರ್ ಮೈಕ್ರೋಮ್ಯಾಕ್ಸ್ ನಲ್ಲೂ ಲಭ್ಯ!]

ಇಷ್ಟೇ ಅಲ್ಲದೆ ಈ ಪ್ಯಾಕೇಜ್ ಅವಧಿಯಲ್ಲೇ ಎಷ್ಟು ಬಾರಿಯಾದರೂ ರೀಚಾರ್ಜ್ ಮಾಡಿಸಿಕೊಳ್ಳಬಹುದು. ಸದ್ಯಕ್ಕೆ ಪ್ರೀಪೇಯ್ಡ್ ಪ್ಯಾಕೇಜಿಗೆ ದೆಹಲಿಯಲ್ಲಿ ಚಾಲನೆ ಸಿಕ್ಕಿದೆ. ಇತರೆ ನಗರಗಳಿಗೆ ಆಗಸ್ಟ್ 31, 2016ರಿಂದ ಲಭ್ಯವಿರಲಿದೆ. ಹೆಚ್ಚಿನ ಮಾಹಿತಿಗೆ ಏರ್ ಟೆಲ್ ಪ್ರೀಪೇಯ್ಡ್ ವೆಬ್ ತಾಣಕ್ಕೆ [ಭೇಟಿ ಕೊಡಿ]

ರಿಲಯನ್ಸ್ ಜಿಯೋ ಪ್ರೀವ್ಯೂ ಆಫರ್ ನಲ್ಲಿ ಎಚ್ ಡಿ ವಾಯ್ಸ್ ಕಾಲಿಂಗ್, 9,000ಕ್ಕೂ ಅಧಿಕ ಎಸ್ ಎಂಎಸ್ ಉಚಿತ ಸೇವೆ, ಹೈಸ್ಪೀಡ್ ಇಂಟರ್ನೆಟ್ ಎಲ್ಲವನ್ನು ಉಚಿತವಾಗಿ 90ದಿನಗಳ ಮಟ್ಟಿಗೆ ನೀಡುತ್ತಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Airtel, launched a new data bundle offer dubbed as the 'Mega Saver Pack' in India on Monday. Airtel's new data comes in two plans— one, Rs. 1498 pack, which offers 1GB 4G/3G data upfront with a validity of 28 days.
Please Wait while comments are loading...