ರಿಲಯನ್ಸ್ ಜ್ಯುವೆಲ್ಸ್ ನಿಂದ ವರಮಹಾಲಕ್ಷ್ಮಿ ಹಬ್ಬಕ್ಕೆ ಭರ್ಜರಿ ಕೊಡುಗೆ
ಬೆಂಗಳೂರು, ಆಗಸ್ಟ್ 06: ರಿಲಯನ್ಸ್ ಜುವೆಲ್ಸ್ ತನ್ನ 11ನೇ ವಾರ್ಷಿಕೋತ್ಸವವನ್ನು
'ಆಭರ್'' ಸಂಗ್ರಹದ ಬಿಡುಗಡೆಯೊಂದಿಗೆ ಆಚರಿಸುತ್ತಿದೆ.
ವಿನ್ಯಾಸದಲ್ಲಿ ಭಿನ್ನತೆ ಮತ್ತು ಪರಿಕಲ್ಪನೆಗಳಲ್ಲಿ ನಾವೀನ್ಯತೆಯೊಂದಿಗಿನ, ರಿಲಯನ್ಸ್ ಜುವೆಲ್ಸ್, ಭಾರತದ ಅತ್ಯಂತ ವಿಶ್ವಾಸಾರ್ಹ ಜುವೆಲ್ಲರಿ ಬ್ರಾಡ್‍ಗಳಲ್ಲೊಂದಾಗಿದೆ.
ಕಳೆದ 11 ವರ್ಷಗಳಿಂದ ತಮ್ಮ ಅಭಿಮಾನ ಹಾಗೂ ಪ್ರೀತಿಯನ್ನು ತೋರಿಸುತ್ತಿರುವವರಿಗೆ ಕೃತಜ್ಞತಾಪೂರ್ವಕವಾಗಿ, ಈ ಬ್ರಾಂಡ್ ಆಕರ್ಷಕ ವಿನ್ಯಾಸದ ಜುವೆಲ್ಲರಿ ಸಂಗ್ರಹ -'ಆಭರ್' ಅನ್ನು ಬಿಡುಗಡೆಗೊಳಿಸಿದೆ.
ಈ ಆಭರ್ ಸಂಗ್ರಹವು ಪ್ರಕೃತಿಯ ವೈವಿಧ್ಯತೆಗಳಾದ ಸುಂದರ ಸೂರ್ಯೋದಯ ಮತ್ತು ಸೂರ್ಯಾಸ್ತ, ಮರಗಳು ಮತ್ತು ಹೂಗಳಿಂದ ಸ್ಫೂರ್ತಿಗೊಂಡಿದೆ. ಈ ಆಕರ್ಷಕ ಸಂಗ್ರಹವನ್ನು ನಮ್ಮ ಕೌಶಲ್ಯಭರಿತ ಕುಸುರಿಗಾರರು ವಿನ್ಯಾಸಗೊಳಿಸಿದ್ದಾರೆ.
ಚಿನ್ನ ಮತ್ತು ವಜ್ರದ ಪೆಡೆಂಟ್ ಸೆಟ್‍ಗಳು ಮತ್ತು ಕಿವಿಯೋಲೆಗಳ ಅದ್ಭುತವಾದ ವಿನ್ಯಾಸಗಳನ್ನು ನಿಮ್ಮ ವಿಶೇಷದ ಹಾಗೂ ನಿತ್ಯದ ಕ್ಷಣಗಳಿಗೆ ಚೈತನ್ಯ ತುಂಬುವಂತೆ ವಿನ್ಯಾಸಗೊಳಿಸಲಾಗಿದೆ. ಈ ಮೋಹಕ ಮಾಸ್ಟರ್‍ಪೀಸ್‍ಗಳು ದೇಶಾದ್ಯಂತದ ಎಲ್ಲಾ ರಿಲಯನ್ಸ್ ಜುವೆಲ್ಸ್ ಫ್ಲಾಗ್‍ಶಿಪ್ ಶೋರೂಂಗಳಲ್ಲಿ ಎಕ್ಸ್‍ಕ್ಲೂಸಿವ್ ಆಗಿ ವರಮಹಾಲಕ್ಷ್ಮಿ ಹಬ್ಬದ ಸಂದರ್ಭದಲ್ಲಿ ಲಭ್ಯ ಇರಲಿವೆ.

ಆಗಸ್ಟ್ 4 ರಿಂದ 26ರ ತನಕ ವಾರ್ಷಿಕೋತ್ಸವ ಆಫರ್
ರಿಲಯನ್ಸ್ ಜ್ಯುವೆಲ್ಸ್ ತನ್ನ 11ನೇ ವಾರ್ಷಿಕೋತ್ಸವವನ್ನು ಸ್ಮರಣೀಯಗೊಳಿಸಲು ಹಾಗೂ ಬರುತ್ತಿರುವ ವರಲಕ್ಷ್ಮಿಹಬ್ಬಕ್ಕಾಗಿ 4ನೇ ಆಗಸ್ಟ್ ನಿಂದ 26ರ ತನಕ ವಿಶೇಷ ವಾರ್ಷಿಕೋತ್ಸವ ಆಫರ್ ಅನ್ನುಘೋಷಿಸಿದೆ. ಇದು ಚಿನ್ನದ ಆಭರಣಗಳ ಮೇಕಿಂಗ್‍ನಲ್ಲಿ ಶೇ.40ರಷ್ಟುಕಡಿತ, ವಜ್ರದ ಮೌಲ್ಯದ ಮೇಲೆ ಶೇ.35ರಷ್ಟು ಕಡಿತ ಮತ್ತು ಚಿನ್ನದ ನಾಣ್ಯಗಳ ಮೇಕಿಂಗ್‍ನಲ್ಲಿ ಶೇ.75ರಷ್ಟು ಕಡಿತವನ್ನು ಒಳಗೊಂಡಿರಲಿದೆ. (ಷರತ್ತು ಮತ್ತು ಕರಾರುಗಳು- ಡಿಸೈನರ್ ಕಲೆಕ್ಷನ್ ಮತ್ತು ಸಾಲಿಟೈರ್‍ಗಳ ಮೇಲೆ ಆಫರ್ ಮಾನ್ಯವಿಲ್ಲ)

ಕಳೆದ 11 ವರ್ಷಗಳ ಯಶಸ್ವಿ ಪಯಣ
ಈ ವಿಶೇಷ ಸಂದರ್ಭದ ವೇಳೆ ಮಾತನಾಡಿದ ಸುನಿಲ್ ನಾಯಕ್, ಸಿಇಒ, ರಿಲಯನ್ಸ್ ಜುವೆಲ್ಸ್, 'ಕಳೆದ 11 ವರ್ಷಗಳ ಪಯಣದಲ್ಲಿ ನಮಗೆ ಪ್ರೀತಿ ಹಾಗೂ ಅಭಿಮಾನ ತೋರಿಸಿದ ಎಲ್ಲಾ ಅಭಿಮಾನಿಗಳಿಗೆ ನಾವು ಆಭಾರಿಗಳಾಗಿದ್ದೇವೆ. ನಮ್ಮ ಕೃತಜ್ಞತೆಯ ಗುರುತಾಗಿ ನಮ್ಮ ಗ್ರಾಹಕರಿಗೆ ನಿರಂತರವಾಗಿ ಅತ್ಯುತ್ತಮವಾದದ್ದನ್ನು ನೀಡಲು ನಾವು ಬದ್ಧರಾಗಿದ್ದೇವೆ,'ಆಭರ್, ಯು ಟು ವಿದ್ ಗ್ರಾಟಿಟ್ಯೂಡ್' ಅನ್ನು ನಮ್ಮ 11 ವರ್ಷಗಳ ಪಯಣವನ್ನು ಬೆಂಬಲಿಸಿದವರಿಗೆ ಕೃತಜ್ಞತಾಪೂರ್ವಕವಾಗಿ ಅರ್ಪಿಸುತ್ತಿದ್ದೇವೆ'' ಎಂದು ಹೇಳಿದರು.

ರಿಲಯನ್ಸ್ ಜ್ಯುವೆಲ್ಸ್ ಬಗ್ಗೆ
ರಿಲಯನ್ಸ್ ಜ್ಯುವೆಲ್ಸ್ ನಲ್ಲಿ ಚಿನ್ನ ಮತ್ತು ವಜ್ರಗಳು ಅತ್ಯಂತ ಸ್ಪರ್ಧಾತ್ಮಕ ದರಗಳಲ್ಲಿ ಲಭ್ಯವಿದೆ. ಝೀರೋ-ವೇಸ್ಟೇಜ್ ಮತ್ತು ಸ್ಪರ್ಧಾತ್ಮಕ ತಯಾರಿಕಾ ವೆಚ್ಚವು ಗ್ರಾಹಕರಿಗೆ 100% ದಷ್ಟು ತೃಪ್ತಿ ನೀಡುತ್ತದೆ. 47 ನಗರಗಳಲ್ಲಿ 78 ಮಳಿಗೆಗಳನ್ನು ಹೊಂದಿರುವ, ರಿಲಯನ್ಸ್ ಜ್ಯುವೆಲ್ ಭಾರತದ ಅತಿದೊಡ್ಡ ಜ್ಯುವೆಲ್ಲರಿ ಭಾರೀ ವೇಗದಲ್ಲಿ ಬೆಳೆಯುತ್ತಿದೆ. ತನ್ನ ಸಂಗ್ರಹದಲ್ಲಿ ಮನಮೋಹಕ ವಿನ್ಯಾಸಗಳ ವೈವಿಧ್ಯತೆಯನ್ನು ಹೊಂದಿರುವ ರಿಲಯನ್ಸ್ ಜ್ಯುವೆಲ್ಸ್ ಪ್ರತಿಯೊಂದು ವ್ಯಕ್ತಿತ್ವ ಮತ್ತು ಪ್ರತಿಯೊಂದು ಸಂದರ್ಭಕ್ಕೂ ಸೂಕ್ತವಾದಂತಹ ಆಭರಣವಾಗಿವೆ.

100% ಬಿಐಎಸ್ ಹಾಲ್ ಮಾರ್ಕ್ ಇರುವ ಚಿನ್ನ
ರಿಲಯನ್ಸ್ ಜ್ಯುವೆಲ್ಸ್ 100% ಬಿಐಎಸ್ ಹಾಲ್ ಮಾರ್ಕ್ ಇರುವ ಚಿನ್ನವನ್ನಷ್ಟೇ ಮಾರಾಟ ಮಾಡುತ್ತದೆ. ಇಲ್ಲಿ ಬಳಸಲಾಗುವ ಪ್ರತಿಯೊಂದು ವಜ್ರವೂ ಕೂಡ ಸ್ವತಂತ್ರ ಸರ್ಟಿಫಿಕೇಷನ್ ಲ್ಯಾಬೊರೆಟರಿಯಿಂದ ಅಂತಾರಾಷ್ಟ್ರೀಯವಾಗಿ ಪ್ರಮಾಣೀಕರಿಸಿದ್ದಾಗಿದೆ. ನಮ್ಮ ಪ್ರತಿಯೊಂದು ಮಳಿಗೆಗಳಲ್ಲೂ ಕ್ಯಾರೆಟ್ ಮೀಟರ್‍ಗಳಿದ್ದು, ಗ್ರಾಹಕರು ಉಚಿತವಾಗಿ ತಮ್ಮ ಚಿನ್ನಾಭರಣಗಳ ಪರಿಶುದ್ಧತೆಯನ್ನು ಪರೀಕ್ಷಿಸಬಹುದಾಗಿದೆ.
ಗ್ರಾಹಕೀಕರಣ, ಆಭರಣ ಸ್ವಚ್ಛತೆ ಮತ್ತು ಪಾಲಿಶಿಂಗ್ ನಂಥ ಗ್ರಾಹಕ ಆದ್ಯತೆಯ ಸೇವೆಗಳ ಜೊತೆಗೆ ವ್ಯಾಪಕ ಶ್ರೇಣಿಯ ಆಯ್ಕೆಗಳು, ಕರಿಗಾರ್ ಕೊಠಡಿಗಳ ಲಭ್ಯತೆ ಮತ್ತು ಕ್ಯಾರೆಟ್ ಮೀಟರ್‍ಗಳು ಪ್ರತಿಯೊಂದು ರಿಲಯನ್ಸ್ ಜ್ಯುವೆಲ್ಸ್ ಮಳಿಗೆಯನ್ನೂ ಅತ್ಯುತ್ಕೃಷ್ಟ ಚಿನ್ನಾಭರಣಗಳ ಏಕೈಕ ಮಳಿಗೆಯನ್ನಾಗಿಸಿವೆ.
-
PUC Revaluation: ಸ್ಕ್ಯಾನ್ ಪ್ರತಿ ಪಡೆದವರ ಉತ್ತರ ಪತ್ರಿಕೆ ಮರುಮೌಲ್ಯಮಾಪನ; ಶುಲ್ಕ, ಪ್ರಮುಖ ದಿನಾಂಕಗಳು -
Gold Rings: ಅಕ್ಷಯ ತೃತೀಯಕ್ಕೆ ಖರೀದಿಸಬಹುದಾದ ಆಕರ್ಷಕ ವಿನ್ಯಾಸದ 5 ಚಿನ್ನದ ಉಂಗುರಗಳು -
Career Break: ಅಲಾರಂ ಇಲ್ಲದ ಜೀವನ ಬೇಕು ಎಂದು ಗೂಗಲ್ ಕೆಲಸ ಬಿಟ್ಟ ಯುವ ಟೆಕ್ಕಿ, ನೆಟ್ಟಿಗರ ಮೆಚ್ಚುಗೆ -
Bengaluru Mumbai Vande Bharat: ಬೆಂಗಳೂರು - ಮುಂಬೈ ಹೊಸ ರೈಲು: ಮಹಾ ಸಿಎಂ ಮಹತ್ವದ ಟ್ವೀಟ್, ಯಾವಾಗ ಪ್ರಾರಂಭ -
Gold Price Drop: ವಾರದ ಮೊದಲ ದಿನವೇ ಚಿನ್ನ-ಬೆಳ್ಳಿ ದರ ಭರ್ಜರಿ ಕುಸಿತ, ಇಂದಿನ ದರಪಟ್ಟಿ -
ಎರಡು ಬಾರಿ ಕೆಲಸ ಕಳೆದುಕೊಂಡ ಯುವಕನಿಂದ ರೆಸ್ಟೋರೆಂಟ್ ಬ್ಯುಸಿನೆಸ್: ಈಗ ತಿಂಗಳಿಗೆ 1.3 ಕೋಟಿ ರೂ. ಆದಾಯ -
School Holiday: ರಾಜ್ಯದಲ್ಲಿ 2026-27ನೇ ಸಾಲಿನ ಶೈಕ್ಷಣಿಕ ವೇಳಾಪಟ್ಟಿ ಪ್ರಕಟ: ದಸರಾ, ಬೇಸಿಗೆ ರಜೆ, ಕೆಲಸದ ದಿನಗಳ ವಿವರ -
E-Khata: ಜನ ಸೇವಕ ಯೋಜನೆ: ಮನೆಯಲ್ಲೇ ಕುಳಿತು ಇ - ಖಾತಾ ಪಡೆಯಿರಿ, ಈ 5 ದಾಖಲೆಗಳಿದ್ದರೆ ಸಾಕು -
ಬ್ರೋ.. ಒಂದು ವಿಕೆಟ್ ಕಿತ್ತರೂ ನನ್ನ ಫೋಟೋ ಹಾಕಿಲ್ಲ ಯಾಕೆ?; ಆರ್ಸಿಬಿ ಮೆಂಟರ್ ಡಿಕೆಗೆ ಕೃನಾಲ್ ಪಾಂಡ್ಯ ಪ್ರಶ್ನೆ -
ಮಂಡ್ಯದಲ್ಲಿ 500 ಎಕರೆ ಆಟೋ ಕೈಗಾರಿಕಾ ಹಬ್: ಎಂಬಿ ಪಾಟೀಲ, ಎಚ್ಡಿ ಕುಮಾರಸ್ವಾಮಿ ಮಹತ್ವದ ಚರ್ಚೆ -
Karnataka Rains: ರಾಜ್ಯಾದ್ಯಂತ ಏಪ್ರಿಲ್ 20ರ ತನಕ ಮಳೆ, 6 ಜಿಲ್ಲೆಗಳಿಗೆ ಉಷ್ಣ ಅಲೆ ಮುನ್ಸೂಚನೆ -
Prem: ಆಗ ಅಪ್ಪಾಜಿ-ಅಂಬರೀಷಣ್ಣ ಇದ್ರು, ಈಗ ಯಾರಿದ್ದಾರೆ; ಕೆಡಿ ವಿವಾದ ಆದಾಗಲೂ ಯಾರೂ ಸಪೋರ್ಟ್ಗೆ ಬರಲಿಲ್ಲ: ಪ್ರೇಮ್ ಬೇಸರ












Click it and Unblock the Notifications