ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿವ್ವಳ ಲಾಭ 13,233 ಕೋಟಿ, ರಿಲಯನ್ಸ್ ಇಂಡಸ್ಟ್ರೀಸ್ ಷೇರು ಶೇ. 2ರಷ್ಟು ಕುಸಿತ

|
Google Oneindia Kannada News

ನವದೆಹಲಿ, ಜುಲೈ 31: ಏಷ್ಯಾದ ಶ್ರೀಮಂತ ವ್ಯಕ್ತಿ ಮುಕೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಜೂನ್ ತ್ರೈಮಾಸಿಕದಲ್ಲಿ ನಿವ್ವಳ ಲಾಭವು ಶೇ. 31ರಷ್ಟು ಹೆಚ್ಚಳವಾಗಿ 13,233 ಕೋಟಿ ರೂ.ಗೆ ದಾಖಲಿಸಿದ ಒಂದು ದಿನದ ನಂತರ ರಿಲಯನ್ಸ್ ಇಂಡಸ್ಟ್ರೀಸ್ ಷೇರುಗಳು ಶುಕ್ರವಾರದ ಆರಂಭಿಕ ವಹಿವಾಟಿನಲ್ಲಿ ಶೇಕಡಾ 2ಕ್ಕಿಂತ ಹೆಚ್ಚು ಕುಸಿತ ಕಂಡಿವೆ.

ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (ಆರ್‌ಐಎಲ್) ಷೇರುಗಳು ಬಿಎಸ್‌ಇಯಲ್ಲಿ ಶೇ. 2ಕ್ಕಿಂತ ಹೆಚ್ಚು ಕುಸಿದು 2,053.30 ರೂಪಾಯಿಗೆ ತಲುಪಿತ್ತು. ರಿಲಯನ್ಸ್ ಇಂಡಸ್ಟ್ರೀಸ್ ಲಾಭ 7,457 ಕೋಟಿ ರೂ. ಎಂದು ವಿಶ್ಲೇಷಕರು ನಿರೀಕ್ಷಿಸಿದ್ದಾರೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್ ರಿಫಿನಿಟಿವ್ ಡೇಟಾವನ್ನು ಉಲ್ಲೇಖಿಸಿದೆ.

ರಿಲಯನ್ಸ್ ಇಂಡಸ್ಟ್ರೀಸ್ ತ್ರೈಮಾಸಿಕ ನಿವ್ವಳ ಲಾಭ ಶೇ. 31ರಷ್ಟು ಏರಿಕೆ: 13,233 ಕೋಟಿ ರೂಪಾಯಿರಿಲಯನ್ಸ್ ಇಂಡಸ್ಟ್ರೀಸ್ ತ್ರೈಮಾಸಿಕ ನಿವ್ವಳ ಲಾಭ ಶೇ. 31ರಷ್ಟು ಏರಿಕೆ: 13,233 ಕೋಟಿ ರೂಪಾಯಿ

ಕೋವಿಡ್-19 ತ್ರೈಮಾಸಿಕದಲ್ಲಿ ಸಮೂಹದ ಕಾರ್ಯಾಚರಣೆಗಳು ಮತ್ತು ಆದಾಯದ ಮೇಲೆ ಪರಿಣಾಮ ಬೀರಿದೆ ಎಂದು ರಿಲಯನ್ಸ್ ಇಂಡಸ್ಟ್ರೀಸ್ ತಿಳಿಸಿದೆ. ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಆದಾಯದಲ್ಲಿ ಶೇಕಡಾ 44 ರಷ್ಟು ಇಳಿಕೆಯಾಗಿ 91,238 ಕೋಟಿ ರೂ. ತಲುಪಿದೆ.

Reliance Industries Shares Fall Nearly 2%, After June Quarter Revenue Drops 44%

ತೈಲ ಸಂಸ್ಕರಣಾ ಕಂಪನಿಯ ಲಾಭದಾಯಕತೆಯ ಪ್ರಮುಖ ಅಳತೆಯಾದ ರಿಲಯನ್ಸ್ ಇಂಡಸ್ಟ್ರೀಸ್ ತನ್ನ ಒಟ್ಟು ಸಂಸ್ಕರಣಾ ಅಂಚು (ಜಿಆರ್‌ಎಂ) ಏಪ್ರಿಲ್-ಜೂನ್ ಅವಧಿಯಲ್ಲಿ ಬ್ಯಾರೆಲ್‌ಗೆ 6.3 ಡಾಲರ್‌ಗೆ ಇಳಿದಿದೆ. ಹಿಂದಿನ ತ್ರೈಮಾಸಿಕದಲ್ಲಿ ಪ್ರತಿ ಬ್ಯಾರೆಲ್‌ಗೆ 8.9 ಡಾಲರ್‌ನಿಂದ ಭಾರೀ ಪ್ರಮಾಣದಲ್ಲಿ ಕುಸಿತ ಕಂಡಿದೆ.

ರಿಲಯನ್ಸ್ ಇಂಡಸ್ಟ್ರೀಸ್ ಷೇರುಗಳು ಕಳೆದ ಕೆಲವು ವಾರಗಳಿಂದ ಹಲವಾರು ದಾಖಲೆಗಳನ್ನು ಮುರಿದಿವೆ. ಗುರುವಾರ ಮುಕ್ತಾಯದ ಬೆಲೆಯಲ್ಲಿ, ರಿಲಯನ್ಸ್ ಇಂಡಸ್ಟ್ರೀಸ್ 13.59 ಲಕ್ಷ ಕೋಟಿ ರೂ.ಗಳ ಮಾರುಕಟ್ಟೆ ಬಂಡವಾಳೀಕರಣ (ಎಂ-ಕ್ಯಾಪ್) ಹೊಂದಿರುವ ದೇಶದ ಅತ್ಯಮೂಲ್ಯ ಕಂಪನಿಯಾಗಿ ಉಳಿದಿದೆ.

English summary
Reliance Industries shares declined nearly 2 per cent in early trade on Friday, a day after RIL reported a 31 per cent jump in net profit to Rs 13,233 crore in the April-June period.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X