• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ದಿನಕ್ಕೆ 1 ಲಕ್ಷಕ್ಕೂ ಹೆಚ್ಚು ಪಿಪಿಇ ಕಿಟ್ ತಯಾರಿಕೆ, RIL ಗುರಿ

|

ನವದೆಹಲಿ, ಮೇ 31: ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (ಆರ್‌ ಐಎಲ್) ಹೊಸದಾಗಿ ಸ್ವಾಧೀನಪಡಿಸಿಕೊಂಡಿರುವ ಅಲೋಕ್ ಇಂಡಸ್ಟ್ರೀಸ್ ಅನ್ನು "ಸಂಪೂರ್ಣವಾಗಿ" ಪಿಪಿಇ ಉತ್ಪಾದನೆಗೆ ಮೀಸಲು ಇಡಲಿದೆ. ಇದಕ್ಕಾಗಿ ಹೊಸ ತಂತ್ರಜ್ಞಾನ, ಕಚ್ಚಾ ವಸ್ತುಗಳು, 10 ಸಾವಿರ ಟೈಲರ್‌ಗಳನ್ನು ಸಂಯೋಜಿಸಲು ಮುಂದಾಗಿದೆ.

   ಬಿವೈ ರಾಘವೇಂದ್ರ ಮಾಡಿದ ಕೆಲಸಕ್ಕೆ ನಟ ಅರುಣ್ ಸಾಗರ್ ಹೇಳಿದ್ದೇನು? | B Y Ragvendra | Arun Sagar

   COVID-19 ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುವ ಭಾರತದ ವೈದ್ಯರು, ದಾದಿಯರು, ವೈದ್ಯಕೀಯ ಸಿಬ್ಬಂದಿ ಮತ್ತು ಇತರ ಮುಂಚೂಣಿ ಕಾರ್ಮಿಕರನ್ನು ರಕ್ಷಿಸಲು ರಿಲಯನ್ಸ್ ಇಂಡಸ್ಟ್ರೀಸ್ ಗುಜರಾತ್‌ನ ಸಿಲ್ವಾಸ್ಸಾದಲ್ಲಿ ಹೊಸದಾಗಿ ಸ್ವಾಧೀನಪಡಿಸಿಕೊಂಡ ಉತ್ಪಾದನಾ ಸೌಲಭ್ಯಗಳನ್ನು ಬಳಸಿಕೊಂಡು ವೈಯಕ್ತಿಕ ರಕ್ಷಣಾ ಸಾಧನಗಳು (ಪಿಪಿಇ)ಗಳನ್ನು ತಯಾರಿಸುತ್ತಿದೆ.

   ಪಿಪಿಇ ಕಿಟ್‍ಗಳ ಉತ್ಪಾದನೆಗಾಗಿ ದಾದ್ರಾ ಘಟಕ ಪುನರಾರಂಭಿಸಿದ ಫಿಲಾಟೆಕ್ಸ್

   ಪಿಪಿಇ ವಸ್ತುಗಳ ತಯಾರಿಕೆಯನ್ನು ಸಕ್ರಿಯಗೊಳಿಸಲು ಆರ್‌ ಐಎಲ್ ತ್ವರಿತವಾಗಿ ಸ್ಥಾವರ ಮತ್ತು ಪ್ರಕ್ರಿಯೆಗಳನ್ನು ಮರು-ವಿನ್ಯಾಸಗೊಳಿಸಿದ್ದು ಮತ್ತು ಪಿಪಿಇ ಸೂಟ್‌ಗಳನ್ನು ಜೋಡಿಸಲು ಸುಮಾರು 10,000 ಜನರ ಹೊಸ ತಾಂತ್ರಿಕವಾಗಿ ನಿಪುಣರಾಗಿರುವ ಟೈಲರ್‌ಗಳನ್ನು ನಿಯೋಜಿಸಿದೆ.

   ಪಿಪಿಇ ಕಿಟ್ ಉತ್ಪಾದನೆ ಆರಂಭಿಸಿದ ನೈಋತ್ಯ ರೈಲ್ವೆ

   ಉತ್ಪಾದನೆಯು ಏಪ್ರಿಲ್ ಮಧ್ಯದಲ್ಲಿ ಪ್ರಾರಂಭವಾಗಿದ್ದು, ಈಗ ತ್ವರಿತಗತಿಯಲ್ಲಿ ದಿನಕ್ಕೆ 1 ಲಕ್ಷಕ್ಕೂ ಹೆಚ್ಚು ಪಿಪಿಇ ಉತ್ಪಾದಿಸುವ ದಿಸೆಯಲ್ಲಿ ಸಾಗುತ್ತಿದೆ. ಇದು ಭಾರತದ ದೈನಂದಿನ ಪಿಪಿಇ ಉತ್ಪಾದನೆಯ ಗಮನಾರ್ಹ ಪ್ರಮಾಣವನ್ನು ಹೆಚ್ಚಿಸಲಿದೆ.

    ದೇಶೀಯ ಉತ್ಪಾದನೆಗಾಗಿ ರಾಷ್ಟ್ರೀಯ ಕರೆ

   ದೇಶೀಯ ಉತ್ಪಾದನೆಗಾಗಿ ರಾಷ್ಟ್ರೀಯ ಕರೆ

   COVID ನಿರ್ವಹಣೆಗೆ ದೇಶೀಯ ಉತ್ಪಾದನೆಗಾಗಿ ರಾಷ್ಟ್ರೀಯ ಕರೆಗೆ ಪ್ರತಿಕ್ರಿಯೆಯಾಗಿ ಭಾರತದಲ್ಲಿ ಉತ್ಪಾದನೆಯು ಏಪ್ರಿಲ್ ಮಧ್ಯದಿಂದ ಹೆಚ್ಚಾಗಲು ಪ್ರಾರಂಭವಾಗಿದ್ದು, ಇಲ್ಲಿಯವರೆಗೆ ಭಾರತ ಅಗತ್ಯವಿರುವ ಹೆಚ್ಚಿನ ಪಿಪಿಇಯನ್ನು ಆಮದು ಮಾಡಿಕೊಳ್ಳುತ್ತಿತ್ತು.

   ಪಿಪಿಇಯ ಬೆಲೆಯನ್ನು ಸುಮಾರು 650 ರೂ.ಗೆ ಇಳಿಸಲು ರಿಲಯನ್ಸ್ ಯಶಸ್ವಿಯಾಗಿದೆ, ಭಾರತವು ಈ ಹಿಂದೆ ಪ್ರತಿ ಪಿಪಿಇಗೆ 2,000 ರೂ.ಗಳನ್ನ ನೀಡುತ್ತಿತ್ತು, ಸದ್ಯ ಪಿಪಿಇಯ ಬೆಲೆಯಲ್ಲಿ ಗಮನಾರ್ಹ ಕುಸಿತವಾಗಿದೆ.

    ಪಿಪಿಇ ಕವರಲ್ ಸೂಟ್‌ ತಯಾರಿ

   ಪಿಪಿಇ ಕವರಲ್ ಸೂಟ್‌ ತಯಾರಿ

   ಆರ್‌ಐಎಲ್‌ನಿಂದ ಉತ್ತಮ ಗುಣಮಟ್ಟದ ಮತ್ತು ಕಡಿಮೆ ಬೆಲೆಯ ಪಿಪಿಇಗಳ ಲಭ್ಯತೆಯು ಸಿಒವಿಐಡಿ ತುರ್ತು ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಭಾರತದ ಪರಿಣಾಮಕಾರಿತ್ವವನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ ಎಂದು ನಿರೀಕ್ಷಿಸಲಾಗಿದೆ.

   ಪಿಪಿಇ ಕಿಟ್ ಉತ್ಪಾದನೆ; ದೇಶಕ್ಕೆ ಮಾದರಿಯಾದ ಬೆಂಗಳೂರು

   ಸಿಲ್ವಾಸ್ಸಾದಲ್ಲಿ ಪಿಪಿಇ ಕವರಲ್ ಸೂಟ್‌ಗಳನ್ನು (PPE coverall suits) ತಯಾರಿಸುತ್ತಿದೆ, ಇದನ್ನು ಕವರಲ್ ಹೆಮ್ಸ್ ಅನ್ನು ಆಂಟಿ-ಮೈಕ್ರೋಬಿಯಲ್ ಟೇಪ್ನಿಂದ ಮುಚ್ಚಲಾಗಿರುತ್ತದೆ, ಇವು ಸಿಂಗಲ್ ಪೀಸ್ ಜಿಪ್-ಅಪ್ ಸೂಟ್‌ಗಳಾಗಿವೆ ಮತ್ತು ಸಂಪೂರ್ಣ ರಕ್ಷಣೆ ನೀಡುತ್ತದೆ.

    ಕಡಿಮೆ ತೂಕದ ಪಿಪಿಇ ಹಾಗೂ ಫೇಸ್ ಶೀಲ್ಡ್

   ಕಡಿಮೆ ತೂಕದ ಪಿಪಿಇ ಹಾಗೂ ಫೇಸ್ ಶೀಲ್ಡ್

   ಆರ್‌ ಐಎಲ್ ಹೆಚ್ಚಿನ ದರ್ಜೆಯ ಪಾಲಿಪ್ರೊಪಿಲೀನ್ ಅನ್ನು ಬಳಸುತ್ತಿದ್ದು, ಇದರಿಂದಾಗಿ ಕಡಿಮೆ ತೂಕದ ಅಪಾರದರ್ಶಕತೆಯನ್ನು ನೀಡುವ ಸಾಧನಗಳನ್ನು ಉತ್ಪಾದಿಸುತ್ತದೆ. ಪಿಪಿಇ ಸೂಟ್‌ನಲ್ಲಿ ಕವರಲ್‌ಗಳು, ಕೈಗವಸುಗಳು, ಶೂ ಕವರ್‌ಗಳು, ಮಾಸ್ಕ್-ಥ್ರೀ ಪ್ಲೈ ಅಥವಾ ಎನ್ 95, ಹೆಡ್ ಗೇರ್ ಮತ್ತು ಫೇಸ್ ಶೀಲ್ಡ್ ಇರುತ್ತದೆ.

    ವಿಶ್ವ ಆರೋಗ್ಯ ಸಂಸ್ಥೆ ಮಾರ್ಗಸೂಚಿ ಅಳವಡಿಕೆ

   ವಿಶ್ವ ಆರೋಗ್ಯ ಸಂಸ್ಥೆ ಮಾರ್ಗಸೂಚಿ ಅಳವಡಿಕೆ

   ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ ಒ) ಪ್ರಕಾರ, ರಕ್ಷಣಾ ಸಾಧನಗಳು ಆರೋಗ್ಯ ಕಾರ್ಯಕರ್ತರನ್ನು ಅಥವಾ ಯಾವುದೇ ಸೋಂಕಿಗೆ ಒಳಗಾಗಿರುವ ಇತರ ವ್ಯಕ್ತಿಗಳನ್ನು ರಕ್ಷಿಸಲು ಮುಂದಾಗುವವರಿಗೆಯೇ ವಿನ್ಯಾಸಗೊಳಿಸಲಾದ ಉಡುಪುಗಳಾಗಿದೆ.

   ಮಹಾಮಾರಿ ಕೋವಿಡ್-19 ಕರ್ತವ್ಯದಲ್ಲಿರುವ ಪೊಲೀಸರಿಗೆ ಪಿ.ಪಿ.ಇ ಕಿಟ್ ನೀಡಲು ಸೂಚನೆ

   ಇವು ಸಾಮಾನ್ಯವಾಗಿ ಪ್ರಮಾಣಿತ ಮುನ್ನೆಚ್ಚರಿಕೆಗಳನ್ನು ಒಳಗೊಂಡಿರುತ್ತವೆ ಈ ಸೂಟ್‌ನಲ್ಲಿ. ಮುಖದ ರಕ್ಷಣೆಗೆ ಕನ್ನಡಕಗಳು ಮತ್ತು ಮುಖವಾಡ ಅಥವಾ ಫೇಸ್‌ಶೀಲ್ಡ್, ಕೈಗವಸುಗಳು, ಗೌನ್ ಅಥವಾ ಕವರಲ್, ಹೆಡ್ ಕವರ್, ರಬ್ಬರ್ ಬೂಟುಗಳನ್ನು ಒಳಗೊಂಡಿರುತ್ತದೆ.

   English summary
   Reliance Industries has converted its newly acquired textiles and apparel fabrics maker Alok Industries into a PPE manufacturer, helping produce COVID-19 protective gears.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X