ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎರಿಕ್ಸನ್‌ಗೆ ಸಾಲ ಹಿಂದಿರುಗಿಸಲು ಅನಿಲ್ ಅಂಬಾನಿ ಬಳಿ ಇರುವ ಆಯ್ಕೆಗಳೇನು?

|
Google Oneindia Kannada News

ನವದೆಹಲಿ, ಫೆಬ್ರವರಿ 22: ಸ್ವೀಡನ್ ಮೂಲದ ಎರಿಕ್ಸನ್ ಕಂಪೆನಿಗೆ ಬಾಕಿ ಇರುವ ಮೊತ್ತವನ್ನು ಪಾವತಿಸದೆ ಇದ್ದಲ್ಲಿ ಶಿಕ್ಷೆಗೆ ಗುರಿಯಾಗಬೇಕಾದ ಸಂಕಷ್ಟಕ್ಕೆ ಸಿಲುಕಿರುವ ಉದ್ಯಮಿ ಅನಿಲ್ ಅಂಬಾನಿ, ಅದಕ್ಕಾಗಿ ಹಣ ಹೊಂದಿಸಲು ವಿವಿಧ ಮಾರ್ಗಗಳನ್ನು ಹುಡುಕುತ್ತಿದ್ದಾರೆ.

ಸಾಲದ ಮರುಪಾವತಿಗೆ ಸಹೋದರ ಕಂಪೆನಿಯಿಂದ ಬಾಕಿ ಹಣ ವಸೂಲಿಗೆ ಹಾಗೂ ರಿಯಲ್ ಎಸ್ಟೇಟ್ ಸ್ವತ್ತುಗಳ ಮಾರಾಟದಿಂದ ಹಣ ಒಟ್ಟುಗೂಡಿಸಲು ಅವರು ಪ್ರಯತ್ನಿಸುತ್ತಿದ್ದಾರೆ.

ಸಾಲ ಪಾವತಿಸಿ, ಇಲ್ಲ ಜೈಲಿಗೆ ಹೋಗಿ: ಅನಿಲ್ ಅಂಬಾನಿಗೆ ಸುಪ್ರೀಂ ಆದೇಶ ಸಾಲ ಪಾವತಿಸಿ, ಇಲ್ಲ ಜೈಲಿಗೆ ಹೋಗಿ: ಅನಿಲ್ ಅಂಬಾನಿಗೆ ಸುಪ್ರೀಂ ಆದೇಶ

ಸೋನಿ ಎರಿಕ್ಸನ್ ಕಂಪೆನಿಗೆ ನಾಲ್ಕು ವಾರಗಳ ಒಳಗಾಗಿ 450 ಕೋಟಿ ರೂಪಾಯಿ ಪಾವತಿಸಿ, ಇಲ್ಲವೇ ನ್ಯಾಯಾಂಗ ನಿಂದನೆಗಾಗಿ ಮೂರು ತಿಂಗಳು ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ಸುಪ್ರೀಂಕೋರ್ಟ್ ರಿಲಯನ್ಸ್ ಕಮ್ಯುನಿಕೇಷನ್ ಮತ್ತು ಅದರ ಇಬ್ಬರು ನಿರ್ದೇಶಕರಿಗೆ ಬುಧವಾರ ಎಚ್ಚರಿಕೆ ನೀಡಿತ್ತು.

ಸ್ವೀಡನ್‌ನ ದೂರಸಂಪರ್ಕ ಪರಿಕರಗಳ ತಯಾರಕ ಕಂಪೆನಿಯಾದ ಎರಿಕ್ಸನ್‌ಗೆ ಆರ್‌ಕಾಂ ಒಟ್ಟಾರೆ 571 ಕೋಟಿ ರೂಪಾಯಿ ಪಾವತಿಸಬೇಕಾಗಿದೆ. ಅದರಲ್ಲಿ 550 ಕೋಟಿ ರೂ ಅಸಲು ಮತ್ತು 21 ಕೋಟಿ ರೂ. ಬಡ್ಡಿ ಸೇರಿದೆ.

118 ಕೋಟಿ ಠೇವಣಿ

118 ಕೋಟಿ ಠೇವಣಿ

ಕಂಪೆನಿಯು ಈಗಾಗಲೇ 118 ಕೋಟಿ ರೂಪಾಯಿ ಠೇವಣಿಯನ್ನು ಸುಪ್ರೀಂಕೋರ್ಟ್‌ನಲ್ಲಿ ಇರಿಸಿದ್ದು, ಎರಿಕ್ಸನ್‌ಗೆ ಇನ್ನು 280 ಕೋಟಿ ರೂಪಾಯಿ ತೆರಿಗೆ ರೀಫಂಡ್‌ಗಳನ್ನು ಬಿಡುಗಡೆ ಮಾಡಲು ಸಾಲದಾತರಿಂದ ಅನುಮೋದನೆ ಕೋರಲಾಗಿದೆ ಎಂದು ಆರ್‌ಕಾಂ ಗುರುವಾರ ಬಿಡುಗಡೆ ಮಾಡಿದ್ದ ಹೇಳಿಕೆಯಲ್ಲಿ ತಿಳಿಸಿದೆ.

ಈಗಾಗಲೇ ಕಂಪೆನಿ ತಾನು ದಿವಾಳಿಯಾಗಿರುವುದಾಗಿ ಕೋರ್ಟ್‌ಗೆ ತಿಳಿಸಿದೆ. ಇದರಿಂದ ಕಂಪೆನಿ ಯಾವುದೇ ಈ ರೀತಿಯ ವ್ಯವಹಾರಗಳನ್ನು ಮಾಡಲು ಸಾಲದಾತರ ಅನುಮತಿ ಪಡೆಯುವುದು ಅಗತ್ಯ.

ರಿಯಲ್ ಎಸ್ಟೇಟ್ ಸ್ವತ್ತು ಮಾರಾಟ

ರಿಯಲ್ ಎಸ್ಟೇಟ್ ಸ್ವತ್ತು ಮಾರಾಟ

ಉಳಿದ ಬಾಕಿ ಮೊತ್ತದ ಹಣವನ್ನು ಹೊಂದಿಸಲು ಕಂಪೆನಿಯು ಚೆನ್ನೈ ಮತ್ತು ಕೋಲ್ಕತಾದಲ್ಲಿರುವ ತನ್ನ ರಿಯಲ್ ಎಸ್ಟೇಟ್ ಸ್ವತ್ತುಗಳನ್ನು ಮಾರಾಟ ಮಾಡಲು ಅನಿಲ್ ಅಂಬಾನಿ ಅವರು ಉದ್ದೇಶಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಎರಿಕ್ಸನ್ ಗೆ ಬಾಕಿ : ಅನಿಲ್ ಅಂಬಾನಿಗೆ ಸುಪ್ರೀಂನಿಂದ ನೋಟಿಸ್ಎರಿಕ್ಸನ್ ಗೆ ಬಾಕಿ : ಅನಿಲ್ ಅಂಬಾನಿಗೆ ಸುಪ್ರೀಂನಿಂದ ನೋಟಿಸ್

ಅಣ್ಣನಿಂದ ಹಣ ಬಂದರೆ ಬಚಾವ್

ಅಣ್ಣನಿಂದ ಹಣ ಬಂದರೆ ಬಚಾವ್

ತಮ್ಮ ಅಣ್ಣ ಮತ್ತು ಏಷ್ಯಾದ ಶ್ರೀಮಂತ ವ್ಯಕ್ತಿ ಮುಕೇಶ್ ಅಂಬಾನಿ ಮಾಲೀಕತ್ವದ ರಿಲಯನ್ಸ್ ಜಿಯೋ, ಆರ್‌ಕಾಂನಿಂದ ಪಡೆದುಕೊಂಡ ಫೈಬರ್ ಸೌಲಭ್ಯ ಪಡೆದುಕೊಂಡಿದ್ದರ ಮೊತ್ತವನ್ನು ಬೇಗನೆ ನೀಡುವಂತೆ ಅನಿಲ್ ಅಂಬಾನಿ ಮನವಿ ಮಾಡಲಿದ್ದಾರೆ.

ತನ್ನ ಆಪ್ಟಿಕಲ್ ಫೈಬರ್ ಮತ್ತು ಪೂರಕವಾದ ದೂರಸಂಪರ್ಕ ಸ್ವತ್ತುಗಳನ್ನು 5,000 ಕೋಟಿ ರೂಪಾಯಿಗೆ ಮಾರಾಟ ಮಾಡಲು ಆಗಸ್ಟ್‌ನಲ್ಲಿ ಒಪ್ಪಂದ ಮಾಡಿಕೊಳ್ಳಲಾಗಿತ್ತು ಎಂದು ಆರ್‌ಕಾಂ ತಿಳಿಸಿದೆ.

ಇದುವರೆಗೂ ಜಿಯೋದಿಂದ 780 ಕೋಟಿ ರೂಪಾಯಿ ಮಾತ್ರ ಸಂದಾಯವಾಗಿದೆ. ಹೀಗಾಗಿ ಬಾಕಿ ಇರುವ ಮೊತ್ತವನ್ನು ತ್ವರಿತವಾಗಿ ಪಾವತಿ ಮಾಡುವಂತೆ ಕೋರಲಾಗುವುದು ಎಂದು ಮೂಲಗಳು ತಿಳಿಸಿವೆ.

ಕಂಪೆನಿಗಳ ಭಾಗಗಳ ಮಾರಾಟ

ಕಂಪೆನಿಗಳ ಭಾಗಗಳ ಮಾರಾಟ

ರಿಲಯನ್ಸ್ ಪವರ್ ಸಂಸ್ಥೆಯ ಭಾಗವನ್ನು ಮಾರಾಟ ಮಾಡಲು ಚಿಂತನೆ ನಡೆಸಿರುವುದಾಗಿ ರಿಲಯನ್ಸ್ ಸಮೂಹ ವಾರದ ಆರಂಭದಲ್ಲಿ ತಿಳಿಸಿತ್ತು. ಅಲ್ಲದೆ, ರಿಲಯನ್ಸ್ ನಿಪ್ಪೊನ್ ಲೈಫ್ ಇನ್ಶೂರೆನ್ಸ್‌ನಲ್ಲಿನ ಶೇ 42ರಷ್ಟು ಷೇರುಗಳನ್ನು ಕೂಡ ಮಾರಾಟ ಮಾಡಿ ಸಾಲ ತೀರಿಸುವುದಾಗಿ ಕಂಪೆನಿ ಹೇಳಿತ್ತು.

'ಬಾಕಿ ಮೊತ್ತ ಪಾವತಿಸದಿದ್ದರೆ ಅನಿಲ್ ಅಂಬಾನಿಯನ್ನು ಜೈಲಿಗೆ ಕಳಿಸಿ' 'ಬಾಕಿ ಮೊತ್ತ ಪಾವತಿಸದಿದ್ದರೆ ಅನಿಲ್ ಅಂಬಾನಿಯನ್ನು ಜೈಲಿಗೆ ಕಳಿಸಿ'

English summary
Anil Ambani is planning to sale real estate assets and to ask his brother Mukesh Ambani to payments owed for fibre assets acquired from Rcom to pay his owes of Swedish company Ericsson.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X