ಬ್ಯಾಂಕ್ ಗ್ರಾಹಕರಿಗೆ ಆತಂಕ ತರುವ ವಾಟ್ಸಪ್ ಸಂದೇಶ

Posted By:
Subscribe to Oneindia Kannada

ಬೆಂಗಳೂರು, ಆಗಸ್ಟ್ 07:ಬ್ಯಾಂಕ್ ಗ್ರಾಹಕರಲ್ಲಿ ಆತಂಕ ಹುಟ್ಟಿಸುವಂಥ ಮೆಸೇಜ್ ಒಂದು ವಾಟ್ಸಾಪ್ ನಲ್ಲಿ ಮತ್ತೊಮ್ಮೆ ಹರಿದಾಡುತ್ತಿದೆ. ಭಾರತೀಯ ರಿಸರ್ವ್ ಬ್ಯಾಂಕಿನ ಅಧೀನಕ್ಕೆ ಒಳಪಡುವ 9 ಬ್ಯಾಂಕುಗಳು ಮುಚ್ಚುತ್ತಿವೆ, ಬೇಗನೇ ಕ್ಯಾಶ್ ಪಡೆದುಕೊಳ್ಳಿ ಎಂಬ ಸಂದೇಶ ಕಳೆದ ತಿಂಗಳಿನಿಂದ ಎಲ್ಲೆಡೆ ಹಬ್ಬುತ್ತಿದೆ.

ನಾಮಕ್ಕೆ ಹಣೆ, ಟೋಪಿಗೆ ತಲೆ ಸದಾ ಸಿದ್ಧವಾಗಿರಲಿ!

ವಾಟ್ಸಪ್ ನಲ್ಲಿ ಸಂದೇಶ ಬಂದ ಕೂಡಲೇ ಈ ಬಗ್ಗೆ ಮಾಹಿತಿ ಕಲೆ ಹಾಕಿ 'ದಿ ಕ್ವಿಂಟ್' ವರದಿ ಮಾಡಿತ್ತು.ಸಾಮಾಜಿಕ ಜಾಲ ತಾಣಗಳಲ್ಲೂ ಈ ಬಗ್ಗೆ ಜಾಗೃತಿ ಮೂಡಿಸಲಾಗಿತ್ತು. ನಂತರ ಈ ಬಗ್ಗೆಆರ್ ಬಿಐ ಕೂಡಾ ಸ್ಪಷ್ಟನೆ ನೀಡಿ, ಈ ರೀತಿ ಯಾವುದೇ ಪ್ರಸ್ತಾವನೆ ಇಲ್ಲ, ಬ್ಯಾಂಕುಗಳ ವಿಲೀನ ಪ್ರಕ್ರಿಯೆ ಬಿಟ್ಟರೆ, ಬ್ಯಾಂಕುಗಳ ಮುಚ್ಚುವ ಪ್ರಕ್ರಿಯೆ ನಡೆದಿಲ್ಲ ಎಂದು ಹೇಳಲಾಗಿತ್ತು.

Whatsapp Message chaos ː RBI Won’t Shut Down Your Bank & You Won’t Lose Money

ಆತಂಕ ತಂದ ಸಂದೇಶ:ಪ್ರಮುಖ 9 ಬ್ಯಾಂಕ್ ಗಳನ್ನು ಆರ್ ಬಿ ಐ ಮುಚ್ಚುತ್ತಿದೆ ಅನ್ನೋ ಹುಸಿ ಸಂದೇಶವೊಂದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿತ್ತು. ಈಗಲೂ ಈ ಸುದ್ದಿ ಹಬ್ಬುತ್ತಿದೆ. ಆದರೆ, ಇದು ಸತ್ಯಕ್ಕೆ ದೂರವಾಗಿದೆ. ಜುಲೈ ತಿಂಗಳಿನಲ್ಲೇ ಟ್ವಿಟ್ಟರ್ ನಲ್ಲಿ ಈ ಬಗ್ಗೆ ಅನೇಕರಿಂದ ಸ್ಪಷ್ಟನೆ ಸಿಕ್ಕಿತ್ತು.

RBI cuts Repo rates upto 6% | Loans may get cheaper now | Oneindia Kannada

ಇದೊಂದು ಸುಳ್ಳು ಸಂದೇಶವಾಗಿದ್ದು, ಜನರು ಆತಂಕ ಪಡುವ ಅಗತ್ಯವಿಲ್ಲ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಯಾವುದೇ ಬ್ಯಾಂಕ್ ಗಳನ್ನು ಮುಚ್ಚುತ್ತಿಲ್ಲ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಸ್ಪಷ್ಟಪಡಿಸಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
A WhatsApp message has been doing the rounds which lists nine banks that the Reserve Bank of India will apparently shut down.However, this piece of “news” turns out to be fake.
Please Wait while comments are loading...