ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆರ್ ಬಿಐ ಗವರ್ನರ್ ಗೆ ಬೆದರಿಕೆ ಒಡ್ಡಿದ್ದ ವ್ಯಕ್ತಿಯ ಬಂಧನ

ಭಾರತೀಯ ರಿಸರ್ವ್ ಬ್ಯಾಂಕಿನ ಗವರ್ನರ್ ಊರ್ಜಿತ್ ಪಟೇಲ್ ಅವರನ್ನು ತಮ್ಮ ಹುದ್ದೆಯಿಂದ ಕೆಳಗಿಳಿಯುವಂತೆ ಬೆದರಿಕೆ ಒಡ್ಡಿದ್ದ ವ್ಯಕ್ತಿಯನ್ನು ನಾಗ್ಪುರದಲ್ಲಿ ಬಂಧಿಸಲಾಗಿದೆ ಎಂದು ಅವರಿಗೆ ಬೆದರಿಕೆ ಹಾಕಿದ್ದ ವ್ಯಕ್ತಿಯನ್ನು ಬಂಧಿಸಲಾಗಿದೆ.

By Mahesh
|
Google Oneindia Kannada News

ಮುಂಬೈ, ಮಾರ್ಚ್ 05: ಭಾರತೀಯ ರಿಸರ್ವ್ ಬ್ಯಾಂಕಿನ ಗವರ್ನರ್ ಊರ್ಜಿತ್ ಪಟೇಲ್ ಅವರನ್ನು ತಮ್ಮ ಹುದ್ದೆಯಿಂದ ಕೆಳಗಿಳಿಯುವಂತೆ ಬೆದರಿಕೆ ಒಡ್ಡಿದ್ದ ವ್ಯಕ್ತಿಯನ್ನು ನಾಗ್ಪುರದಲ್ಲಿ ಬಂಧಿಸಲಾಗಿದೆ ಎಂದು ಅವರಿಗೆ ಬೆದರಿಕೆ ಹಾಕಿದ್ದ ವ್ಯಕ್ತಿಯೊಬ್ಬನನ್ನು ಪೊಲೀಸರು ನಾಗ್ಪುರದಲ್ಲಿ ಬಂಧಿಸಿದ್ದಾರೆ.

ಆರ್ ಬಿಐ ಗವರ್ನರ್ ಊರ್ಜಿತ್ ಪಟೇಲ್ ಅವರಿಗೆ ಫೆಬ್ರವರಿ 23ರಂದು ಇಮೇಲ್ ಮೂಲಕ ವ್ಯಕ್ತಿಯೊಬ್ಬ ಬೆದರಿಕೆ ಒಡ್ಡಿದ್ದ. ಈ ಕೂಡಲೇ ನೀವು ನ ಹುದ್ದೆಯಿಂದ ಕೆಳಗಿಳಿಯಬೇಕು ಇಲ್ಲದಿದ್ದರೆ ಪರಿಣಾಮ ನೆಟ್ಟಗಿರುವುದಿಲ್ಲ. ನಿಮ್ಮ ಕುಟುಂಬಸ್ಥರಿಗೂ ಈ ಬೆದರಿಕೆ ಅನ್ವಯವಾಗಲಿದೆ ಎಂದು ಇಮೇಲ್ ಕಳುಹಿಸಿದ್ದ 37 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ. ಈ ಬೆದರಿಕೆ ಪತ್ರ ಬಂದ ಕೂಡಲೇ ಊರ್ಜಿತ್ ಅವರು ಮುಂಬೈನ ಸೈಬರ್ ಪೊಲೀಸ್ ವಿಭಾಗಕ್ಕೆ ದೂರು ನೀಡಿದ್ದರು.

RBI governor gets threat mail, sender held in Nagpur

ಮುಂಬೈ ಪೊಲೀಸ್ ಇಲಾಖೆಯ ಸೈಬರ್ ವಿಭಾಗದವರಿಗೆ ತನಿಖೆ ವೇಳೆಯಲ್ಲಿ ಈ ಇ ಮೇಲ್ ನಾಗ್ಪುರದ ಸೈಬರ್ ಕೆಫೆಯಿಂದ ಬಂದಿದ್ದು ಎಂದು ತಿಳಿದು ಬಂದಿದೆ. ತಕ್ಷಣವೇ ಕಾರ್ಯಾಚರಣೆ ನಡೆಸಿ ವೈಭವ್ ಬದ್ದಾಲ್ ವಾರ್ ಎಂಬ ಹೆಸರಿನ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಸೈಬರ್ ಸೆಲ್ ನ ಡಿಸಿಪಿ ಅಖಿಲೇಶ್ ಸಿಂಗ್ ಹೇಳಿದರು.

ಐಪಿಸಿ ಸೆಕ್ಷನ್ 506 (2) ಅನ್ವಯ ಪ್ರಕರಣ ದಾಖಲಾಗಿದ್ದು, ಆರೋಪಿ ವೈಭವ್ ನನ್ನು ನಾಗ್ಪುರ ಕೋರ್ಟಿನ ಮುಂಚೆ ಹಾಜರು ಪಡಿಸಲಾಗಿದ್ದು, ಮಾರ್ಚ್ 06ರ ತನಕ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ವಿದೇಶದ ವಿವಿಯೊಂದರಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಆರೋಪಿ ಸದ್ಯ ನಿರುದ್ಯೋಗಿಯಾಗಿದ್ದಾನೆ. ಬಹುಶಃ ಉದ್ಯೋಗ ಸಿಗದ ಕಾರಣ, ಹತಾಶೆಗೊಂಡು ಈ ರೀತಿ ಕೃತ್ಯ ಎಸಗಿರಬಹುದು ಎಂದು ಶಂಕಿಸಲಾಗಿದೆ. (ಪಿಟಿಐ)

English summary
Reserve Bank of India Governor Urjit Patel allegedly received a threat mail asking him to quit the job from a 37-year-old man, who has been arrested from Nagpur, police said on Sunday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X