ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೆಪೋ ದರ ಇಳಿಕೆ: ಸಾಲ ಮಾಡಿ ತುಪ್ಪ ತಿನ್ನಲಡ್ಡಿಯಿಲ್ಲ!

By Mahesh
|
Google Oneindia Kannada News

ಮುಂಬೈ, ಜ.15: ಅರ್ಥ ವ್ಯವಸ್ಥೆಯ ಉತ್ತೇಜನ, ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಸ್ಥಿರತೆ, ಹಣದುಬ್ಬರ ನಿಯಂತ್ರಣ ಹಿನ್ನೆಲೆಯಲ್ಲಿ ಆರ್ ಬಿಐ ಗವರ್ನರ್ ರಘುರಾಮ್ ಜಿ ರಾಜನ್ ಅವರು ಹೊಸ ಹಣಕಾಸು ನೀತಿ ಪ್ರಕಟಿಸುವುದಕ್ಕೂ ಮುನ್ನವೇ ಸಂಕ್ರಾಂತಿ ಗಿಫ್ಟ್ ನೀಡಿದ್ದಾರೆ. ಬ್ಯಾಂಕ್ ಲೋನ್ ಪಡೆಯುವವರು ಬಡ್ಡಿದರ ಇಳಿಕೆಯ ನಿರೀಕ್ಷೆ ಇಟ್ಟುಕೊಳ್ಳಬಹುದು.

ಫೆ.3ರಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಹಣಕಾಸು ನೀತಿ ಪ್ರಕಟಿಸಲಿದೆ. ಇದಕ್ಕೂ ಮುನ್ನ ಸಾರ್ವಜನಿಕರಿಗೆ ಹಿತಕರ ಸುದ್ದಿ ನೀಡಿದ್ದು, ರೆಪೋ ದರ 25 ಮೂಲಾಂಶ(bps) ಶೇ 7.75ಕ್ಕೆ ಇಳಿಕೆ ಮಾಡಲಾಗಿದೆ. ಶೇ 8ರಷ್ಟಿದ್ದ ರೆಪೋ ದರವನ್ನು ತಕ್ಷಣದಿಂದ ಜಾರಿಗೆ ಬರುವಂತೆ ಇಳಿಸಲಾಗಿದೆ ಎಂದು ಆರ್ ಬಿಐ ಗುರುವಾರ ಪ್ರಕಟಿಸಿದೆ. ನಗದು ಮೀಸಲು ಅನುಪಾತ(ಸಿಆರ್ ಆರ್) ಶೇ.4ರ ಪ್ರಮಾಣದಲ್ಲೇ ಇದೆ ಯಾವುದೇ ಬದಲಾವಣೆ ಮಾಡುವ ನಿರೀಕ್ಷೆ ಸದ್ಯಕ್ಕಿಲ್ಲ.

ಗಾಹ್ರಕ ದರ ಸ್ಯೂಚಂಕ(ಸಿಪಿಐ) ಶೇ 5ಕ್ಕೆ ಕುಸಿದಿದೆ. ಜನವರಿ 2016ರ ತನಕ ಹಣದುಬ್ಬರ ಶೇ 6ರಂತೆ ಉಳಿಯುವ ನಿರೀಕ್ಷೆಯಿದೆ.

RBI Cuts Repo Rates by 25 Basis Points; Interest Rates in Economy Set to Fall

ಬ್ಯಾಂಕುಗಳ ಗೃಹ ಹಾಗೂ ಕಾರು ಸಾಲ ಕೈಗುಟುಕುವಂತಾಗಲಿದೆ. ಆದರೆ, ಎಸ್ ಬಿಐ ಹಾಗೂ ಎಚ್ ಡಿಎಫ್ ಸಿ ಸೇರಿದಂತೆ ಪ್ರಮುಖ ಬ್ಯಾಂಕ್ ಗಳು ಸಾಲ ಬಡ್ಡಿದರ ಬಗ್ಗೆ ಯಾವುದೇ ಪ್ರತಿಕ್ರಿಯೆ ತಕ್ಷಣಕ್ಕೆ ನೀಡಿಲ್ಲ. ಯುನೈಟೆಡ್ ಬ್ಯಾಂಕ್ ಮಾತ್ರ 25 ಮುಲಾಂಶ ಕಡಿತ ಘೋಷಿಸಿದೆ. ಇತರೆ ಬ್ಯಾಂಕುಗಳು ಇದೇ ಹಾದಿ ಹಿಡಿದರೆ ಗ್ರಾಹಕರು ಸಾಲದ ಬಡ್ಡಿದರ ಇಳಿಕೆ ನಿರೀಕ್ಷಿಸಬಹುದು.

ನಿಫ್ಟಿಯಲ್ಲಿ ಸೂಚ್ಯಂಕ ಏರುತ್ತಲೇ ಇದೆ. ಬ್ಯಾಂಕಿಂಗ್ ಕ್ಷೇತ್ರದ ಷೇರುಗಳು ಸಂಕ್ರಾಂತಿ ಹಬ್ಬದ ಸಂಭ್ರಮವನ್ನು ಆಚರಿಸುತ್ತಿವೆ.

ಮಾರ್ಜಿನಲ್ ಸ್ಟಾಡಿಂಗ್ ಫೆಸಿಲಿಟಿ(ಎಂಎಸ್ ಎಫ್) ದರ ಹಾಗೂ ಬ್ಯಾಂಕ್ ದರ ಶೇ 9.5ರಷ್ಟಿತ್ತು ಈಗ ಶೇ 8.75ಕ್ಕೆ ಇಳಿದಿದೆ. ರೆಪೋದರ ಆಧಾರಿಸಿ ಬ್ಯಾಂಕುಗಳು ಈಗ ಶೇ 8.75ರಂತೆ ಆರ್ ಬಿಅನಿಂದ ಹಣ ಪಡೆದುಕೊಳ್ಳಲಿವೆ.

ಸಿಆರ್ ಅರ್: ಬ್ಯಾಂಕುಗಳಲ್ಲಿರುವ ಠೇವಣಿಗೆ ಅನುಗುಣವಾಗಿ ಆರ್ ಬಿಐ ನಲ್ಲಿ ಇಡಬೇಕಾದ ಹಣದ ಮೊತ್ತ
ರೆಪೋ ದರ: ಆರ್ ಬಿಐನಿಂದ ಬ್ಯಾಂಕುಗಳ ಹಣ ಪಡೆಯುವ ದರ

English summary
The Reserve Bank of India (RBI) as promised in its previous Monetary Policy today cut interest rates outside the monetary policy. The RBI Cut interest rates by 25 basis points to 7.75 per cent from 8 per cent. The RBI's stance was largely to do with a sharp drop in inflation in the last few months and falling crude prices.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X